ಮಡಿಕೇರಿ: ಹೆಜ್ಜೇನು ದಾಳಿಗೆ ಇಬ್ಬರು ಬಲಿ

ಸಮಗ್ರ ನ್ಯೂಸ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಮರಗೋಡು ಗ್ರಾಮದ ಹುಲಿತಾಳದ ಅಶ್ವಿನ್ ಕುಮಾರ್ (45) ಹಾಗೂ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಕಾರ್ಮಿಕ ವೇಲು ಅವರುಗಳು ಮೃತಪಟ್ಟವರು.

Ad Widget ... ..

ಅಶ್ವಿನ್ ಕುಮಾರ್ ಅವರು ತನ್ನ ತಂಗಿ ಅಪರ್ಣ ಅವರೊಂದಿಗೆ ತೋಟಕ್ಕೆ ಹೋಗಿದ್ದಾಗ ಇಬ್ಬರ ಮೇಲೆ ದಿಢೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ. ಈ ಸಂದರ್ಭ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಬಂದು ಸೇರಿಕೊಂಡರಾದರೂ ಅಶ್ವಿನ್ ಕುಮಾರ್ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢ ಪಡಿಸಿದರು ಎಂದು ತಿಳಿದು ಬಂದಿದೆ. ತಂಗಿ ಅಪರ್ಣರಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

Ad Widget

ಮತ್ತೊಂದು ಪ್ರಕರಣದಲ್ಲಿ ಕೂಲಿ ಕಾರ್ಮಿಕ ವೇಲು (50) ಅವರು ಪತ್ನಿ ಲಕ್ಷ್ಮಿಯೊಂದಿಗೆ ತೋಟಕ್ಕೆ ಕೆಲಸಕ್ಕೆಂದು ತೆರಳಿದ್ದಾಗ ಹೆಜ್ಜೇನು ದಾಳಿ ಮಾಡಿದೆ. ಇಬ್ಬರನ್ನು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ವೇಲು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಲಕ್ಷ್ಮೀ ಅವರಿಗೆ ಚಿಕಿತ್ಸೆ ಮುಂದುವರಿದಿದೆ.

Leave a Comment

Your email address will not be published. Required fields are marked *