ಸಮಗ್ರ ನ್ಯೂಸ್: ಹಲ್ಲೆ ಪ್ರಕರಣದಲ್ಲಿ ಇಲಾಖೆ ಸಿಬ್ಬಂದಿಗಳ ವಿರುದ್ಧವೇ ಪಿತೋರಿ ನಡೆಸಿದ್ದ ಹಿನ್ನಲೆಯಲ್ಲಿ ಮೂಡಿಗೆರೆ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಉಮೇಶ್ ಅವರನ್ನು ಎಸ್‌ಪಿ ಉಮಾ ಪ್ರಶಾಂತ್ ಮಂಗಳವಾರ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಕಳ್ಳತನದ ಆರೋಪದ ಮೇಲೆ ದೂರಿನನ್ವಯ ತಾಲೂಕಿನ ದಾರದಹಳ್ಳಿಯ ಮಂಜು ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ಫೆ.14ರಂದು ಮೂಡಿಗೆರೆ ಪೊಲೀಸ್ ಠಾಣೆಯ ಸಿಬ್ಬಂದಿ ವಸಂತ ಮತ್ತು ಲೋಹಿತ್ ಎಂಬುವರನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಅಮಾನತುಗೊಳಿಸಿ ಆದೇಶಿಸಿದ್ದರು.
ಇದೇ ಠಾಣೆಯ ಕಾನ್ಸ್‌ಟೇಬಲ್ ಉಮೇಶ್ ಎಂಬುವರು ಇಲಾಖೆ ಬಗ್ಗೆ ಕೆಲವರೊಂದಿಗೆ ಚರ್ಚಿಸುವ ಜೊತೆಗೆ ಇಲಾಖೆಯ ಸಹೋದ್ಯೋಗಿಗಳಾದ ವಸಂತ ಮತ್ತು ಲೋಹಿತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಹಾಗೂ ಅವರಿಂದ 5೦ ಸಾವಿರ ರೂ ಪಡೆದುಕೊಳ್ಳುವಂತೆ ಇಲಾಖೆ ಸಿಬ್ಬಂದಿ ವಿರುದ್ಧವೇ ಪಿತೋರಿ ನಡೆಸಿ ಬೇಜವಾಬ್ದಾರಿ ಪ್ರದರ್ಶಿಸಿದ್ದ ಕಾರಣದಿಂದಾಗಿ ಕಾನ್ಸ್‌ಟೇಬಲ್ ಉಮೇಶ್ ಅವರನ್ನು ಅಮಾನತುಗೊಳಿಸಲಾಗಿದೆ.