ಹಳೆ ದ್ವೇಷಕ್ಕೆ ಬೀದಿ ಹೆಣವಾದ ಯುವಕ| ಶರಣರ ನಾಡಿನಲ್ಲೊಂದು ಮರ್ಡರ್

ಸಮಗ್ರ ನ್ಯೂಸ್: ಹಳೆಯ ದ್ವೇಷಕ್ಕೆ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದ ದುರಂತ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಬಳಿ ನಡೆದಿದೆ.

Ad Widget ... ..

ನಡು ರಸ್ತೆಯಲ್ಲೇ ಇಬ್ಬರು ಯುವಕರ ಗುಂಪಿನ ನಡುವಿನ ಗಲಾಟೆ ತೀವ್ರಗೊಂಡು ಆನಂದ್‌ ಪುಲೆ ಎಂಬ ಯುವಕನನ್ನು ಕತ್ತಿಯಿಂದ ಕಡಿದು ಬರ್ಬರವಾಗಿ (26)ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ .

Ad Widget

ಗಾಯಾಳುವನ್ನು ಚಿಕಿತ್ಸೆಗಾಗಿ‌‌ ಕೂಡಲೇ ಉಮರ್ಗಾ ಆಸ್ಪತ್ರೆಗೆ ರವಾನಿಸಲಾಯಿತಾದರೂ ಮಾರ್ಗ ಮಧ್ಯೆ ಆನಂದ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದುಯಬಂದಿದೆ. ಗಲಾಟೆಯಲ್ಲಿ ಇನ್ನೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ ಈ ಮರ್ಡರ್‌ ಸಂಬಂಧಿಸಿ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿದ್ದಾರೆ ಎಂದು ವರದಿಯಾಗಿದೆ.

Leave a Comment

Your email address will not be published. Required fields are marked *