ಬೈಕ್ ನಲ್ಲಿ‌ ತೆರಳುತ್ತಿದ್ದ ವೇಳೆ ತೆಂಗಿನಮರ ಬಿದ್ದು‌‌ಸಾವು

ಸಮಗ್ರ ನ್ಯೂಸ್: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಮೈಮೇಲೆ ತೆಂಗಿನ ಮರ ಬಿದ್ದ ಕಾರಣ ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಂಗಾಮಿ ಪೌರ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

Ad Widget ... ..

ಡೇವಿಡ್‌ ಮಾದರ್‌ (39) ಮೃತ ದುರ್ದೈವಿ. ಮಧ್ಯಾಹ್ನ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಅಕ್ಬರ್‌ ಗಲ್ಲಿಯಲ್ಲಿರುವ ಮನೆಯ ಸಮೀಪದಲ್ಲಿಯೇ ಇದ್ದ ಒಣಗಿದ ತೆಂಗಿನ ಮರವೊಂದು ಮುರಿದು ತಲೆಯ ಮೇಲೆ ಬಿದ್ದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Ad Widget

ಮಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *