February 2023

ಕಡಬ: ಬಸ್ – ಕಾರು ಡಿಕ್ಕಿ ಪ್ರಕರಣ| ಅಪಘಾತದ ಸ್ಥಳದಲ್ಲೇ ಸಾವನ್ನಪ್ಪಿದ ಮಗು

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಮಗುವೊಂದು ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಸೋಮವಾರ ನಡೆದಿದೆ. ಇಂದು ಮಧ್ಯಾಹ್ನ ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ಹಾಗೂ ಕೆಎಸ್ಸಾರ್ಟಿಸಿ ಬಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಮಗುವೊಂದು ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ […]

ಕಡಬ: ಬಸ್ – ಕಾರು ಡಿಕ್ಕಿ ಪ್ರಕರಣ| ಅಪಘಾತದ ಸ್ಥಳದಲ್ಲೇ ಸಾವನ್ನಪ್ಪಿದ ಮಗು Read More »

ಏರ್ ಶೋ ಬಡತನ ನಿವಾರಿಸುವ ಕಾರ್ಯಕ್ರಮವೇ? ಮಾಜಿ ಮುಖ್ಯಮಂತ್ರಿ ‌ಕುಮಾರಸ್ವಾಮಿ‌ ವ್ಯಂಗ್ಯ

ಸಮಗ್ರ ನ್ಯೂಸ್: ಏರ್​​ಶೋ ಬಡತನ ನಿವಾರಿಸುವ ಕಾರ್ಯಕ್ರಮನಾ? ಏರ್​​ಶೋಗೆ ಬರುವುದರಿಂದ ಬಡತನ ನಿವಾರಣೆ ಆಗುತ್ತಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಏರ್​ ಶೋ ಬಗ್ಗೆ ವ್ಯಂಗ್ಯವಾಡಿದ್ದಾರೆ. ಚುನಾವಣೆ ನೆಪದಲ್ಲಿ ಜನರನ್ನು ದಾರಿ ತಪ್ಪಿಸೋ ಯತ್ನ ನಡೆಸಿದ್ದಾರೆ. ಇದು 14ನೇ ಆವೃತಿಯ ಏರ್ ಶೋ ಆಗಿದೆ. ಇದನ್ನು ಹಿಂದೆ ಇದನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಉತ್ತರ ಕರ್ನಾಟಕ ಭಾಗಕ್ಕೆ ಯಾವ ಪಕ್ಷದಿಂದ ಅನ್ಯಾಯವಾಗಿದೆ. ಮಹದಾಯಿ

ಏರ್ ಶೋ ಬಡತನ ನಿವಾರಿಸುವ ಕಾರ್ಯಕ್ರಮವೇ? ಮಾಜಿ ಮುಖ್ಯಮಂತ್ರಿ ‌ಕುಮಾರಸ್ವಾಮಿ‌ ವ್ಯಂಗ್ಯ Read More »

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ‌ ಶಾಫಿ‌ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ| ಪುತ್ತೂರು ‌ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾಫಿ ಬೆಳ್ಳಾರೆಗೆ ಎಸ್ಡಿಪಿಐ ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಟಿಕೆಟ್​ ಘೋಷಿಸಿದೆ. ಎಸ್​ಡಿಪಿಐನ ಈ ನಡೆ ವಿವಾದ ಕೂಡ ಉಂಟು ಮಾಡಿದೆ. ಸಾಕ್ಷ್ಯಾಧಾರ ಮುಂದಿಟ್ಟು ಎನ್​ಐಎ ಶಾಫಿ ಬೆಳ್ಳಾರೆಯನ್ನು ಬಂಧಿಸಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆಗಳ ವಶದಲ್ಲಿದ್ದು, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸುವುದಾಗಿ ಎಸ್​ಡಿಪಿಐ ಕಾರ್ಯಕರ್ತರ ಸಮಾವೇಶ ದಲ್ಲಿ ಘೋಷಣೆ ಮಾಡಲಾಗಿದೆ. ರಾಜ್ಯಾಧ್ಯಕ್ಷ

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ‌ ಶಾಫಿ‌ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ| ಪುತ್ತೂರು ‌ಕ್ಷೇತ್ರದಿಂದ ವಿಧಾನಸಭೆಗೆ ಟಿಕೆಟ್ Read More »

ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ| ಮೊದಲ ಭೇಟಿ ವೇಳೆ ‘ಅಯ್ಯೋ’ ಎಂದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ವೈಮಾನಿಕ ಪ್ರದರ್ಶನ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದು, ಭಾನುವಾರ ರಾತ್ರಿ(ಫೆ.12) ಅವರು ಬೆಂಗಳೂರಿನ ರಾಜಭವನದಲ್ಲಿ ತಂಗಿದ್ದರು. ಈ ವೇಳೆ ನಟ ಯಶ್, ‘ಕಾಂತಾರ’ ಹೀರೋ ರಿಷಬ್ ಶೆಟ್ಟಿ, ಪುನೀತ್ ರಾಜ್​ಕುಮಾರ್ ಪತ್ನಿ ಅಶ್ವಿನಿ, ಹೊಂಬಾಳೆ ಫಿಲ್ಮ್ಸ್​​ನ ವಿಜಯ್​ ಕಿರಗಂದೂರು ಅವರನ್ನು ಭೇಟಿ ಆಗಿದ್ದಾರೆ. ಇವರ ಜತೆ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ ಕೂಡ ಇದ್ದರು. ಈಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ‘ಪ್ರಧಾನಿ

ಪ್ರಧಾನಿ ಮೋದಿ ಔತಣಕೂಟದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಶ್ರದ್ಧಾ| ಮೊದಲ ಭೇಟಿ ವೇಳೆ ‘ಅಯ್ಯೋ’ ಎಂದ ಮೋದಿ Read More »

ಕಡಬ: ಕೆಎಸ್ಸಾರ್ಟಿಸಿ ಬಸ್ – ಕಾರು ನಡುವೆ ಡಿಕ್ಕಿ ; ನಾಲ್ವರು ಗಂಭೀರ

ಸಮಗ್ರ ನ್ಯೂಸ್: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಕಡಬ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಎಂಬಲ್ಲಿ ಸೋಮವಾರ (ಫೆ.13)ದಂದು ನಡೆದಿದೆ. ಮರ್ಧಾಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಿಯಾ ಕಾರು ಹಾಗೂ ಕೆಎಸ್ಸಾರ್ಟಿಸಿ ವಸ್ ನಡುವೆ ಮರ್ಧಾಳ ಸಮೀಪದ ಐತ್ತೂರು ಗ್ರಾಮ ಪಂಚಾಯತ್ ಎದುರು ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ

ಕಡಬ: ಕೆಎಸ್ಸಾರ್ಟಿಸಿ ಬಸ್ – ಕಾರು ನಡುವೆ ಡಿಕ್ಕಿ ; ನಾಲ್ವರು ಗಂಭೀರ Read More »

ಏರೋ ಇಂಡಿಯಾ 2023ಕ್ಕೆ ಚಾಲನೆ| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

ಸಮಗ್ರ ನ್ಯೂಸ್: ಇಂದಿನಿಂದ 5 ದಿನಗಳ ಕಾಲ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 ಏರ್ ಶೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇಂದಿನಿಂದ 5 ದಿನಗಳ ಕಾಲ ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಕಲರವದ ರಂಗು ಇರಲಿದೆ. ಅಮೆರಿಕಾ, ಬ್ರಿಟನ್​, ಇಸ್ರೇಲ್​, ಇಟಲಿ, ಜಪಾನ್​ ಸೇರಿ 20ಕ್ಕೂ ಹೆಚ್ಚು ರಾಷ್ಟ್ರಗಳ ಯುದ್ಧ ವಿಮಾನಗಳು ಏರ್​​ ಶೋದಲ್ಲಿ ಕಸರತ್ತು ಪ್ರದರ್ಶಿಸಲಿವೆ. ಅಲ್ಲದೆ, ಒಟ್ಟು 809 ವೈಮಾನಿಕ ವಲಯದ ಪ್ರದರ್ಶನಗಳು ನಡೆಯಲಿದೆ. 699 ಭಾರತೀಯ ಪ್ರದರ್ಶಕರು, 110

ಏರೋ ಇಂಡಿಯಾ 2023ಕ್ಕೆ ಚಾಲನೆ| ಇಂದಿನಿಂದ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ Read More »

ಕೊಡಗು – ಕೇರಳ ಗಡಿಯಲ್ಲಿ ಸಕ್ರಿಯಗೊಂಡ ನಕ್ಸಲರು| ಪೊಲೀಸರಿಂದ ಕೂಂಬಿಂಗ್ ಆರಂಭ

ಸಮಗ್ರ ನ್ಯೂಸ್: ಕೊಡಗು ಜಿಲ್ಲೆಯ ಕೇರಳ ಗಡಿ ಆರಳಂ ಗ್ರಾಮದಲ್ಲಿ ಮಹಿಳೆ ಸೇರಿದಂತೆ ಶಸ್ತ್ರಸಜ್ಜಿತ ಐವರು ನಕ್ಸಲರು ಕಾಣಿಸಿಕೊಂಡಿದ್ದಾರೆ. ಮನೆಯೊಂದರಲ್ಲಿ ಊಟ ಮಾಡಿ ಅಕ್ಕಿ, ಸಾಬೂನು, ಉಪ್ಪು ತೆಗೆದುಕೊಂಡು ಹೋಗಿರುವ ಘಟನೆ ವರದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ಶುರು ಮಾಡಿದ್ದಾರೆ. ತಂಡದಲ್ಲಿ ನಕ್ಸಲರ ಕಬಿನಿ, ಬಾಣಾಸುರ ಗುಂಪುಗಳ ಸದಸ್ಯರು ಒಟ್ಟಾಗಿದ್ದರು ಎನ್ನಲಾಗಿದೆ. ಇದುವರೆಗೂ ಈ 2 ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದರು. 5 ತಿಂಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಏಕಾಏಕಿ 2 ಗುಂಪುಗಳ ಸದಸ್ಯರು

ಕೊಡಗು – ಕೇರಳ ಗಡಿಯಲ್ಲಿ ಸಕ್ರಿಯಗೊಂಡ ನಕ್ಸಲರು| ಪೊಲೀಸರಿಂದ ಕೂಂಬಿಂಗ್ ಆರಂಭ Read More »

ಮಡಿಕೇರಿ: ಹುಲಿ ದಾಳಿಗೆ ಬಾಲಕ ಬಲಿ

ಸಮಗ್ರ ನ್ಯೂಸ್: 12 ವರ್ಷದ ಬಾಲಕನ ಮೇಲೆ ಹುಲಿ ದಾಳಿ ಮಾಡಿದ್ದು, ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಗ್ರಾಮದಲ್ಲಿ ನಡೆದಿದೆ. ಚೇತನ್(12) ಮೃತ ಬಾಲಕ. ದಾಳಿ ಮಾಡಿದ ಹುಲಿ ಬಾಲಕನನ್ನು ಕೊಂದು ತೊಡೆ ಭಾಗವನ್ನು ತಿಂದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಡಿಕೇರಿ: ಹುಲಿ ದಾಳಿಗೆ ಬಾಲಕ ಬಲಿ Read More »

ಕರ್ಪೂರದ ಆರೋಗ್ಯಕರ ಬಳಕೆ ಹೇಗೆ ಗೊತ್ತಾ? ಇದರಲ್ಲಿದೆ ಹಲವು ಔಷಧೀಯ ಗುಣ

ಸಮಗ್ರ ನ್ಯೂಸ್: ಕರ್ಪೂರವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ನಂಬಿಕೆಗಳ ಪ್ರಕಾರ, ಈ ಕರ್ಪೂರವು ನಿಮ್ಮ ಅನೇಕ ಸಮಸ್ಯೆಗಳನ್ನು ಕ್ಷಣಮಾತ್ರದಲ್ಲಿ ನಿವಾರಿಸುತ್ತದೆ. ಇದು ದೈನಂದಿನ ದಿನಚರಿಯಲ್ಲಿ ಬಳಸಬಹುದಾದ ಉಪಯುಕ್ತ ಸಾಧನ ಹಾಗೂ ಔಷಧೀಯ ವಸ್ತು ಕರ್ಪೂರ. ಎರಡು ರೂಪಾಯಿಗೆ ಸಿಗುವ ಈ ಕರ್ಪೂರದಲ್ಲಿ ಇಂತಹ ಹಲವು ಪ್ರಯೋಜನಗಳಿವೆ. ಕರ್ಪೂರ ಒಂದು ವಿಶೇಷವಾದ ರಾಸಾಯನಿಕ. ಪೂಜೆ, ಔಷಧ ಮತ್ತು ಸುಗಂಧದ ಎಲ್ಲಾ ಮೂರು ಉದ್ದೇಶಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತದೆ. ನಕಾರಾತ್ಮಕ ಶಕ್ತಿಯನ್ನು ಓಡಿಸಲು ಇದು ತುಂಬಾ ಉಪಯುಕ್ತ ವಿಷಯವೆಂದು ಪರಿಗಣಿಸಲಾಗಿದೆ. ಕರ್ಪೂರದ

ಕರ್ಪೂರದ ಆರೋಗ್ಯಕರ ಬಳಕೆ ಹೇಗೆ ಗೊತ್ತಾ? ಇದರಲ್ಲಿದೆ ಹಲವು ಔಷಧೀಯ ಗುಣ Read More »

ಟರ್ಕಿ ಭೂಕಂಪದ ಬೆನ್ನಲ್ಲೇ ಭಾರತದಲ್ಲೂ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ಸಿಕ್ಕಿಂನ ಜನ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದಷ್ಟೇ ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಆದರೀಗ ಇದರ ಬೆನ್ನಲ್ಲೇ ಸೋಮವಾರ ಬೆಳಗ್ಗೆ ಈಶಾನ್ಯ ರಾಜ್ಯ ಸಿಕ್ಕಿಂನ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿದೆ. ಈವರೆಗೂ ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ, ನಸುಕಿನ ಜಾವ 4.15 ಕ್ಕೆ ಕಂಪನದ ಅನುಭವವಾಯಿತು. ಇದರ ಕೇಂದ್ರವು ಈಶಾನ್ಯ ಯುಕ್ಸೋಮ್‌ನಲ್ಲಿತ್ತು. ಭೂಕಂಪದ ಕೇಂದ್ರಬಿಂದು ಮೇಲ್ಮೈಯಿಂದ 70 ಕಿಲೋಮೀಟರ್

ಟರ್ಕಿ ಭೂಕಂಪದ ಬೆನ್ನಲ್ಲೇ ಭಾರತದಲ್ಲೂ ಕಂಪಿಸಿದ ಭೂಮಿ| ಬೆಚ್ಚಿಬಿದ್ದ ಸಿಕ್ಕಿಂನ ಜನ Read More »