ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್ಆರ್ಟಿಸಿ)ಯ ಎರಡು ಸ್ಲೀಪರ್ ಲಕ್ಸುರಿ ಬಸ್ಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ಗಳಲ್ಲಿ ಯಾವುದೇ ಪ್ರಯಾಣಿಕರು ಇದರ ಕಾರಣದಿಂದ ಭಾರಿ ದುರಂತ ತಪ್ಪಿದಂತಾಗಿದೆ.
ಹೈದರಾಬಾದ್ – ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಿವ್ವೆನ್ಲಾ ಮಂಡಲದ ಗುಂಪೂಲ ಗ್ರಾಮದ ಹೊರವಲಯದ ಈ ಘಟನೆ ಜರುಗಿದೆ. ಮೊದಲು ಒಂದು ಬಸ್ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದಲ್ಲೇ ನಿಂತಿದ್ದ ಮತ್ತೊಂದು ಬಸ್‌ಗೂ ಅಗ್ನಿ ಆವರಿಸಿದೆ. ಪರಿಣಾಮ ಎರಡೂ ಬಸ್‌ಗಳು ದೊಡ್ಡ ಪ್ರಮಾಣದ ಬೆಂಕಿಯಿಂದ ಹೊತ್ತಿ ಉರಿದಿವೆ. ಇದರಿಂದ ದಟ್ಟ ಹೊಗೆ ಕೂಡ ಆವರಿಸಿಕೊಂಡಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನ ಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿಯನ್ನು ನಂದಿಸಿದ್ದಾರೆ.
ಮೊದಲ ಬಸ್‌ನಲ್ಲಿನ ಬ್ಯಾಟರಿ ಸಮಸ್ಯೆ ಸರಿಪಡಿಸಲು ಎರಡು ಬಸ್ಗಳ ನಡುವೆ ತಂತಿಗಳ ಸಹಾಯದಿಂದ ಜೋಡಿಸಿ ಸರಿಪಡಿಸಲು ಯತ್ನಿಸುತ್ತಿದ್ದಾರೆ. ಅಷ್ಟರಲ್ಲಿ ಸೂರ್ಯಪೇಟ್ ಡಿಪೋದಿಂದ ಕರೆಸಿದ್ದ ಬಸ್ನಲ್ಲಿ ಬ್ಯಾಟರಿ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಈ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ವಲ್ಪ ಹೊತ್ತಿನಲ್ಲೇ ಇಡೀ ಬಸ್ಗೆ ಬೆಂಕಿ ಆವರಿಸಿಕೊಂಡು ಮತ್ತೊಂದು ಬಸ್‌ಗೂ ಅದು ವ್ಯಾಪಿಸಿದೆ ಎಂದು ತಿಳಿದು ಬಂದಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹಾತೋಟಿಗೆ ತಂದಿದ್ದಾರೆ. ಆದರೆ, ಎರಡೂ ಬಸ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
It’s not electric vehicles.