Ad Widget .

ರಶ್ಮಿಕಾ ಬ್ಯೂಟಿಗೆ ಕ್ಲೀನ್ ಬೌಲ್ಡ್ ಆದ ಶುಭ್ಮನ್ ಗಿಲ್| ಆಕೆ ನನ್ನ ಕ್ರಶ್ ಎಂದ ಕ್ರಿಕೆಟ್ ತಾರೆ

ಸಮಗ್ರ ನ್ಯೂಸ್: ನ್ಯಾಷನಲ್‌ ಕ್ರಷ್‌, ಹೆಸರೇ ಸೂಚಿಸುವಂತೆ ರಶ್ಮಿಕಾ ಎಂದರೆ ಜನ ಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೆ ಕೂಡಾ ಬಹಳ ಇಷ್ಟ. ಕಳೆದ ವರ್ಷ ಟಾಲಿವುಡ್‌ ನಟ ಬಾಲಕೃಷ್ಣ, ತಮ್ಮ ಅನ್‌ಸ್ಟಾಪಬಲ್‌ ಶೋನಲ್ಲಿ ರಶ್ಮಿಕಾ ಎಂದರೆ ಬಹಳ ಇಷ್ಟ ಎಂದು ಹೇಳಿಕೊಂಡಿದ್ದರು. ಇದೀಗ ಭಾರತೀಯ ಕ್ರಿಕೆಟ್‌ ತಂಡದ ಯುವ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಕೂಡಾ ರಶ್ಮಿಕಾಗೆ ಬೌಲ್ಡ್‌ ಆಗಿದ್ದಾರಂತೆ.

Ad Widget . Ad Widget .

ಕಳೆದ ಕೆಲವು ದಿನಗಳಿಂದ ಈ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟಿಗರ ಹಾಗೂ ಸಿನಿಮಾ ತಾರೆಯರ ಪ್ರೀತಿ ಪ್ರೇಮ ಪ್ರಣಯ ಇಂದು ನಿನ್ನೆಯದಲ್ಲ. ಸಾಕಷ್ಟು ಜೋಡಿಗಳು ಪ್ರೀತಿಸಿ ಮದುವೆ ಆಗಿದ್ದಾರೆ. ಈ ನಡುವೆ ಶುಭ್ಮನ್‌ ಗಿಲ್‌, ರಶ್ಮಿಕಾ ನನ್ನ ಕ್ರಷ್‌ ಎಂದು ಹೇಳಿ ಆಶ್ಚರ್ಯ ಮೂಡಿಸಿದ್ದಾರೆ.

Ad Widget . Ad Widget .

ಶುಭ್ಮನ್‌ ಗಿಲ್‌ ಹೆಸರು ಬಹಳ ದಿನಗಳಿಂದ ಸಚಿನ್‌ ತೆಂಡುಲ್ಕರ್‌ ಪುತ್ರಿ ಸಾರಾ ತೆಂಡುಲ್ಕರ್‌ ಜೊತೆ ಕೇಳಿ ಬರುತ್ತಿದೆ. ಇಬ್ಬರೂ ಶೀಘ್ರದಲ್ಲೇ ಮದುವೆ ಕೂಡಾ ಆಗಲಿದ್ದಾರೆ ಎಂಬ ಮಾತು ಹರಿದಾಡುತ್ತಲೇ ಇದೆ. ಇದರ ನಡುವೆ ಶುಭ್ಮನ್‌ ಗಿಲ್‌, ಮಾಧ್ಯಮಗಳ ಎದುರು ರಶ್ಮಿಕಾ ಮೇಲೆ ನನಗೆ ಕ್ರಷ್‌ ಆಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ವೈರಲ್‌ ಆಗುತ್ತಿದೆ. ಆದರೆ ರಶ್ಮಿಕಾ ಈ ವಿಚಾರವಾಗಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು. ಹಾಗೇ ಇದು ಕೇವಲ ಕ್ರಷ್‌ ಮಾತ್ರಾನಾ ಅಥವಾ ರಶ್ಮಿಕಾಗೆ ಮದುವೆ ಪ್ರಪೋಸ್‌ ಕೂಡಾ ಮಾಡಿದ್ದಾರೋ ಏನೋ ಮುಂದಿನ ದಿನಗಳಲ್ಲಿ ತಿಳಿಯಲಿದೆ.

Leave a Comment

Your email address will not be published. Required fields are marked *