Ad Widget .

ಕಾಳಿಂಗ ಸರ್ಪದ ವಿರಾಟ ರೂಪ ದರ್ಶನ| ಬರೋಬ್ಬರಿ 6 ಅಡಿ ಹೆಡೆ ಎತ್ತಿ ನಿಂತ ಸರ್ಪ| ಇಲ್ಲಿದೆ ವೈರಲ್ ವಿಡಿಯೋ…

ಸಮಗ್ರ ನ್ಯೂಸ್: ಕಾಳಿಂಗ ಸರ್ಪದ ಈ ವಿರಾಟ ರೂಪ ನಿಜಕ್ಕೂ ಅಪರೂಪವಾದದ್ದು. ಕಾಳಿಂಗ ಸರ್ಪ ಬಹಳ ಉದ್ದನೆಯ ಹಾವು. ಇದು ಸರಾಸರಿ 3.6-4 ಮೀಟರ್‌ನಷ್ಟು ಉದ್ದವಿರುತ್ತದೆ. ನಾಗರಹಾವು ಸರಾಸರಿ ಉದ್ದ 1.3-2 ಮೀಟರ್ ಇರುತ್ತದೆ. ಅಪರೂಪದಲ್ಲಿ 2.5-3 ಮೀಟರ್‌ ಉದ್ದವೂ ಕೆಲವೊಮ್ಮೆ ಕಂಡು ಬರುತ್ತವೆ.

Ad Widget . Ad Widget .

ಈ ಹಾವು ಬರೋಬ್ಬರಿ 6 ಅಡಿಯಷ್ಟು ಎತ್ತರಕ್ಕೆ ತನ್ನ ಹೆಡೆ ಎತ್ತಿದೆ. ಅಷ್ಟೇ ಅಲ್ಲ ತನ್ನ ದೇಹದ ಮೂರನೇ ಒಂದು ಭಾಗವನ್ನ ಗಾಳಿಯಲ್ಲಿ ತೇಲಿಸುವ ಮೂಲಕ ಗಮನ ಸೆಳೆದಿದೆ. ಆಳೆತ್ತರಕ್ಕೆ ಹೆಡೆ ಎತ್ತಿ ನಿಂತ ಈ ವಿಡಿಯೋ ನಿಜಕ್ಕೂ ನೋಡುಗರ ಮೈ ಜುಮ್ಮೆನ್ನಿಸಿದೆ.

Ad Widget . Ad Widget .

ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ವಿಡಿಯೋ ಬಹಳಷ್ಟು ಅಚ್ಚರಿಗೆ ಕಾರಣವಾಗಿದೆ. ಇಂಡಿಯನ್ ಫಾರಿನ್ ಆಫೀಸರ್ ಸುಶಾಂತ ನಂದ ಅವರು ಈ ಹಾವಿನ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಅದ್ಭುತ, ಅಮೋಘ ಹಾವಿನ ದರ್ಶನ ಎಂದು ಹೌಹಾರಿದ್ದಾರೆ.

Leave a Comment

Your email address will not be published. Required fields are marked *