February 2023

ಬಿರುಬಿಸಿಲಿಗೆ ಬಸವಳಿಯಲಿದೆ ಕರುನಾಡು| ದಿನೇ ದಿನೇ ತಾಪಮಾನ‌ ಏರಿಕೆ; ಮಾರ್ಚ್ ನಲ್ಲಿ ಭಾರೀ ಹೆಚ್ಚಳ ಸಾಧ್ಯತೆ

ಸಮಗ್ರ ನ್ಯೂಸ್: ಭಾರೀ ಬಿಸಿಲಿನ ತಾಪಕ್ಕೆ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಮಾರ್ಚ್ ಮಧ್ಯಭಾಗದಲ್ಲಿ ರಾಜ್ಯದಲ್ಲಿ ಉಷ್ಣಾಂಶ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್‍ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು ಆದರೆ, ಫೆಬ್ರವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಾಗುತ್ತಿದೆ. ಏಪ್ರಿಲ್ ಅಥವಾ 3ನೇ ವಾರದಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ 3ನೇ ವಾರದಲ್ಲಿ ಅಧಿಕವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉತ್ತರ ಒಳನಾಡಿನ […]

ಬಿರುಬಿಸಿಲಿಗೆ ಬಸವಳಿಯಲಿದೆ ಕರುನಾಡು| ದಿನೇ ದಿನೇ ತಾಪಮಾನ‌ ಏರಿಕೆ; ಮಾರ್ಚ್ ನಲ್ಲಿ ಭಾರೀ ಹೆಚ್ಚಳ ಸಾಧ್ಯತೆ Read More »

ಕಡಬ: ಆಪರೇಷನ್ ಕಾಡಾನೆ ಯಶಸ್ವಿ| ನರಹಂತಕನ ಸೆರೆಹಿಡಿದ ಅಭಿಮನ್ಯು ಪಡೆ

ಸಮಗ್ರ ನ್ಯೂಸ್: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ಕಳೆದ ಮೂರು ದಿನಗಳಿಂದ ನಡೆದ ಕಾರ್ಯಾಚರಣೆ ಕೊನೆಗೂ ಯಶಸ್ಸು ಕಂಡಿದೆ. ಕಡಬ ಬಳಿಯ ಮೂಜೂರು ರಕ್ಷಿತಾರಣ್ಯದ ಕೊಂಬಾರು(ಮಂಡೆಕರ) ಎಂಬಲ್ಲಿ ಆನೆಯನ್ನು ಪತ್ತೆ ಹಚ್ಚಿ ಗನ್ ಮೂಲಕ ಆನೆಗೆ ಅರಿವಳಿಕೆ ನೀಡಲಾಗಿದೆ. ಫೆ.20 ಬೆಳಿಗ್ಗೆ ಕಾಡಾನೆ ದಾಳಿಯಿಂದ ಸ್ಥಳೀಯ ನಿವಾಸಿಗಳಾದ ರಂಜಿತಾ (21) ಮತ್ತು ರಮೇಶ್ ರೈ (52 ವ) ಮೃತಪಟ್ಟಿದ್ದರು. ಅಂದು ರಾತ್ರಿಯೇಮೈಸೂರು ದುಬಾರೆಯಿಂದ ಅಭಿಮನ್ಯು

ಕಡಬ: ಆಪರೇಷನ್ ಕಾಡಾನೆ ಯಶಸ್ವಿ| ನರಹಂತಕನ ಸೆರೆಹಿಡಿದ ಅಭಿಮನ್ಯು ಪಡೆ Read More »

ಮಂಗಳೂರು ನಗರ ಪೊಲೀಸ್ ಆಯುಕ್ತ‌ ಎನ್.ಶಶಿಕುಮಾರ್ ವರ್ಗಾವಣೆ

ಸಮಗ್ರ ನ್ಯೂಸ್: ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಎನ್.ಶಶಿಕುಮಾರ್ ಅವರನ್ನು ರೈಲ್ವೆ ಡಿಐಜಿಯಾಗಿ ತಕ್ಷಣಕ್ಕೆ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಲಾಗಿದ್ದು, ನೂತನ ಪೊಲೀಸ್ ಆಯುಕ್ತರ ಹುದ್ದೆಗೆ ಕುಲದೀಪ್ ಕುಮಾರ್ ಆರ್.ಜೈನ್ ಅವರನ್ನು ನೇಮಕ ಮಾಡಲಾಗಿದೆ. ಕುಲದೀಪ್ ಸದ್ಯ ಬೆಂಗಳೂರು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತ‌ ಎನ್.ಶಶಿಕುಮಾರ್ ವರ್ಗಾವಣೆ Read More »

ಪುತ್ತೂರು: ದೇಶವಿರೋಧಿ ಚಟುವಟಿಕೆಗಳ ತಾಣವಾಗಿದ್ದ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೀಗ ಜಡಿದ ಎನ್ಐಎ

ಸಮಗ್ರ ನ್ಯೂಸ್: ದೇಶವಿರೋಧಿ ಚಟುವಟಿಕೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಬಳಿಕ ರಾಷ್ಟ್ರೀಯ ತನಿಖಾ ದಳದ ಕರಾವಳಿಯಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಆ ಮೂಲಕ ದೇಶ ವಿರೋಧ ಕೃತ್ಯ ನಡೆಯುವ ತಾಣಗಳಿಗೆ ಎನ್‌ಐಎ ತಂಡ ದಾಳಿ ನಡೆಸಿ ಬಿಗ್ ಶಾಕ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ಕಬಕ ಸಮೀಪದ ಮಿತ್ತೂರಿನಲ್ಲಿರುವ ಫ್ರೀಡಂ ಹಾಲ್ ನಲ್ಲಿ ಉಗ್ರಗಾಮಿ ಚಟುವಟಿಕೆಗಳು ನಡೆಯುತ್ತಿದ್ದವು ಎಂಬ ಅಂಶ ಬಯಲಾಗಿದ್ದು

ಪುತ್ತೂರು: ದೇಶವಿರೋಧಿ ಚಟುವಟಿಕೆಗಳ ತಾಣವಾಗಿದ್ದ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಬೀಗ ಜಡಿದ ಎನ್ಐಎ Read More »

ನಾಳೆ(ಫೆ.24 )ಯಿಂದ ಕರಾವಳಿಯಾದ್ಯಂತ “ಪಿಲಿ” ಅಬ್ಬರ

ಸಮಗ್ರ ನ್ಯೂಸ್: ಫೆ. 10 ರಂದು ಬಿಡುಗಡೆಯಾಗಬೇಕಿದ್ದ ತುಳು ಚಲನಚಿತ್ರ ”ಪಿಲಿ” ಸಿನಿಮಾಕ್ಕೆ ತಡೆಯುಂಟಾಗಿದ್ದು ಇದೀಗ ಫೆ.24 ರಂದು ಮತ್ತೆ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಎನ್. ಎನ್. ಎಂ.ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದ ಪಿಲಿ ತುಳು ಚಿತ್ರ ಬಿಡುಗಡೆಗೆ ತಡೆಯುಂಟಾಗಿತ್ತು. ಇದಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು , ಸೇರಿದಂತೆ ಹಲವಾರು ತುಳುನಾಡಿನ ಗಣ್ಯರು ಕಾನೂನಾತ್ಮಕ ಹೋರಾಟ‌ ನಡೆಸಿದ್ದರ ಪರಿಣಾಮ ಪಿಲಿ ಚಿತ್ರ ಬಿಡುಗಡೆಗೆ ಎದುರಾಗಿದ್ದ ಆತಂಕ ಈಗ ನಿವಾರಣೆಯಾಗಿದೆ.‌

ನಾಳೆ(ಫೆ.24 )ಯಿಂದ ಕರಾವಳಿಯಾದ್ಯಂತ “ಪಿಲಿ” ಅಬ್ಬರ Read More »

ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ| ರಸ್ತೆ ಮದ್ಯೆ ಬೆತ್ತಲಾಗಿ ನಿಂತು ಪ್ರತಿಭಟಿಸಿದ‌ ನರ್ಸ್

ಸಮಗ್ರ ನ್ಯೂಸ್: ತಮ್ಮ ಮರು ನೇಮಕದ ಪ್ರಕ್ರಿಯೆಯಲ್ಲಿ ವಿಳಂಬ ಧೋರಣೆಯನ್ನು ಖಂಡಿಸಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳಾ ನರ್ಸ್​ ನಡುರಸ್ತೆಯಲ್ಲೇ ನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಜೆಎಲ್‌ಎನ್ ರಸ್ತೆಯಲ್ಲಿರುವ ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಮುಂಭಾಗದ ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ನರ್ಸ್​ ವಿವಸ್ತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಇದನ್ನು ಕಂಡ ದಾರಿಹೋಕರು ಬೆಚ್ಚಿ ಬಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳಾ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ. ಮಹಿಳೆಗೆ ಬಟ್ಟೆ ಧರಿಸಿ ತನ್ನ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ

ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬ| ರಸ್ತೆ ಮದ್ಯೆ ಬೆತ್ತಲಾಗಿ ನಿಂತು ಪ್ರತಿಭಟಿಸಿದ‌ ನರ್ಸ್ Read More »

ಸವಣೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು|

ಸಮಗ್ರ ನ್ಯೂಸ್: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ತೊಂಡೂರು ಗ್ರಾಮದ ಹನುಮಂತಗೌಡ (55), ಲಲಿತಾ ಪಾಟೀಲ್ (50), ಮಗಳು ನೇತ್ರಾ ಪಾಟೀಲ (22) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ದುರ್ದೈವಿಗಳು ನಿನ್ನೆಯೇ (ಫೆ.22) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕಾಗಿ ಮೂವರು ಮನೆಯನ್ನು ಸಹ ತೊರೆದಿದ್ದರು ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಈ ವಿಷಯ ರಾಣೇಬೆನ್ನೂರು ಗ್ರಾಮೀಣ ಠಾಣೆಯ ಪಿಎಸ್‌ಐ ಮಹಾಂತೇಶ ಅವರಿಗೆ ಈ ಬಗ್ಗೆ ತಲುಪಿತ್ತು. ಸುದ್ದಿ

ಸವಣೂರು: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು| Read More »

ಇಸ್ರೇಲ್ ಗೆ ಕೃಷಿ ಅಧ್ಯಯನಕ್ಕೆ ತೆರಳಿದ್ದ ಕೇರಳದ‌ ವ್ಯಕ್ತಿ ನಾಪತ್ತೆ

ಸಮಗ್ರ ನ್ಯೂಸ್: ಇಸ್ರೇಲ್‌ನಲ್ಲಿ ಕೇರಳದ 6 ಯಾತ್ರಾರ್ಥಿಗಳು ನಾಪತ್ತೆಯಾದ ಪ್ರಕರಣದ ಬೆನ್ನಲ್ಲೇ, ಕೇರಳದಿಂದ ಇಸ್ರೇಲ್​​ಗೆ ಸುಧಾರಿತ ಕೃಷಿ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಸಲು ತೆರಳಿದ್ದ ರಾಜ್ಯ ಸರ್ಕಾರ ನಿಯೋಗದ ಸದಸ್ಯರೊಬ್ಬರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಣ್ಣೂರಿನ ಬಿಜು ಕುರಿಯನ್​ (48) ಎಂದು ಗುರುತಿಸಲಾಗಿದೆ. ಕಳೆದ ಫೆ.12ರಂದು ಕೇರಳ ಸರ್ಕಾರವು ಕೃಷಿ ತಂತ್ರಜ್ಞಾನಗಳ ಅಧ್ಯಯನಕ್ಕಾಗಿ 27 ಜನರ ನಿಯೋಗವನ್ನು ಇಸ್ರೇಲ್‌ಗೆ ಕಳುಹಿಸಿತ್ತು. ಈ ನಿಯೋಗದಲ್ಲಿ ಬಿಜು ಕುರಿಯನ್​​ ಕೂಡ ಇದ್ದರು. ಇಸ್ರೇಲ್​​ಗೆ ತಲುಪಿದ್ದ ನಿಯೋಗದ ಸದಸ್ಯರು

ಇಸ್ರೇಲ್ ಗೆ ಕೃಷಿ ಅಧ್ಯಯನಕ್ಕೆ ತೆರಳಿದ್ದ ಕೇರಳದ‌ ವ್ಯಕ್ತಿ ನಾಪತ್ತೆ Read More »

ಮಂಗಳೂರು: ‌ಹಿರಿಯ ಪೊಲೀಸ್ ಅಧಿಕಾರಿಯೇ ನನ್ನನ್ನು ಸೆಕ್ಸ್ ಗೆ ಆಹ್ವಾನಿಸಿದ್ದರು!| ಜಡ್ಜ್ ಮುಂದೆ ಅಳಲು ತೋಡಿಕೊಂಡ ಮಂಗಳಮುಖಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ ಎಂದು ಮಂಗಳಮುಖಿಯೊಬ್ಬರು ನ್ಯಾಯಾಧೀಶರಿಗೆ ದೂರು ನೀಡಿದರು. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಂಗಳಮುಖಿ, “ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ. ಅವರೇ ಹೀಗೆ ಮಾಡಿದರೆ, ನಾವು ಯಾರಿಗೆ ದೂರು ನೀಡುವುದು?” ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ‌.ಕ.ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಪ್ರತಿಕ್ರಿಯಿಸಿ,

ಮಂಗಳೂರು: ‌ಹಿರಿಯ ಪೊಲೀಸ್ ಅಧಿಕಾರಿಯೇ ನನ್ನನ್ನು ಸೆಕ್ಸ್ ಗೆ ಆಹ್ವಾನಿಸಿದ್ದರು!| ಜಡ್ಜ್ ಮುಂದೆ ಅಳಲು ತೋಡಿಕೊಂಡ ಮಂಗಳಮುಖಿ Read More »

ಚೀನಾ-ತಜಕಿಸ್ತಾನ್ ಗಡಿಯಲ್ಲಿ ಭಾರೀ ಭೂಕಂಪ| ರಿಕ್ಟರ್ ನಲ್ಲಿ 7.3 ತೀವ್ರತೆ ದಾಖಲು

ಸಮಗ್ರ ನ್ಯೂಸ್: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ತಜಕಿಸ್ತಾನದ ಗಡಿಯಲ್ಲಿ ಸುಮಾರು 8:37 ಕ್ಕೆ ಸುಮಾರು 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾದ ರಾಜ್ಯ ದೂರದರ್ಶನ ಸಿಸಿಟಿವಿ ಇಂದು (ಫೆ.23) ವರದಿ ಮಾಡಿದೆ. ಚೀನಾದ ರಾಜ್ಯ ಮಾಧ್ಯಮವೂ ವರದಿಗಳನ್ನು ದೃಢಪಡಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದ ಬಳಿ ಗುರುವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ. ಇದುವರೆಗೆ ಯಾವುದೇ ಪ್ರಾಣ ಹಾನಿಯಾದ

ಚೀನಾ-ತಜಕಿಸ್ತಾನ್ ಗಡಿಯಲ್ಲಿ ಭಾರೀ ಭೂಕಂಪ| ರಿಕ್ಟರ್ ನಲ್ಲಿ 7.3 ತೀವ್ರತೆ ದಾಖಲು Read More »