ಪುತ್ತೂರು: ಎನ್ಐಎ ತಂಡ ಸಂಚರಿಸುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ| ಪಾಣಾಜೆ ಸೊಸೈಟಿ ಸಿಇಒ ದುರ್ಮರಣ

ಸಮಗ್ರ ನ್ಯೂಸ್: ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್.ಐ.ಎ) ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಾ.5 ರಂದು ನಡೆದಿದೆ.

Ad Widget ... ..

ಮೃತರನ್ನು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಬಿ. ಲಕ್ಷ್ಮಣ ನಾಯ್ಕ(50) ಎಂದು ಗುರುತಿಸಲಾಗಿದೆ.

Ad Widget

ಪೊಲೀಸ್ ವಾಹನ ಜಿಲ್ಲೆಯ ಡಿಆರ್​​ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್ಐಎ ವಹಿಸಿಕೊಂಡ ಬಳಿಕ ಸ್ಥಳೀಯ ಪೊಲೀಸ್ ವಾಹನಗಳಲ್ಲಿ ಎನ್ಐಎ ತಂಡ ದ.ಕ ಜಿಲ್ಲೆಯಲ್ಲಿ ತನಿಖೆ‌ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪುತ್ತೂರಿಗೆ ಮರಳುತ್ತಿರುವಾಗ ಈ‌ ಘಟನೆ ಸಂಭವಿಸಿದೆ.

Leave a Comment

Your email address will not be published. Required fields are marked *