Ad Widget .

ಬದಲಾಯ್ತು ರಾಹುಲ್ ಗಾಂಧಿ ಲುಕ್| ಹೊಸ ಲುಕ್ ನಲ್ಲಿ ಕೇಂಬ್ರಿಡ್ಜ್ ವಿವಿನಲ್ಲಿ ಉಪನ್ಯಾಸ

ಸಮಗ್ರ ನ್ಯೂಸ್: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಬುಧವಾರ ಬ್ರಿಟನ್‌ಗೆ ಆಗಮಿಸಿದ್ದಾರೆ. ರಾಹುಲ್ ಗಾಂಧಿ ಬ್ರಿಟನ್​ಗೆ ತೆರಳುವ ಮುನ್ನ ತಮ್ಮ ಲುಕ್​ನಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರಸಿದ್ಧಿ ಪಡೆದುಕೊಂಡಿದ್ದ ತಮ್ಮ ಗಡ್ಡವನ್ನು ಟ್ರಿಮ್ ಮಾಡಿಕೊಂಡಿದ್ದಾರೆ.

Ad Widget . Ad Widget .

ಉಪನ್ಯಾಸ ನೀಡಲು ತೆರಳುತ್ತಿದ್ದಂತೆ ರಾಹುಲ್ ಗಾಂಧಿ ಲುಕ್ ಬದಲಾಗಿದೆ. ಟೀ-ಶರ್ಟ್ ಕಳಚಿಟ್ಟು ಕೋಟು, ಟೈ ಧರಿಸಿ ಮಿಂಚುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕೊನೆಗೊಳ್ಳುವವರೆಗೆ ತಮ್ಮ ಗಡ್ಡ ಟ್ರಿಮ್ ಮಾಡಿಸಿಕೊಂಡಿರಲಿಲ್ಲ. ಈ ಲುಕ್ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿತ್ತು ಮತ್ತು ಟ್ರೋಲ್​ಗೂ ಒಳಗಾಗಿತ್ತು.

Ad Widget . Ad Widget .

ಇದೀಗ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ತೆಳಿರುವ ರಾಹುಲ್, ತಮ್ಮ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೊಸ ಲುಕ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Leave a Comment

Your email address will not be published. Required fields are marked *