Ad Widget .

ಸುಳ್ಯ: ಮನೆ ಕೆಲಸಕ್ಕೆ ಬಂದವರಿಂದಲೇ‌ ಮನೆಯವರ ಕೊಲೆಗೆ ಯತ್ನ| ಇಬ್ಬರು ಆರೋಪಿಗಳು ಅಂದರ್

ಸಮಗ್ರ ನ್ಯೂಸ್: ಮನೆ ಕೆಲಸಕ್ಕೆಂದು ಬಂದ ಇಬ್ಬರು ವ್ಯಕ್ತಿಗಳು ಮನೆಯನ್ನೇ ದರೋಡೆ ಮಾಡಿ ಮನೆಯವರನ್ನು ಕೊಲೆಗೈಯಲು ಯತ್ನಿಸಿದ ಘಟನೆ ಸುಳ್ಯ ತಾಲೂಕಿನ ಪಂಬೆತ್ತಾಡಿ ಗ್ರಾಮದ ಕರಿಕ್ಕಳ ಎಂಬಲ್ಲಿ‌ ನಡೆದಿದೆ.

Ad Widget . Ad Widget .

ಪಂಬೆತ್ತಾಡಿ‌ ಗ್ರಾಮದ ಕರಿಕ್ಕಳ ವಿಶ್ವನಾಥ ಮತ್ತು ಗಾಯತ್ರಿ ದಂಪತಿ ಮನೆಗೆ ಕೆಲಸಕ್ಕೆ ಬಂದವರು ಆಕ್ರಮಣ ನಡೆಸಿ ಕೊಲೆಗೆ ಯತ್ನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯತ್ರಿಯವರ ಕುತ್ತಿಗೆಗೆ ಇರಿದ ಗಾಯವಾಗಿದ್ದು ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

Ad Widget . Ad Widget .

ಮನೆ ಕೆಲಸಕ್ಕೆ ಬಂದಿದ್ದ ಸೈಫನ್ ಮತ್ತು ವರದರಾಜ್ ಬಂಧಿತರು. ಇವರಿಬ್ಬರು ಮನೆಯ ಮಹಡಿ ಮೇಲೆ ಏರಿ ಕೃತ್ಯ ಎಸಗಿದ್ದಾರೆ. ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಮನೆಯಲ್ಲಿ ಹಣವಿರುವ ವಿಚಾರ ಆರೋಪಿಗಳ ತಿಳಿದಿತ್ತು. ಮನೆಯವರನ್ನು ಮುಗಿಸಿ
ದರೋಡೆ ನಡೆಸುವ ಆರೋಪಿಗಳ ಯೋಜನೆ ಆಗಿತ್ತು ಎನ್ನಲಾಗಿದೆ.

ಸೈಫನ್ ಧರ್ಮಸ್ಥಳ ಹೊಸ ಬಸ್ ತಂಗುದಾಣ ಬಳಿ ನಿವಾಸಿಯಾಗಿದ್ದು, ವರದರಾಜ್ ಚಿತ್ರದುರ್ಗದ ಹಿರಿಯೂರು ನಿವಾಸಿ. ಇವರಿಬ್ಬರು ಕೆಲವು ತಿಂಗಳ ಹಿಂದೆಯಷ್ಟೇ ಮನೆ ಕೆಲಸಕ್ಕಾಗಿ ಬಂದಿದ್ದರು. ಘಟನೆ ವೇಳೆ ದಂಪತಿಗಳು ಜೋರಾಗಿ ಕೂಗಿಕೊಂಡ ಕಾರಣ ಆರೋಪಿಗಳಿಗೆ ಕೃತ್ಯ ಎಸಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಬಹುದೊಡ್ಡ ಅನಾಹುತ ತಪ್ಪಿದಂತಾಗಿದೆ.

Leave a Comment

Your email address will not be published. Required fields are marked *