Ad Widget .

ರಾಜ್ಯ ಸರ್ಕಾರಿ ನೌಕರರ ವೇತನ‌ ಶೇ.17ರಷ್ಟು ಹೆಚ್ಚಳ| ರಾಜ್ಯ ಸರ್ಕಾರದಿಂದ ಮಧ್ಯಂತರ ಘೋಷಣೆ

ಸಮಗ್ರ ನ್ಯೂಸ್: ಏಳನೇ ವೇತನ ಆಯೋಗದ ವರದಿ ಜಾರಿ ಸೇರುವಂತೆ ಹಲವು ಮುಂದಿಟ್ಟು ರಾಜ್ಯಾದ್ಯಂತ ಸರ್ಕಾರಿ ನೌಕರರು ಇಂದಿನಿಂದ ಮುಷ್ಕರ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ನಿರ್ಧಾರವನ್ನು ತೆಗೆದುಕೊಂಡಿದೆ. ತಕ್ಷಣಕ್ಕೆ ಸರ್ಕಾರಿ ನೌಕರರ ವೇತನದಲ್ಲಿ ಶೇ.17ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಈ ಬಗ್ಗೆ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿಯವರು, ಮಧ್ಯಂತರ ಪರಿಹಾರ ವೇತನ ಘೋಷಣೆ ಮಾಡಿದ್ದೇವೆ. ವರದಿ ಬಂದ ತಕ್ಷಣ ಏಳನೇ ವೇತನ ಆಯೋಗದ ವೇತನ ಜಾರಿ ಮಾಡಲಿದ್ದೇವೆ ಎಂದರು. ಇನ್ನು ಎನ್‌ಪಿಎಸ್‌ ರದ್ದು ಮಾಡುವ ಬಗ್ಗೆ ಸಮಿತಿ ರಚನೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ. ನೌಕರರು ಮುಷ್ಕರ ಕೈಬಿಡುವ ವಿಶ್ವಾಸವಿದೆ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಹೇಳಿದ್ದಾರೆ.

Ad Widget . Ad Widget . Ad Widget .

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು, ಸರ್ಕಾರದಿಂದ ಈ ಬಗ್ಗೆ ಸ್ಪಷ್ಟ ಆದೇಶ ಆಗುವವರೆಗೂ ಮುಷ್ಕರ ಹಿಂಪಡೆಯವುದಿಲ್ಲ. ಸರ್ಕಾರ ಆದೇಶ ಹೊರಡಿಸಿದ ನಂತರ ಎಲ್ಲರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *