February 2023

ಮಂಗಳೂರು: ಬಸ್ ಢಿಕ್ಕಿ- ವೃದ್ದೆ ಮೃತ್ಯು

ಸಮಗ್ರ ನ್ಯೂಸ್: ರಸ್ತೆ ದಾಟುತ್ತಿದ್ದ ವೃದ್ದೆಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಗುರುವಾರ ಸಂಭವಿಸಿದೆ. ಮೃತರಾದವರನ್ನು ಆಕಾಶಭವನ ನಿವಾಸಿ ಶ್ರೀಮತಿ ಗೀತಾ (74 ವರ್ಷ) ಎಂದು ಗುರುತಿಸಲಾಗಿದೆ. ಬಸ್ಸು ಚಾಲಕ ವನೀಶ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೀತಾ ಅವರಿಗೆ ಢಿಕ್ಕಿ […]

ಮಂಗಳೂರು: ಬಸ್ ಢಿಕ್ಕಿ- ವೃದ್ದೆ ಮೃತ್ಯು Read More »

ಕುಟುಕು ಕಾರ್ಯಾಚರಣೆ ಎಫೆಕ್ಟ್| ಬಿಸಿಸಿಐ ಗೆ ಚೇತನ್ ಶರ್ಮಾ ರಾಜೀನಾಮೆ

ಸಮಗ್ರ ನ್ಯೂಸ್: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಈ ರಾಜೀನಾಮೆಯನ್ನು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಂಗಿಕಾರ ಮಾಡಿದ್ದಾರೆ. ಖಾಸಗಿ ಚಾನೆಲ್‌ವೊಂದರ ರಹಸ್ಯ ಕಾರ್ಯಚರಣೆ ವೇಳೆ ಚೇತನ್ ಶರ್ಮಾ, ಭಾರತ ತಂಡದ ಕೆಲವು ಆಂತರಿಕ ವಿಚಾರಗಳನ್ನು ಬಹಿರಂಗಗೊಳಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಭಾರತ ತಂಡದ ಕೆಲ ಆಟಗಾರರು ಫಿಟ್ನೆಸ್‌ ಸಾಬೀತಿಗೆ ಇಂಜೆಕ್ಷನ್‌ ತೆಗೆದುಕೊಳ್ಳುತ್ತಾರೆ ಎಂದಿದ್ದ ಚೇತನ್‌ ಶರ್ಮಾ, ವಿರಾಟ್ ಕೊಹ್ಲಿ

ಕುಟುಕು ಕಾರ್ಯಾಚರಣೆ ಎಫೆಕ್ಟ್| ಬಿಸಿಸಿಐ ಗೆ ಚೇತನ್ ಶರ್ಮಾ ರಾಜೀನಾಮೆ Read More »

ಶಿವ ಶಿವ ಎಂದರೆ ಭಯವಿಲ್ಲ| ಮಹಾ ಶಿವರಾತ್ರಿ ವಿಶೇಷ ಲೇಖನ| ಆಚರಣೆ ಯಾಕೆ? ಹೇಗೆ?

ಸಮಗ್ರ ನ್ಯೂಸ್: ಹಿಂದೂ ಆಚರಣೆಗಳಲ್ಲಿ ಶಿವರಾತ್ರಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ. ಮಹಾಶಿವರಾತ್ರಿಯಂದು ಶಿವನನ್ನು ಶ್ರದ್ಧಾಭಕ್ತಿಯಿಂದ ಪೂಜಿಸುವುದರಿಂದ ದುಃಖಗಳು ದೂರವಾಗಿ ಸುಖವು ಪ್ರಾಪ್ತಿಯಾಗುತ್ತದೆ ಮತ್ತು ಶಿವನ ಪ್ರೀತಿಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದ ಮಹಾ ಶಿವರಾತ್ರಿಯಂದು ಶುದ್ಧ ಮನಸ್ಸಿನಿಂದ ಉಪವಾಸ ಮತ್ತು ಜಾಗರಣೆಯಿಂದ ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಬೇಕು. ಒಂದು ಮಹಾ ಶಿವರಾತ್ರಿ ವ್ರತವನ್ನು ಆಚರಿಸಿದರೆ ಸಾವಿರ ಏಕಾದಶಿ ವ್ರತಗಳಿಗೆ ಸಮಾನವಾದ ಫಲಗಳು ಮತ್ತು ಕಾಶಿಯಲ್ಲಿ ಮುಕ್ತಿ ಪುಣ್ಯವು ದೊರೆಯುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಮಹಾಶಿವರಾತ್ರಿಯ ಆಚರಣೆ ನಮ್ಮ ನಾಡಿನಲ್ಲಿ

ಶಿವ ಶಿವ ಎಂದರೆ ಭಯವಿಲ್ಲ| ಮಹಾ ಶಿವರಾತ್ರಿ ವಿಶೇಷ ಲೇಖನ| ಆಚರಣೆ ಯಾಕೆ? ಹೇಗೆ? Read More »

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ

ಸಮಗ್ರ ನ್ಯೂಸ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ನಿವಾಸಕ್ಕೆ ಬಾಂಬ್‌ ದಾಳಿ ಮಾಡುವ ಕುರಿತು ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ಬೆದರಿಕೆ ಕರೆ ಬಂದಿದ್ದು, ಲಖನೌನಲ್ಲಿರುವ ಸಿಎಂ ಯೋಗಿ ನಿವಾಸದ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳಿಗೆ ವ್ಯಕ್ತಿಯೊಬ್ಬ ಸಿಎಂ ಯೋಗಿ ನಿವಾಸದ ಸುತ್ತ ಬಾಂಬ್‌ ಇರಿಸಲಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾನೆ. ಇದರಿಂದಾಗಿ, ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿಯು ನಿವಾಸದ ಸುತ್ತ ಭಾರಿ ತಪಾಸಣೆ ನಡೆಸಿದ್ದಾರೆ. ಇದಾದ ಬಳಿಕ ಯಾವುದೇ ಬಾಂಬ್‌

ಯೋಗಿ ಆದಿತ್ಯನಾಥ್ ನಿವಾಸಕ್ಕೆ ಬಾಂಬ್ ಬೆದರಿಕೆ ಕರೆ| ಯುಪಿ ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ Read More »

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ

ಸಮಗ್ರ ನ್ಯೂಸ್: ಎಲ್ಲರೂ ಮದುವೆಯಾದ ಮೇಲೆ ಮಕ್ಕಳನ್ನು ಬಯಸುವುದು ಸಹಜ. ಆದರೆ ಕೆಲವರಿಗೆ ಅವರ ಬಯಕೆ ಈಡೇರುವುದಿಲ್ಲ. ಇಲ್ಲೊಬ್ಬ ಯುವಕನಿಗೂ ಹಾಗೆಯೇ ಆಗಿದ್ದು ಮದುವೆಯಾಗಿ ಐದು ವರ್ಷಗಳಾಗಿದ್ದು ಮಕ್ಕಳಾಗಿಲ್ಲ. ಈತನಿಗೆ ಮಕ್ಕಳಿಲ್ಲದ ಕೊರಗು ಬಾಧಿಸಿದ್ದು ಪತ್ನಿ ಇಲ್ಲದ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಧರ್ಮರಾಜು(28) ಎಂದು ಗುರುತಿಸಲಾಗಿದ್ದು ಈತ ಜಂಗಲ್ ರೆಸಾರ್ಟ್ ನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ರೆಸಾರ್ಟ್​ನಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಐದು ವರ್ಷಗಳಿಂದ

ಮಕ್ಕಳಾಗದ ಕೊರಗು; ಆತ್ಮಹತ್ಯೆ ಮಾಡಿಕೊಂಡ ಯುವಕ Read More »

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು| ತಾಯಿಯಿಂದ ಸಿಕ್ತು ಬಿಸಿಬಿಸಿ ಕಜ್ಜಾಯ! ಇಲ್ಲಿದೆ ವಿಡಿಯೋ

ಪ್ರೇಮಿಗಳ ದಿನ ಎಲ್ಲೆಡೆ ಲವ್ ಬರ್ಡ್‌ಗಳು ಓಡಾಡುವುದನ್ನು ನೋಡಬಹುದು. ತಮ್ಮ ಪ್ರೀತಿಪಾತ್ರರನ್ನು ಈ ದಿನ ಭೇಟಿ ಮಾಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಿರುವಾಗ ಆಕೆಯೂ ಹಾಗೆ ಮಾಡಿದಳು. ಮನೆಯವರ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರ ಹೋಗುವುದು ಅಸಾಧ್ಯವೆಂದು ತಿಳಿದು ಮನೆಯ ಟೆರೇಸ್‌ನಲ್ಲಿ ಲವರ್‌ನ್ನು ಭೇಟಿಯಾದಳು. ಆದರೆ ಅಷ್ಟರಲ್ಲೇ ತನ್ನ ತಾಯಿ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉತ್ತರಭಾರತದಲ್ಲಿ ಈ ಘಟನೆ ನಡೆದಿದೆ. ಮುಂದೆ ನಡೆದದ್ದು ಮಾರಿಹಬ್ಬ… ತಾಯಿಯು ತನ್ನ ಚಪ್ಪಲಿ (Slippers)ಗಳನ್ನು ಎತ್ತಿಕೊಂಡು ಇಬ್ಬರನ್ನು ಹೊಡೆಯಲು ಹಿಂಜರಿಯಲಿಲ್ಲ, ಬಳಕೆದಾರರು ಇಡೀ ಘಟನೆಯ ವೀಡಿಯೊವನ್ನು

ಪ್ರೇಮಿಗಳ ದಿನದಂದು ಮನೆ ಟೆರೇಸ್ ನಲ್ಲಿ ಪ್ರೇಮಿ ಜೊತೆ ಸಿಕ್ಕಿಬಿದ್ದ ಮಗಳು| ತಾಯಿಯಿಂದ ಸಿಕ್ತು ಬಿಸಿಬಿಸಿ ಕಜ್ಜಾಯ! ಇಲ್ಲಿದೆ ವಿಡಿಯೋ Read More »

ಅಥಣಿ: ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಬನಜವಾಡ ಗ್ರಾಮದ ಶ್ರೀದೇವಿ ಮಾಂಗ ಹಾಗೂ ಆಗ್ರಾಣಿ ಇಂಗಳಗಾಂವ್ ಗ್ರಾಮದ ಕಲ್ಪನಾ ಮಾದರ್ ಗಂಭೀರವಾಗಿ ಗಾಯಗೊಂಡಿದ್ದು, ಅಥಣಿ ಪಟ್ಟಣದ ಹಲ್ಯಾಳ ರಸ್ತೆಯಲ್ಲಿ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ಕಬ್ಬು ತುಂಬಿದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಪರಿಣಾಮ ಪಾದಚಾರಿಗಳ ಮೇಲೆ ಬಿದ್ದಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರನ್ನು ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಕಬ್ಬಿನಡಿ ಸಿಲುಕಿದ

ಅಥಣಿ: ಕಬ್ಬು ತುಂಬಿದ ಟ್ರಾಕ್ಟರ್ ಪಲ್ಟಿ; ಇಬ್ಬರು ಗಂಭೀರ Read More »

ಚಾರ್ಮಾಡಿ ಘಾಟ್: ಪಾದಯಾತ್ರಿಗಳಿಗೆ ಕುಡುಕನ ಕಾಟ

ಸಮಗ್ರ ನ್ಯೂಸ್:ಧರ್ಮಸ್ಥಳಕ್ಕೆ ಕೆಲ ದಿನಗಳಿಂದ ಸಾವಿರಾರು ಭಕ್ತಾಧಿಗಳು ಪಾದಯಾತ್ರೆಯಲ್ಲಿ ಸಾಗುತ್ತಿದ್ದು ಚಾರ್ಮಾಡಿ ಘಾಟ್ ನಲ್ಲಿ ಕುಡುಕನೊಬ್ಬ ಪಾದಯಾತ್ರಿಗಳಿಗೆ ಕಾಟ ಕೊಡುತ್ತಿದ್ದ ದೃಶ್ಯ ಕಂಡು ಬಂತು. ಚನ್ನರಾಯಪಟ್ಟಣ ಮೂಲದ ವ್ಯಕ್ತಿಯೊಬ್ಬ ಪಾದಯಾತ್ರೆ ನೆಪದಲ್ಲಿ ಬಂದು ಕುಡಿದು ಅಸಭ್ಯವಾಗಿ ವರ್ತಿಸುತ್ತಿದ್ದ. ಪಾದಯಾತ್ರಿಗರು ಕುಡಿದು ಪಾದಯಾತ್ರೆಗೆ ಬಂದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡರು. ಚಾರ್ಮಾಡಿ ಘಾಟ್ ನಲ್ಲಿ ರಸ್ತೆ ಬದಿಯ ಪ್ರಪಾತಕ್ಕೆ ಕಾಲು ಜಾರಿ ಬೀಳುವ ಅಪಾಯವಿರುವುದರಿಂದ ಪಾನಮತ್ತನಾಗಿ ಚಾರ್ಮಾಡಿ ಘಾಟ್ ನಲ್ಲಿದ್ದ ವ್ಯಕ್ತಿಗೆ ಸ್ಥಳೀಯರು ಹಾಗೂ ಪಾದಯಾತ್ರಿಗರು ಬುದ್ದಿ ಹೇಳಿ ಕಳಿಸಿದರು.

ಚಾರ್ಮಾಡಿ ಘಾಟ್: ಪಾದಯಾತ್ರಿಗಳಿಗೆ ಕುಡುಕನ ಕಾಟ Read More »

ಉಜಿರೆ: ಕಾಲೇಜಿನ ವಿಧ್ಯಾರ್ಥಿನಿ ನಾಪತ್ತೆ

ಸಮಗ್ರ ನ್ಯೂಸ್: ವಿಧ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಾಪತ್ತೆಯಾಗಿರುವ ವಿದ್ಯಾರ್ಥಿನಿ ದೀಕ್ಷಿತಾ (18) ಎಂದು ಗುರುತಿಸಲಾಗಿದೆ. ಇವರು ಉಜಿರೆ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದು, ಈಕೆ ಹಾಸ್ಟೆಲ್ ನಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಹಾಸ್ಟೆಲ್ ನಿಂದ ಮನೆಗೆಂದು ಹೋದವಳು ಮನೆಗೆ ಹೋಗದೆ ನಾಪತ್ತೆಯಾಗಿದ್ದಾಳೆ ಎಂದು ದೂರಲಾಗಿದೆ. ಮಗಳು ನಾಪತ್ತೆಯಾಗಿರುವ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಕೆಯ ಬಗ್ಗೆ ಯಾವುದಾದರೂ ಮಾಹಿತಿ ಸಿಕ್ಕಿದಲ್ಲಿ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ

ಉಜಿರೆ: ಕಾಲೇಜಿನ ವಿಧ್ಯಾರ್ಥಿನಿ ನಾಪತ್ತೆ Read More »

ಚಂಡಮಾರುತ ಆರ್ಭಟ; ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ

ಸಮಗ್ರ ನ್ಯೂಸ್: ಬಂದರು ನಗರಿ ಮಂಗಳೂರಿನ ಕರಾವಳಿ , ಕೇರಳದ ಹಲವು ಭಾಗದಲ್ಲಿ ಭಾರೀ ಚಂಡಮಾರುತ ಆರ್ಭಟ ಹೆಚ್ಚಾಗಲಿದೆ ಎಂದು ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಸಂಶೋಧನಾ ಕೇಂದ್ರ ಮಾಹಿತಿ ನೀಡಿದೆ. ಇಂದು ರಾತ್ರಿ ಕರಾವಳಿ ಮತ್ತು ಕೇರಳದ ಹಲವೆಡೆ ಎತ್ತರದ ಅಲೆಗಳು ಮತ್ತು ಸಮುದ್ರದ ಅಲೆಗಳು 1.4 ರಿಂದ 2.0 ಮೀಟರ್ ಎತ್ತರದಷ್ಟು ಆರ್ಭಟ ಹೆಚ್ಚಾಗಲಿದೆ. ವೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಅಷ್ಟೇ ಅಲ್ಲದೇ ಸಮುದ್ರ ದಡಗಳಲ್ಲಿ ವಾಸಿಸುವ ಕರಾವಳಿ ನಿವಾಸಿಗಳು ಸಮುದ್ರ ತೀರಕ್ಕೆ

ಚಂಡಮಾರುತ ಆರ್ಭಟ; ಕರ್ನಾಟಕ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ Read More »