Ad Widget .

ಸುಳ್ಯ: ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್ ಪಂಪ್ ಶುಭಾರಂಭ

ಸಮಗ್ರ ನ್ಯೂಸ್: ಅರಂತೋಡಿನಲ್ಲಿ ಶ್ರೀ ಮಲ್ಲಿಕಾರ್ಜುನ ಫ್ಯೂಯಲ್‌ರವರ ನಯಾರಾ ಎನರ್ಜಿ ಪೆಟ್ರೋಲ್ ಪಂಪ್ ಮಾ.೧ರಂದು ಶುಭಾರಂಭಗೊಂಡಿದೆ.

Ad Widget . Ad Widget .

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಹರೀಶ್ ಕಂಜಿಪಿಲಿ ನೆರವೇರಿಸಿ ಗ್ರಾಹಕರಿಗೆ ಒಳ್ಳೆಯ ಅನುಕೂಲವಾಗಲಿ ,ಇಡೀ ಗ್ರಾಮವೇ ಮೆಚ್ಚುವಂತಹ ಕೆಲಸ ಪ್ರಹ್ಲಾದ್ ಕುಟುಂಬ ಮಾಡಿದೆ ಎಂದು ಶುಭ ಹಾರೈಸಿದರು. ಬಳಿಕ ಮಾತನಾಡಿದ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಾಹಿದ್ ಮಾತನಾಡಿ ಪಂಪ್ ಆರಂಭವಾಗಿರುವುದು ಒಳ್ಳೆಯ ಕೆಲಸ ,ಊರಿನವರಿಗೆ ಉಪಯೋಗವಾಗಲಿ ಉದ್ಯೋಗ ಸೃಷ್ಟಿಸುವ ಕೆಲಸ ಪ್ರಹ್ಲಾದ್ ಮಾಡಿದ್ದಾರೆ ಎಂದು ಶುಭ ಹಾರೈಸಿದರು.

Ad Widget . Ad Widget .

ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶ್ರೀಮತಿ ಹರಿಣಿ ದೇರಾಜೆ, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತೊಡಿಕಾವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಎಂ,ಕಿಶೋರ್ ಕುಮಾರ್, ವಾಹನ ಚಾಲಕ ಮಾಲಕ ಸಂಘದ ಅಧ್ಯಕ್ಷ ಜನಾರ್ಧನ ಇರ್ಣೆ, ನಯಾರಾ ಎನರ್ಜಿ ಕಂಪೆನಿಯ ಮೋಹಿತ್ ನಾರಾಯಣ, ನವೀನ್ ಶೆಟ್ಟಿ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ಮಾಲಕರಾದ ಪ್ರಹ್ಲಾದ್ ಕರಿಂಬಿ ಸ್ವಾಗತಿಸಿ, ಚಿನ್ನಪ್ಪ ಮಾಸ್ತರ್ ಕರಿಂಬಿ ವಂದಿಸಿದರು.

ಪೆಟ್ರೋಲ್ ಪಂಪ್ ದಿನದ ೨೪ ಗಂಟೆ ಸೇವೆ ಒದಗಿಸಲಿದ್ದು, ಪ್ಯೂಯಲ್ ನೊಂದಿಗೆ ಫ್ರಿ ನೈಟ್ರೋಜನ್, ಕುಡಿಯುವ ನೀರು, ಟಾಯ್ಲೆಟ್ ವ್ಯವಸ್ಥೆಯೊಂದಿಗೆ ಸೇವೆ ನೀಡಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *