Ad Widget .

ಇಂದಿನಿಂದ ಸರ್ಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ| ಹಲವು ಬೇಡಿಕೆಗಳಿಗೆ ಬಿಗಿಪಟ್ಟು| ಏನಿರುತ್ತೆ? ಏನಿರಲ್ಲ?

ಸಮಗ್ರ ನ್ಯೂಸ್: 7ನೇ ವೇತನ ಆಯೋಗದ ವರದಿ ಜಾರಿಗಾಗಿ ಪಟ್ಟು ಬಿಡದ ಸರ್ಕಾರಿ ನೌಕರರು ತಮ್ಮ ಹಲವು ಬೇಡಿಕೆಯನ್ನ ಸರರ್ಕಾರದ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಂದಿನಿಂದ(ಮಾ.1) ಕರೆ ನೀಡಿದ್ದಾರೆ.

Ad Widget . Ad Widget .

ರಾಜ್ಯ ಸರ್ಕಾರಿ ನೌಕರರ ಸಂಘದ ಪಧಾದಿಕಾರಿಗಳ ಜೊತೆಗೆ ನಿನ್ನೆ ತಡರಾತ್ರಿ (ಫೆ.28) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದು, ಆ ಸಭೆ ವಿಫಲವಾಗಿದೆ. ಸಭೆಯ ಬಳಿಕವು ಯಾವುದೇ ರೀತಿಯ ಮುಷ್ಕರಕ್ಕೆ ಕೊಟ್ಟಿರುವ ಕರೆಯನ್ನ ಯಾವುದೇ ಕಾರಣಕ್ಕೂ ವಾಪಸ್ ಪಡೆಯದಿರುವುದಾಗಿ ಸರ್ಕಾರಿ ನೌಕರರು ನಿರ್ಧರಿಸಿದ್ದದಾರೆ. ಹೀಗಾಗಿ ಇಂದಿನಿಂದ ರಾಜ್ಯದಲ್ಲಿ ಬಹುತೇಕ ಸರ್ಕಾರಿ ಸೇವೆಗಳು ಬಂದ್ ಆಗಲಿವೆ.

Ad Widget . Ad Widget .

ಯಾವ ಸೇವೆಗಳು ಇರಲ್ಲ?:
ಸರ್ಕಾರಿ ನೌಕಕರ ಮುಷ್ಕರದಿಂದಾಗಿ ಹಲವು ಸೇವೆಗಳನ್ನ ವ್ಯತ್ಯಯ ಉಂಟಾಗಲಿದ್ದು, ವಿಧಾನಸೌಧದ ಕಚೇರಿಗಳು, ಬಿಬಿಎಂಪಿ ಕೇಂದ್ರ ಕಚೇರಿ, ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯ್ತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ (ಒಪಿಡಿ), ಉಪ ನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಕಸ ಸಂಗ್ರಹಣೆ, ಸೇರಿದಂತೆ ನೀರು ಪೂರೈಕೆ ಸೇವೆಗಳು ಇರುವುದಿಲ್ಲ.

ಯಾವ ಸೇವೆ ಇರುತ್ತೆ?:
ಸರ್ಕಾರಿ ನೌಕರರ ಮುಷ್ಕರದಿಂದಾಗಿ ಹಲವು ಸೇವೆಗಳು ಸ್ಥಗಿತಗೊಳಲಿದ್ದು, ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ.

Leave a Comment

Your email address will not be published. Required fields are marked *