February 2023

ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ

ಸಮಗ್ರ ನ್ಯೂಸ್: ಐದು ದಶಕಗಳ ವೃತ್ತಿಜೀವನವನ್ನ ಹೊಂದಿದ್ದ ಜನಪ್ರಿಯ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಾಣಿ ಜಯರಾಮ್ ಕನ್ನಡ ಸೇರಿ ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಬಂಗಾಳಿ ಮತ್ತು ತುಳು ಸೇರಿದಂತೆ 19 ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ವಾಣಿ ಜಯರಾಮ್ ಅವರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳು ಸೇರಿದಂತೆ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿಗಳನ್ನು ಸಹ ನೀಡಿದ್ದಾರೆ. ವಾಣಿ ಜಯರಾಮ್ […]

ಖ್ಯಾತ ಗಾಯಕಿ ವಾಣಿ ಜಯರಾಂ ಇನ್ನಿಲ್ಲ Read More »

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಆಟೋ – ಮಹಿಳೆ ಸಾವು

ಸಮಗ್ರ ನ್ಯೂಸ್ :ಚಾಲಕನ ನಿಯಂತ್ರಣ ತಪ್ಪಿ ಆಟೊ ರಿಕ್ಷಾವೊಂದು ಮೃತ್ಯುಂಜಯ ನದಿಗೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಸಾವನಪ್ಪಿರುವ ಘಟನೆ ಮುಂಡಾಜೆ ಕಾಪು ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಕಕ್ಕಿಂಜೆ ಕತ್ತರಿ ಗುಡ್ಡೆ ನಿವಾಸಿ ಸಫಿಯಾ(57) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ರಾತ್ರಿ 11 ಗಂಟೆಗೆ ಮುಂಡಾಜೆಯಿಂದ ಕಕ್ಕಿಂಜೆ ಕಡೆಗೆ ಹೋಗುತ್ತಿದ್ದ ರಿಕ್ಷಾ, ಕಾಪು ಚಡಾವು ಹತ್ತಿರ ಚಾಲಕನ ನಿಯಂತ್ರಣ ಕಳೆದು ಕೊಂಡು ಮೃತ್ಯುಂಜಯ ನದಿಗೆ ಉರುಳಿ ಬಿದ್ದಿದೆ. ಕಿಂಡಿ ಅಣೆಕಟ್ಟುಗಳಲ್ಲಿ ನೀರು ನಿಂತಿರುವುದರಿಂದ ನದಿಯಲ್ಲಿ

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಆಟೋ – ಮಹಿಳೆ ಸಾವು Read More »

ಸೌದಿಯಲ್ಲಿ ಭೀಕರ ಅಪಘಾತ| ಮಂಗಳೂರಿನ ‌ಮೂವರು ಸೇರಿ ನಾಲ್ಕು ಮಂದಿ ದುರ್ಮರಣ

ಸಮಗ್ರ‌ ನ್ಯೂಸ್: ಸೌದಿ ಅರೇಬಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ. ಅಕೀಲ್, ನಾಸಿರ್, ರಿಝ್ವಾನ್, ಶಿಹಾಬ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಖುರೈಸ್ ರಸ್ತೆಯ ಬಳಿ ಕಳೆದ ರಾತ್ರಿ ಈ ಅಪಘಾತ ಸಂಭವಿಸಿದೆ. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಕಾರಿನಲ್ಲಿದ್ದವರು SAQCO ಎಂಬ

ಸೌದಿಯಲ್ಲಿ ಭೀಕರ ಅಪಘಾತ| ಮಂಗಳೂರಿನ ‌ಮೂವರು ಸೇರಿ ನಾಲ್ಕು ಮಂದಿ ದುರ್ಮರಣ Read More »

ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಶವ| ಅತ್ಯಾಚಾರ ಶಂಕೆ; ಕಾಲೇಜು ಪ್ರಾಂಶುಪಾಲರ ಮೇಲೆ ಅನುಮಾನ

ಸಮಗ್ರ ನ್ಯೂಸ್: ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ 17 ವರ್ಷದ ವಿದ್ಯಾರ್ಥಿನಿಯ ಶವ ಪತ್ತೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಅನುಮಾನ ಮೂಡಿದ್ದು, ಕಾಲೇಜಿನ ಪ್ರಿನ್ಸಿಪಾಲ್ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಲಿಂಗಸುಗೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ತನ್ನ ವಿರುದ್ಧ ಆರೋಪ ಬರದಂತೆ ಹಾಸ್ಟೆಲ್ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಕೊಂದು ಪ್ರಿನ್ಸಿಪಾಲ್ ನೇಣಿಗೆ ಹಾಕಿದ್ದಾರೆ ಎಂದು ಸಂಬಂಧಿಕರು, ಪೋಷಕರು ಆರೋಪಿಸಿದ್ದಾರೆ. ಪ್ರಥಮ ಪಿಯುಸಿ ವಿಜ್ಞಾನ

ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಶವ| ಅತ್ಯಾಚಾರ ಶಂಕೆ; ಕಾಲೇಜು ಪ್ರಾಂಶುಪಾಲರ ಮೇಲೆ ಅನುಮಾನ Read More »

ಮಗುವನ್ನು ಸ್ವಾಗತಿಸಲಿರುವ ಕೇರಳದ ಟ್ರಾನ್ಸ್‌ಜೆಂಡರ್ ದಂಪತಿ

ಸಮಗ್ರ ನ್ಯೂಸ್: ಕೇರಳದ ಕೋಯಿಕ್ಕೋಡ್‌ನಲ್ಲಿ ಲಿಂಗ ಬದಲಿಸಿಕೊಂಡ ದಂಪತಿ ದೇಶದ ಮೊದಲ ಟ್ರಾನ್ಸ್‌ಜೆಂಡರ್ ಪೋಷಕರಾಗಲಿದ್ದು ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಭಾರತದಲ್ಲಿ ಗರ್ಭಧಾರಣೆಯ ಮೂಲಕ ಗರ್ಭಿಣಿಯಾದ 23 ವರ್ಷದ ಟ್ರಾನ್ಸ್ ಮ್ಯಾನ್ ಜಹಾದ್ ಪಾವಲ್ ಮಾರ್ಚ್‌ನಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ. ಪಾವಲ್ ಅವರ ಪಾಲುದಾರರಾಗಿರುವ 21 ವರ್ಷದ ಟ್ರಾನ್ಸ್‌ವುಮನ್ ಜಿಯಾ ಗರ್ಭಧಾರಣೆಯ ಬಗ್ಗೆ ತನ್ನ ಇತ್ತೀಚಿನ ಇನ್ಸಾಗ್ರಾಮ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಜಹಾದ್ ಗರ್ಭಧರಿಸಲು ಸಾಧ್ಯವಾಗುತ್ತದೆ ಎಂದು ದಂಪತಿಗಳು ಅರಿತುಕೊಂಡರು. ಹಿಂಜರಿಕೆ ಮತ್ತು ಇತರರ ಅಭಿಪ್ರಾಯಗಳ ಹೊರತಾಗಿಯೂ ಅವರು

ಮಗುವನ್ನು ಸ್ವಾಗತಿಸಲಿರುವ ಕೇರಳದ ಟ್ರಾನ್ಸ್‌ಜೆಂಡರ್ ದಂಪತಿ Read More »

ಕಾಸರಗೋಡು: ಎಸ್. ಐ ಕಿವಿ ಕಚ್ಚಿದ ಆರೋಪಿ

ಸಮಗ್ರ ನ್ಯೂಸ್: ಪೊಲೀಸ್ ಕಸ್ಟಡಿಗೆ ಕರೆದೊಯ್ಯುತ್ತಿದ್ದಾಗ ಆರೋಪಿಯೋರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ ಕಿವಿಯನ್ನು ಕಚ್ಚಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಧೂರು ಅರಂತೋಡಿನ ಸ್ಟ್ಯಾನಿ ರೊಡ್ರಿಗಸ್(45) ಈ ಕೃತ್ಯ ನಡೆಸಿದ್ದು, ಕಾಸರಗೋಡು ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ . ವಿ ವಿಷ್ಣು ನಾಥ್ ರವರ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಗುರುವಾರ ಸಂಜೆ ಘಟನೆ ನಡೆದಿದೆ. ಉಳಿಯತ್ತಡ್ಕದಲ್ಲಿ ಸ್ಟ್ಯಾನಿ ಚಲಾಯಿಸುತ್ತಿದ್ದ ಬೈಕ್ ವ್ಯಾನ್ ಗೆ ಡಿಕ್ಕಿಹೊಡೆದಿದೆ. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಸ್ಟ್ಯಾನಿ ಪಾನಮತ್ತನಾಗಿರುವುದಾಗಿ

ಕಾಸರಗೋಡು: ಎಸ್. ಐ ಕಿವಿ ಕಚ್ಚಿದ ಆರೋಪಿ Read More »

ರಾಜ್ಯದಲ್ಲಿ ಮುಂದೆ ಯಾರು ಅಧಿಕಾರ ಹಿಡಿಯುತ್ತಾರೆ? ಕೋಡಿಮಠ ಸ್ವಾಮೀಜಿ ನುಡಿದಿದ್ದಾರೆ ಭವಿಷ್ಯ

ಸಮಗ್ರ ನ್ಯೂಸ್: ರಾಜ್ಯದ ಪ್ರಸಿದ್ಧ ಮಠಗಳಲ್ಲಿ ಒಂದಾದ ಕೋಡಿಮಠದ ಡಾ. ಶ್ರೀ ಶಿವಾನಂದ ರಾಜೇಂದ್ರ ಸ್ವಾಮಿಜಿಗಳು ಕರ್ನಾಟಕದ ಮುಂಬರುವ ರಾಜಕೀಯ ವಿದ್ಯಮಾನಗಳ ಕುರಿತು ಕೂಡ ಅವರು ಭವಿಷ್ಯವಾಣಿ ಹೇಳಿದ್ದಾರೆ. ಯುಗಾದಿ ನಂತರ ಪ್ರಕೃತಿ ವಿಕೋಪ ಆಗೋದಿಲ್ಲ ಅಂತ ಹೇಳೋದಿಲ್ಲ. ರಾಜಕೀಯ ಅಸ್ಥಿರತೆ ಇದೆ ಯಾವ ಪಕ್ಷವೂ ಕೂಡಿ ಹೋಗೋದು ಕಷ್ಟ. ಚುನಾವಣೆವರೆಗೂ ಏನು ಹೇಳೋಕೆ ಆಗೋದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ ಎಂದಿದ್ದಾರೆ. ಕರ್ನಾಟಕದಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ. ಮಾಡಬಾರದ್ದು‌ ಮಾಡಿದರೆ ಆಗಬಾರದ್ದು ಆಗುತ್ತದೆ.

ರಾಜ್ಯದಲ್ಲಿ ಮುಂದೆ ಯಾರು ಅಧಿಕಾರ ಹಿಡಿಯುತ್ತಾರೆ? ಕೋಡಿಮಠ ಸ್ವಾಮೀಜಿ ನುಡಿದಿದ್ದಾರೆ ಭವಿಷ್ಯ Read More »

ಅಂಗನವಾಡಿ ಸಿಬ್ಬಂದಿಗೆ ಗ್ಯಾಚ್ಯುಟಿ| ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ಸಮಗ್ರ ನ್ಯೂಸ್: ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದ್ದು, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ಗ್ರಾಚ್ಯುಟಿ ಘೋಷಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸರ್ಕಾರ ಸ್ಪಂದಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಸಭೆ ನಡೆಸಿ ಗ್ರಾಚ್ಯುಟಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೆ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 2023-24 ನೇ

ಅಂಗನವಾಡಿ ಸಿಬ್ಬಂದಿಗೆ ಗ್ಯಾಚ್ಯುಟಿ| ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ Read More »

ಮುಲ್ಕಿ ಹಿಟ್ ಆ್ಯಂಡ್ ರನ್ ಪ್ರಕರಣ| ತುಳು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅರ್ಪಿತ್ ಅರೆಸ್ಟ್

ಸಮಗ್ರ ನ್ಯೂಸ್: ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರು ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಾರಿಯಾಗಿದ್ದ ಆರೋಪಿ ಕಾರು ಚಾಲಕನನ್ನು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಕಾರು ಸಮೇತ ಬಂಧಿಸಿರುವುದಾಗಿ ವರದಿಯಾಗಿದೆ. ಆರೋಪಿ ಕಾರು ಚಾಲಕನನ್ನು ಹಳೆಯಂಗಡಿ ಇಂದ್ರ ನಗರ ನಿವಾಸಿ ಅರ್ಪಿತ್ ಎಂದು ಗುರುತಿಸಲಾಗಿದ್ದು, ಈತ ತುಳು ಸ್ಟ್ಯಾಂಡ್ ಆಫ್ ಕಾಮಿಡಿ ಯೂಟ್ಯೂಬರ್ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ

ಮುಲ್ಕಿ ಹಿಟ್ ಆ್ಯಂಡ್ ರನ್ ಪ್ರಕರಣ| ತುಳು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಅರ್ಪಿತ್ ಅರೆಸ್ಟ್ Read More »

ಅಥಣಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಮಹೇಶ ಕುಮಟಳ್ಳಿ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಟ್ಟಲಗಿ,ಕನ್ನಾಳ ಬನ್ನೂರ,ಮುರಗುಂಡಿ,ಭರಮಖೋಡಿ ಗ್ರಾಮದಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮನೆ ಮನೆಗೆ ಬಿಜೆಪಿ ಪಕ್ಷದ ಸ್ಟಿಕರ್ ಅಂಟಿಸುವ ಮೂಲಕ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬ” 8000090009″ಕರೆ ಮಾಡಿ ಬಿಜೆಪಿ ಸದಸ್ಯತ್ವ ಪಡೆಯುವಂತೆ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರು ಮತಕ್ಷೇತ್ರದ ಜನರಿಗೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದಲ್ಲಿ ಹಲವು ಕಾಮಗಾರಿಗಳಿಗೆ ಗುದ್ದಲಿ

ಅಥಣಿ: ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಮಹೇಶ ಕುಮಟಳ್ಳಿ Read More »