Ad Widget .

ಮೋದಿಗೆ ಓಟು ಹಾಕಿ ಎಂದು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ – ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್: ಈ ಬಾರಿಯೂ ಮೋದಿಗೆ ವೋಟ್ ಹಾಕಿ ಎಂದು ಬರುವವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಹೇಳಿದ್ದಾರೆ.

Ad Widget . Ad Widget .

ಉ.ಕನ್ನಡದ ಶಿರಸಿಯ ಸಹ್ಯಾದ್ರಿ ರಂಗಮಂದಿರದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಏರ್ಪಡಿಸಲಾಗಿದ್ದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಬಿಜೆಪಿ ನಾಯಕರನ್ನು ತೀವ್ರವಾಗಿ ತರಾಟಗೆತ್ತಿಕೊಂಡರು.

Ad Widget . Ad Widget .

ಆರೇಳು ಬಾರಿ ಗೆದ್ದವರು ಇಲ್ಲಿದ್ದಾರೆ. ಕರ್ನಾಟಕವನ್ನು ಲೂಟಿ ಮಾಡಿದವರು ಇದ್ದಾರೆ. ಮೊದಲು ಇದ್ದಾಗ ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಂಬುದನ್ನು ಅಳೆಯಲೂ ಆಗದಷ್ಟು ಗಳಿಸಿ ಇಟ್ಟಿದ್ದಾರೆ, ಯಾರಿಗಾಗಿ ಗಳಿಸಿದ್ದೀರಿ? ಯಾರಿಗಾಗಿ ಬಂದಿದ್ದು ಎಂಬುದು ನೆನಪಿದೆಯಾ? ಜನಸಂಘ ಹುಟ್ಟಿದ್ದು ಯಾಕೆ ಎನ್ನುವುದು ನೆನಪಿದೆಯಾ? ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದು ನೆನಪಿದೆಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾವಿರಾರು ವರ್ಷಗಳಿಂದಲೂ ಗೋಮಾತೆಯನ್ನು ಉಳಿಸಿ ಎಂದು ಋಷಿಮುನಿಗಳು ಹೇಳುತ್ತಿದ್ದಾರೆ. ಗ್ರಾಮದಿಂದ ಕೇಂದ್ರದವರೆಗೂ ನಮ್ಮದೇ ಸರ್ಕಾರವಿದ್ದರೂ ಒಂದು ಆಕಳು ಉಳಿಸಲು ಆಗುತ್ತಿಲ್ಲ. ಕಾನೂನಿದೆ, ಪೊಲೀಸರಿದ್ದಾರೆ, ಅಧಿಕಾರವಿದೆ. ಆದರೆ ಇಚ್ಛಾಶಕ್ತಿ ಎನ್ನುವುದಿಲ್ಲ. ಆರೇಳು ಬಾರಿ ಸಂಸದರು, ಶಾಸಕರಾದವರು ಇದ್ದಾರೆ. ಆದರೆ ಅವರಿಗೆ ಆಕಳ ರೋಧನೆ ಕೇಳಿಸುತ್ತಿಲ್ಲ, ಅದರ ನೆತ್ತರ ಕಾಣುತ್ತಿಲ್ಲವೇ? ಅದರ ಶಾಪ ತಟ್ಟುತ್ತೆ ಎಂದು ಅವರು ಎಚ್ಚರಿಸಿದರು.

ಗೋವಾಕ್ಕೆ ಗೋಮಾಂಸ ರಫ್ತಾಗುತ್ತಿರುವುದು ಗೊತ್ತಾಗುತ್ತಿಲ್ಲವೇ? ಹಿಂದೂ ಸಂಘಟನೆಗಳೇ ಹಿಡಿದು ನಾವೇ ಕೇಸು ಹಾಕಿಕೊಂಡು ಜೈಲಿಗೆ ಹೋಗಬೇಕಾ? ಹಾಗಾದರೆ ನೀವ್ಯಾಕಿರೋದು? ಸಗಣಿ ತಿನ್ನೋದಕ್ಕಾ? ಗೋಮಾತೆಯನ್ನ ರಕ್ಷಣೆ ಮಾಡಲು, ಅದರ ನೆತ್ತರ ಹರಿಯುವುದನ್ನು ತಡೆಯಲು ಆಗದಿದ್ದರೆ ದಯವಿಟ್ಟು ಬೇರೆಯವರಿಗೆ ಅವಕಾಶ ನೀಡಿ ಎಂದು ಬಿಜೆಪಿ ನಾಯಕರನ್ನು ಅವರು ತರಾಟೆಗೆತ್ತಿಕೊಂಡರು.

Leave a Comment

Your email address will not be published. Required fields are marked *