February 2023

ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂ.1 ಮಾಡಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ| ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ನಿಂದ ವಾಗ್ದಾಳಿ

ಸಮಗ್ರ ನ್ಯೂಸ್: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗ ಹಾಗೂ ಬೆಳಗಾವಿಗೆ ಭೇಟಿ ನೀಡುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡಿರುವ ನಡುವಲ್ಲೇ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ‘ThankYouModi’ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೋದಿ ವಿರುದ್ಧ ವಾಗ್ದಾಳಿ ನಡೆಸಿದೆ. ಶೇ.40 ಕಮಿಷನ್ ದೂರುಗಳಿಗೆ ಪ್ರಧಾನಿಯಿಂದ ಕನಿಷ್ಠ ಸ್ಪಂದನೆಯೂ ಇಲ್ಲ, ಕ್ರಮವೂ ಇಲ್ಲ. ಹಿಂದೆ ಪ್ರಧಾನಿ ಭೇಟಿಗಾಗಿ ಹಾಕಿದ್ದ ರಸ್ತೆ ಕಿತ್ತು ಬಂದಿದ್ದಕ್ಕೆ ವರದಿ […]

ಭ್ರಷ್ಟಾಚಾರದಲ್ಲಿ ಕರ್ನಾಟಕವನ್ನು ನಂ.1 ಮಾಡಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ| ಹ್ಯಾಷ್ ಟ್ಯಾಗ್ ಬಳಸಿ ಕಾಂಗ್ರೆಸ್ ನಿಂದ ವಾಗ್ದಾಳಿ Read More »

ಶಿವಮೊಗ್ಗದಲ್ಲಿ ಉಕ್ಕಿಹರಿದ ಮೋದಿ ಕನ್ನಡ ಪ್ರೇಮ| ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ| ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ

ಸಮಗ್ರ ನ್ಯೂಸ್: ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಇಂದು(ಫೆ.27) ಶಿವಮೊಗ್ಗದಲ್ಲಿ ನೂತನ ಏರ್ ಪೋರ್ಟ್ ಉದ್ಘಾಟಿಸಿದ್ದಾರೆ. ನಂತರ ಸಮಾರಂಭದಲ್ಲಿ ಭಾಷಣ ಮಾಡಿದ ಪ್ರಧಾನಿ ‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಎನ್ನುವ ಮೂಲಕ ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ವಿಮಾನ ಯಾನ ಕ್ಷೇತ್ರದಲ್ಲಿ ಭಾರತ ಬಹಳಷ್ಟು ಅಭಿವೃದ್ದಿ ಹೊಂದಿದೆ. ಕರ್ನಾಟಕದಲ್ಲಿ ಅಭಿವೃದ್ದಿಯ ರಥ ಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರ ಅಭಿವೃದ್ದಿಯ ಕೆಲಸ ಮಾಡುತ್ತಿದೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಿಗೂ ಏರ್ ಪೋರ್ಟ್ ಆಗಿದೆ. ಹವಾಯಿ ಚಪ್ಪಲಿ

ಶಿವಮೊಗ್ಗದಲ್ಲಿ ಉಕ್ಕಿಹರಿದ ಮೋದಿ ಕನ್ನಡ ಪ್ರೇಮ| ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ| ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ Read More »

ಕಡಬ: ರೆಂಜಿಲಾಡಿಯಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ| ಭಯಬಿದ್ದ ಗ್ರಾಮಸ್ಥರು

ಸಮಗ್ರ ನ್ಯೂಸ್: ಕಡಬ ತಾಲೂಕಿನ ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ರವಿವಾರ ಬೆಳಗ್ಗೆ ಕಾಣಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾಡಾನೆ ಪತ್ತೆ ಕಾರ್ಯ ಚುರುಕುಗೊಳಿಸಿದೆ. ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಲಾಯಿತು. ಕಡಬ ತಾಲೂಕಿನ ರೆಂಜಿಲಾಡಿಯ ಮೀನಾಡಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸ್ಥಳೀಯರ ಆಗ್ರಹದಂತೆ 5 ಸಾಕಾನೆಗಳ ನೆರವಿನಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಮೂರನೇ ದಿನದ ಕಾರ್ಯಾಚರಣೆಯಲ್ಲಿ ನರಹಂತಕ

ಕಡಬ: ರೆಂಜಿಲಾಡಿಯಲ್ಲಿ ಮತ್ತೆ ಪ್ರತ್ಯಕ್ಷಗೊಂಡ ಕಾಡಾನೆ| ಭಯಬಿದ್ದ ಗ್ರಾಮಸ್ಥರು Read More »

ಹಳೆಯ ಲೋಗೊ ಬದಲಾಯಿಸಿದ ನೋಕಿಯಾ| 60 ವರ್ಷಗಳ ಬಳಿಕ ಹೊಸ ರೂಪದತ್ತ ಟೆಲಿಕಾಂ ದೈತ್ಯ

ಸಮಗ್ರ ನ್ಯೂಸ್: ಕಳೆದ 60 ವರ್ಷದಲ್ಲಿ ಇದೇ ಮೊದಲ ಬಾರಿಗೆ ತನ್ನ ಸಾಂಪ್ರದಾಯಿಕ ಲೋಗೋವನ್ನು ಬದಲಾಯಿಸುವ ಮೂಲಕ ಪ್ರಸಿದ್ಧ ಟೆಲಿಕಾಂ ಸಾಧನ ಉತ್ಪಾದಕ ಸಂಸ್ಥೆ ಹೊಸ ಕಾರ್ಯತಂತ್ರದ ಸೂಚನೆ ನೀಡಿದೆ. ಹೊಸ ಲೋಗೋದಲ್ಲಿ ‘ನೋಕಿಯಾ’ ಪದದ ಐದು ಅಕ್ಷರಗಳು ಐದು ವಿಭಿನ್ನ ಆಕಾರದಲ್ಲಿವೆ.‌ಹಳೆಯ ಲೋಗೋದ ವಿಶಿಷ್ಟ ನೀಲಿ ಬಣ್ಣವನ್ನು ಬಳಕೆಯ ಅನುಗುಣವಾಗಿ ಬಣ್ಣಗಳ ಶ್ರೇಣಿಗೆ ಕೈಬಿಡಲಾಗಿದೆ. ‘ಈ ಹಿಂದೆ ಸ್ಮಾರ್ಟ್ ಫೋನ್ ಗಳಿಗೆ ಸಂಬಂಧಿಸಿದ ನಮ್ಮ ಸಂಸ್ಥೆ ಇಂದು ವ್ಯಾಪಾರ ತಂತ್ರಜ್ಞಾನದ ಸಂಸ್ಥೆಯಾಗಿದೆ. 2020ರ ಬಿಕ್ಕಟ್ಟಿನ ಬಳಿಕ

ಹಳೆಯ ಲೋಗೊ ಬದಲಾಯಿಸಿದ ನೋಕಿಯಾ| 60 ವರ್ಷಗಳ ಬಳಿಕ ಹೊಸ ರೂಪದತ್ತ ಟೆಲಿಕಾಂ ದೈತ್ಯ Read More »

80ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ| ರಾಜಾಹುಲಿಯ ರಾಜಕೀಯದ ಏಳುಬೀಳುಗಳೇನು?

ಸಮಗ್ರ ನ್ಯೂಸ್: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ, ರೈತ ಬಂಧು, ಶಿಕಾರಿಪುರ ಎಂದಾಕ್ಷಣ ನೆನಪಿಗೆ ಬರುವುದು ಬಿ.ಎಸ್​ ಯಡಿಯೂರಪ್ಪ.‌ ಇವರು ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ನಾಯಕ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಇತಿಹಾಸ ಬರೆದಿದ್ದಾರೆ. ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರು ಉಳಿದು, ಪಕ್ಷ ಕಟ್ಟುವಲ್ಲಿ, ಅಧಿಕಾರಕ್ಕೆ ತರಲು ತಮ್ಮ ಕೊನೆ ಉಸಿರುವವರೆಗು

80ನೇ ವಸಂತಕ್ಕೆ ಕಾಲಿಟ್ಟ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ| ರಾಜಾಹುಲಿಯ ರಾಜಕೀಯದ ಏಳುಬೀಳುಗಳೇನು? Read More »

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ| ಉದ್ಘಾಟನೆಗೆ ಮೊದಲೇ‌ ಟೋಲ್ ಸಂಗ್ರಹ ಶುರು

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 11ರಂದು ಬೆಂಗಳೂರು – ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಲಿದ್ದು, ಅದಕ್ಕೂ ಮುನ್ನವೇ ಅಂದರೆ ನಾಳೆ(ಫೆ.28)ಯಿಂದಲೇ ಟೋಲ್ ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಟೋಲ್ ದರ ಕುರಿತಂತೆ ಆದೇಶ ಹೊರಡಿಸಲಾಗಿದ್ದು, ಇದು ಬಲು ದುಬಾರಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿರುವ ಬೆಂಗಳೂರು ನಗರ ಜಿಲ್ಲೆಯ ಕಣಿಮಿಣಿಕೆ ಗ್ರಾಮದ ಸಮೀಪ ಕಿ.ಮೀ.23.900 ಮತ್ತು ರಾಮನಗರ ಜಿಲ್ಲೆಯ ಶೇಷಗಿರಿ ಹಳ್ಳಿ ಗ್ರಾಮದ

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ| ಉದ್ಘಾಟನೆಗೆ ಮೊದಲೇ‌ ಟೋಲ್ ಸಂಗ್ರಹ ಶುರು Read More »

ಮಡಿಕೇರಿ: ಹೆಜ್ಜೇನು ದಾಳಿಗೆ ಇಬ್ಬರು ಬಲಿ

ಸಮಗ್ರ ನ್ಯೂಸ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಮರಗೋಡು ಗ್ರಾಮದ ಹುಲಿತಾಳದ ಅಶ್ವಿನ್ ಕುಮಾರ್ (45) ಹಾಗೂ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಕಾರ್ಮಿಕ ವೇಲು ಅವರುಗಳು ಮೃತಪಟ್ಟವರು. ಅಶ್ವಿನ್ ಕುಮಾರ್ ಅವರು ತನ್ನ ತಂಗಿ ಅಪರ್ಣ ಅವರೊಂದಿಗೆ ತೋಟಕ್ಕೆ ಹೋಗಿದ್ದಾಗ ಇಬ್ಬರ ಮೇಲೆ ದಿಢೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ. ಈ ಸಂದರ್ಭ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಬಂದು ಸೇರಿಕೊಂಡರಾದರೂ ಅಶ್ವಿನ್ ಕುಮಾರ್ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಅವರು

ಮಡಿಕೇರಿ: ಹೆಜ್ಜೇನು ದಾಳಿಗೆ ಇಬ್ಬರು ಬಲಿ Read More »

ಎರಡು ಎಲೆಕ್ಟ್ರಿಕ್ ಬಸ್ ಗಳು ಬೆಂಕಿಗಾಹುತಿ| ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್​​​ಆರ್​ಟಿಸಿ)ಯ ಎರಡು ಸ್ಲೀಪರ್ ಲಕ್ಸುರಿ ಬಸ್​​ಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಬಸ್​​ಗಳಲ್ಲಿ ಯಾವುದೇ ಪ್ರಯಾಣಿಕರು ಇದರ ಕಾರಣದಿಂದ ಭಾರಿ ದುರಂತ ತಪ್ಪಿದಂತಾಗಿದೆ. ಹೈದರಾಬಾದ್ – ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಿವ್ವೆನ್ಲಾ ಮಂಡಲದ ಗುಂಪೂಲ ಗ್ರಾಮದ ಹೊರವಲಯದ ಈ ಘಟನೆ ಜರುಗಿದೆ. ಮೊದಲು ಒಂದು ಬಸ್​ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದಲ್ಲೇ ನಿಂತಿದ್ದ

ಎರಡು ಎಲೆಕ್ಟ್ರಿಕ್ ಬಸ್ ಗಳು ಬೆಂಕಿಗಾಹುತಿ| ತಪ್ಪಿದ ಭಾರೀ ಅನಾಹುತ Read More »

ಟಿ.20 ಮಹಿಳಾ ವಿಶ್ವಕಪ್‌| 6ನೇ ಬಾರಿ ಚಾಂಪಿಯನ್ ಪಟ್ಟ ಪಡೆದ ಆಸೀಸ್

ಸಮಗ್ರ ನ್ಯೂಸ್: ಮಹಿಳಾ ಟಿ.20 ವಿಶ್ವಕಪ್ ಫೈನಲ್​ ಹಣಾಹಣಿಯಲ್ಲಿ ದ.ಆಫ್ರಿಕಾವನ್ನು 19 ರನ್​​ಗಳಿಂದ ಮಣಿಸಿದ ಆಸ್ಟ್ರೇಲಿಯಾ ಮಹಿಳೆಯರ ತಂಡ ಟಿ20 ವಿಶ್ವ ಕಪ್ ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿತು. ಈ ಮೂಲಕ ಆಸೀಸ್​ ಬಳಗದ ಪಾಲಿಗೆ ಸತತ ಮೂರನೇ ಹಾಗೂ ಒಟ್ಟು ಆರನೇ ಟಿ20 ವಿಶ್ವ ಕಪ್ ಟ್ರೋಫಿಯಾಗಿದೆ. ಈ ಹಿಂದೆ ದಕ್ಷಿಣ 2010, 2012, 2014, 2018, 2020ರಲ್ಲಿ ಕಪ್​ ಗೆದ್ದಿತ್ತು. ಆದರೆ, ಇದೇ ಮೊದಲ ಬಾರಿಗೆ ಟಿ20 ವಿಶ್ವ ಕಪ್​ನ ಫೈನಲ್​ಗೆ ಪ್ರವೇಶ ಪಡೆದಿದ್ದ

ಟಿ.20 ಮಹಿಳಾ ವಿಶ್ವಕಪ್‌| 6ನೇ ಬಾರಿ ಚಾಂಪಿಯನ್ ಪಟ್ಟ ಪಡೆದ ಆಸೀಸ್ Read More »

ಕಾರ್ಕಳ: ವಾಲಿಬಾಲ್ ಆಟದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು

ಸಮಗ್ರ ನ್ಯೂಸ್: ವಾಲಿಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಸಂತೋಷ (34) ಮೃತ ದುರ್ದೈವಿ.ಕಳೆದ 4 ವರ್ಷಗಳ ಹಿಂದೆ ಹೃದಯಾಘಾತವಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ನಿನ್ನೆ ಸಂಜೆ ಫೆ.25 ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿರುವಾಗ ಮೈದಾನದಲ್ಲಿ ನಿಂತಿದ್ದ ಸಂತೋಷರವರು ಹೃದಯಘಾಟಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಈ

ಕಾರ್ಕಳ: ವಾಲಿಬಾಲ್ ಆಟದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು Read More »