Ad Widget .

ಗೃಹಸಚಿವರ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು| ಮಾನವೀಯತೆ ಮರೆತು ಮುಂದೆ ಸಾಗಿದ ಸಚಿವ ಆರಗ ಜ್ಞಾನೇಂದ್ರ

ಸಮಗ್ರ ನ್ಯೂಸ್: ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಎಸ್ಕಾರ್ಟ್‌ ನೀಡುತ್ತಿದ್ದ ಪೊಲೀಸ್‌ ವಾಹನಕ್ಕೆ ಡಿಕ್ಕಿಯಾಗಿ ಬೈಕ್‌ ಸವಾರನೊಬ್ಬ ಸ್ಥಳದಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆದರೆ, ಮಾನವೀಯತೆ ಇಲ್ಲದೇ ಸಾವಿನ ದೃಶ್ಯವನ್ನು ಕಂಡೂ ಕಾಣದಂತೆ ಸಚಿವ ಅರಗ ಜ್ಞಾನೇಂದ್ರ ಕಾರು ನಿಲ್ಲಿಸದೇ ಅಲ್ಲಿಂದ ಹೊರಟು ಹೋಗಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಹಾಸನದಲ್ಲಿ ಗೃಹ ಸಚಿವರಿಗೆ ಎಸ್ಕಾರ್ಟ್ ಮಾಡುತ್ತಿದ್ದ ಪೊಲೀಸ್ ವಾಹನ ಬೈಕ್‌ಗೆ ಡಿಕ್ಕಿಯಾಗಿದೆ. ಇನ್ನು ಪೊಲೀಸ್‌ ಜೀಪು ವೇಗವಾಗಿದ್ದರಿಂದ ಬೈಕ್‌ ಸವಾರನಿಗೆ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದಾನೆ. ಇನ್ನು ಎಸ್ಕಾರ್ಟ್‌ ವಾಹನ ಗುದ್ದಿದ ರಭಸಕ್ಕೆ ಬೈಕ್‌ ಸವಾರ ರಕ್ತಡ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಇದನ್ನು ಗಮನಿಸದೇ ಕಂಡೂಕಾಣದಂತೆ, ಸಚಿವ ಅರಗ ಜ್ಞಾನೇಂದ್ರ ಕಾರು ನಿಲ್ಲಿಸದಂತೆ ಹೋಗಿದ್ದಾರೆ. ಮಾನವೀಯತೆಗಾದರೂ ಕಾರು ನಿಲ್ಲಿಸಿ ಬೈಕ್ ಅಪಘಾತಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Ad Widget . Ad Widget . Ad Widget .

ಹಾಸನ ಜಿಲ್ಲೆಯ ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ ಆಗುಇದ್ದಾನೆ. ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ಘಟನೆ ನಡೆದಿದೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲು ತೆರಳಿದ್ದ ಗೃಹಸಚಿವ ಆರಗ ಜ್ಞಾನೇಂದ್ರ ಅವರು, ಹಾಸನ ಜಿಲ್ಲೆಯ ಮಾರ್ಗವಾಗಿ ಶಿವಮೊಗ್ಗದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎಸ್ಕಾರ್ಟ್‌ ಪಡೆದುಕೊಂಡಿದ್ದರು. ಈ ವೇಳೆ ಬೈಕ್‌ ಸವಾರನಿಗೆ ಡಿಕ್ಕಿಯಾಗಿದೆ.

ಗೃಹ ಸಚಿವರಿಗೆ ಡಿಆರ್ ಇನ್ಸ್‌ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಇನ್ನು ರಸ್ತೆಯ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‌ನಿಂದ ರಸ್ತೆಗೆ ಬಂದ ಬೈಕ್‌ ಸವಾರ ರಮೇಶ್‌ನಿಗೆ ಎಸ್ಕಾರ್ಟ್ ವಾಹನ ಡಿಕ್ಕಿಯಾಗಿದೆ. ಅಪಘಾತದ ವಿಷಯ ತಿಳಿದರು ವಾಹನ ನಿಲ್ಲಿಸದೆ ಗೃಹ ಸಚಿವ ಅರಗ ಜ್ಞಾನೇಂದ್ರ ತೆರಳಿದ್ದಾರೆ. ಅಮಾಯಕ ವ್ಯಕ್ತಿ ಪ್ರಾಣ ಕಳೆದುಕೊಂಡರೂ ಒಬ್ಬ ರಾಜ್ಯದ ಜವಾಬ್ದಾರಿಯುವ ಮಂತ್ರಿಯಾಗಿರುವ ಗೃಹ ಸಚಿವರು ಕನಿಷ್ಠ ಮಾನವೀಯತೆಯನ್ನೂ ತೋರದೆ ಅಲ್ಲಿಂದ ಹೊರಟು ಹೋಗಿದ್ದಾರೆ.

Leave a Comment

Your email address will not be published. Required fields are marked *