Ad Widget .

ಮನೆಯಲ್ಲೇ ಮಾಡಿ ಮದ್ರಾಸ್ ಮಸಾಲ ಪಾಲ್

ಸಮಗ್ರ ನ್ಯೂಸ್: ಮಸಾಲ ಸಾಮಾಗ್ರಿಗಳನ್ನು ಬಳಸಿ ಮಾಡುವ ಮದ್ರಾಸ್ ಮಸಾಲ ಪಾಲ್ ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಅನಿಸುವ ಒಂದು ಪಾನೀಯ. ಒಮ್ಮೆ ಮನೆಯಲ್ಲಿ ಮಾಡಿ ಇದರ ರುಚಿ ಸವಿದು ನೋಡಿ.

Ad Widget . Ad Widget .

3 ಕಪ್-ಹಾಲು, 3 ಟೇಬಲ್ ಸ್ಪೂನ್-ಸಕ್ಕರೆ, ¼ ಕಪ್-ಬಾದಾಮಿ, ½ ಟೀ ಸ್ಪೂನ್-ಏಲಕ್ಕಿ ಪುಡಿ, 3-ಲವಂಗ, 1 ಪೀಸ್-ಚಕ್ಕೆ, 1 ಟೇಬಲ್ ಸ್ಪೂನ್-ಪಿಸ್ತಾ, ಸ್ವಲ್ಪ ಕೇಸರಿದಳ.

Ad Widget . Ad Widget .

ಬಾದಾಮಿಯನ್ನು ಅರ್ಧ ಗಂಟೆಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಟ್ಟು ಅದರ ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಚಕ್ಕೆ ಪೀಸ್, ಏಲಕ್ಕಿ ಪುಡಿ, ಲವಂಗ ಹಾಕಿ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ, 3 ಕಪ್ ಹಾಲು 2 ಕಪ್ ಆಗುವವರಗೆ ಕುದಿಸಿಕೊಳ್ಳಿ.

ನಂತರ ಇದಕ್ಕೆ ರುಬ್ಬಿಕೊಂಡ ಬಾದಾಮಿ ಮಿಶ್ರಣ ಹಾಕಿ ಕೇಸರಿದಳ, ಸಕ್ಕರೆ ಸೇರಿಸಿ ಕುದಿಸಿಕೊಳ್ಳಿ. ನಂತರ ಪಿಸ್ತಾ ಚೂರುಗಳನ್ನು ಹಾಕಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಮದ್ರಾಸ್ ಮಸಾಲ ಪಾಲ್ ರೆಡಿ.

Leave a Comment

Your email address will not be published. Required fields are marked *