Ad Widget .

ಕರಾವಳಿಯಲ್ಲಿ ಹೆಚ್ಚಾಗ್ತಿದೆ ತಾಪಮಾನ| ಎಚ್ಚರವಹಿಸಲು ಆರೋಗ್ಯ ಇಲಾಖೆ ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಮಂಗಳೂರಿನಲ್ಲಿ ಮಾ.3 ರಿಂದ 39 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾಗಿದೆ. ಇದು ದೇಶದಲ್ಲಿಯೇ ಅತ್ಯಧಿಕವಾಗಿದ್ದು, ವಾಡಿಕೆಗಿಂತ 3 ಡಿಗ್ರಿ ಸೆಲ್ಸಿಯಸ್‌ ಹೆಚ್ಚಳವಾಗಿದೆ.

Ad Widget . Ad Widget .

ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿದೆ. 2017ರಲ್ಲಿ 37.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದ್ದು ಮಾರ್ಚ್‌ ತಿಂಗಳ ಈವರೆಗಿನ ದಾಖಲೆಯಾಗಿದೆ. ಉಭಯ ಜಿಲ್ಲೆಗಳಲ್ಲಿ ದಿನವಿಡೀ ಸೆಕೆ ಮತ್ತು ಉರಿಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು.

Ad Widget . Ad Widget .

ಆರೋಗ್ಯ ಕಾಳಜಿ ಅಗತ್ಯ: ಹೆಚ್ಚುತ್ತಿರುವ ಬಿಸಿಲಿನ ಝಳ ದೇಹವನ್ನು ಸುಡುವಂತೆ ಮಾಡಲಿದೆ. ಜತೆಗೆ ಸುಟ್ಟ ಗಾಯಗಳೂ ಉಂಟಾಗಬಹುದು. ಇಂತಹ ಸೂರ್ಯನ ಕಿರಣ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಲಿದೆ. ಈ ಬಗ್ಗೆ ಗಮನಹರಿಸುವುದು ಅಗತ್ಯ.

ಹಿರಿಯ ನಾಗರಿಕರು, ಮಕ್ಕಳು, ರೋಗಿಗಳು, ಗರ್ಭಿಣಿಯರು ಮತ್ತು ಬಿಸಿಲಿನಲ್ಲಿ ದುಡಿಯುವವರು ಗಮನ ಹರಿಸುವುದು ಅಗತ್ಯ. ಇಂತಹ ಸಮಯದಲ್ಲಿ ಧಾರಾಳ ನೀರು ಕುಡಿಯವ ಮೂಲಕ ನಿರ್ಜಲೀಕರಣ ಸಮಸ್ಯೆ ತಡೆಗಟ್ಟಬೇಕು. ತಣ್ಣೀರನ್ನು ಕುಡಿಯಯವವರು ಅದರ ಶುದ್ಧತೆ ಬಗ್ಗೆ ಗಮನ ಹರಿಸಬೇಕು. ಬಿಸಿಲಿನಲ್ಲಿ ದುಡಿಯುವವರು ತಲೆಗೆ ಟೋಪಿ ಬಳಕೆ ಮಾಡಬೇಕು.

ಮಧ್ಯಾಹ್ನ ಹೊತ್ತು ರಸ್ತೆಗಳು ಖಾಲಿ: ಮಂಗಳೂರು ನಗರದಲ್ಲಿ ಮಧ್ಯಾಹ್ನವಾಗುತ್ತಿದ್ದಂತೆ ಬಿಸಿಲಿನ ಝಳದಿಂದ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗುತ್ತಿದೆ. ತೀವ್ರ ಸಖೆ, ಉರಿ ವಾತಾವರಣದಿಂದ ಜನರು ಮನೆಯಿಂದ ಹೊರಬರಲು ತ್ರಾಸಪಡುತ್ತಿರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *