Ad Widget .

ಫೆ.26ರಿಂದ ಮಾ.4ರವರೆಗಿನ‌ ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಈವಾರದಲ್ಲಿ ನಿಮಗೆ ಅತ್ಯುತ್ತಮವಾಗಿರಲಿ ಎಂದು ಹೇಳುತ್ತಾ ಜ್ಯೋತಿಷ್ಯದ ಪ್ರಕಾರ ಫೆಬ್ರವರಿ 26 ರಿಂದ ಮಾರ್ಚ್ 5ವರೆಗೆ ಪ್ರತಿಯೊಂದು ರಾಶಿಗಳ ರಾಶಿ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ:

Ad Widget . Ad Widget .

ಮೇಷರಾಶಿ: ವೃತ್ತಿಯಲ್ಲಿ ಹೊಸ ಸಂಕಷ್ಟಗಳು ಎದುರಾಗಬಹುದು. ಪರರನ್ನು ಟೀಕಿಸುವ ಬದಲು ನಿಮ್ಮ ಏಳಿಗೆ ಬಗ್ಗೆ ಚಿಂತಿಸಿರಿ. ಹಣದ ಒಳಹರಿವು ಕಡಿಮೆ ಇರುತ್ತದೆ. ವ್ಯಾಪಾರಿಗಳು ಗ್ರಾಹಕರನ್ನು ವಿಶ್ವಾಸದಿಂದ ಕಾಣುವುದು ಒಳ್ಳೆಯದು. ಕೆಲವು ವ್ಯಾಪಾರಿಗಳಿಗೆ ವಿದೇಶಿ ವ್ಯಾಪಾರದ ಸಂಬಂಧ ಕುದುರುತ್ತದೆ. ಕೆಲವು ಸಂಶೋಧಕರಿಗೆ ಹೊಸ ರೀತಿಯ ಆವಿಷ್ಕಾರದಿಂದ ಹೆಸರು ಬರುತ್ತದೆ. ಕೃಷಿಯಿಂದ ಆದಾಯ ಬರುತ್ತದೆ. ಕೃಷಿಕರಿಗೆ ಹೆಚ್ಚು ಸೌಲಭ್ಯ ದೊರೆಯುತ್ತದೆ. ಸಂಸಾರದಲ್ಲಿ ಮುಸುಕಿನ ಗುದ್ದಾಟಗಳು ನಡೆಯಬಹುದು. ಕೆಲಸದಲ್ಲಿ ಆದ ವ್ಯತ್ಯಾಸಗಳ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಶ್ನಿಸುವರು. ಗಣಿಗಾರಿಕೆ ನಡೆಸುವವರಿಗೆ ಇದ್ದ ಸರ್ಕಾರಿ ಕಾನೂನು ತೊಡಕುಗಳು ನಿವಾರಣೆಯಾಗುತ್ತವೆ. ಹೆಂಡತಿ ಮತ್ತು ಮಕ್ಕಳ ಸಂತೋಷಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.

Ad Widget . Ad Widget .

ವೃಷಭ ರಾಶಿ: ವೃತ್ತಿಯಲ್ಲಿ ಸತತ ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರದರ್ಶಿಸುವ ನಿಮಗೆ ಹಿರಿಯ ಅಧಿಕಾರಿಗಳ ಬೆಂಬಲ ದೊರೆಯುತ್ತದೆ. ರೇಷ್ಮೆ ಬಟ್ಟೆ ವ್ಯವಹಾರ ಮಾಡುವವರಿಗೆ ಹೆಚ್ಚು ಆದಾಯವಿರುತ್ತದೆ. ಉದ್ದಿಮೆದಾರರಿಗೆ ಕಾರ್ಮಿಕರು ಕೊಡುವ ಸಲಹೆಗಳು ಬಹಳ ಅಮೂಲ್ಯವಾಗಿರುತ್ತದೆ. ಲೇವಾದೇವಿ ವ್ಯವಹಾರ ಆದಷ್ಟು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ನವೋದ್ಯಮಿಗಳಿಗೆ ಸರ್ಕಾರದ ಸಹಾಯ, ಸವಲತ್ತುಗಳು ದೊರೆಯುತ್ತವೆ. ಸ್ವಲ್ಪ ಧನಸಹಾಯ ದೊರೆಯುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಗಳಿಗೆ ಅವರ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬೇಕಾದ ಕಾರಣವೊಂದು ದೊರೆಯುತ್ತದೆ. ನೀರಿನ ವ್ಯತ್ಯಾಸದಿಂದ ಅನಾರೋಗ್ಯ ಬರಬಹುದು. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವಿರುತ್ತದೆ.

ಮಿಥುನ ರಾಶಿ: ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುವವರು ಹೆಚ್ಚು ಜಾಗ್ರತೆವಹಿಸಿರಿ. ಕಂಪನಿಯ ಕೆಲಸಕ್ಕಾಗಿ ಈಗ ತುರ್ತು ಪ್ರಯಾಣ ಮಾಡುವ ಸಂದರ್ಭವಿದೆ. ಅಬಕಾರಿ ಗುತ್ತಿಗೆದಾರರಿಗೆ ಉತ್ತಮ ವ್ಯವಹಾರವಿರುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳುವುದು ನಿಮಗೆ ಒಳಿತು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹಿರಿಯರು ನಿಮ್ಮ ಕೃಷಿ ವ್ಯವಹಾರಗಳಿಗೆ ಉತ್ತಮ ಮಾರ್ಗದರ್ಶನ ನೀಡುವರು. ಇರುವ ವೃತ್ತಿಯಲ್ಲಿ ಏಳಿಗೆ ಇರುತ್ತದೆ. ಪ್ರೋತ್ಸಾಹಧನವನ್ನು ನಿರೀಕ್ಷಿಸಬಹುದು. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ. ಕೃಷಿಕರಿಗೆ ಅಷ್ಟು ಆದಾಯವಿರುವುದಿಲ್ಲ.

ಕಟಕ ರಾಶಿ:
ಹಣಕಾಸು ಸಂಸ್ಥೆಯ ಜವಾಬ್ದಾರಿ ಸ್ಥಾನದಲ್ಲಿರುವವರಿಗೆ ಆತಂಕಗಳು ಎದುರಾಗಬಹುದು. ಚಿನ್ನಾಭರಣಗಳ ಮೇಲಿನ ಹೂಡಿಕೆ ಲಾಭ ತರುತ್ತದೆ. ನಾಟಕರಂಗದವರಿಗೆ ಹೆಚ್ಚಿನ ಪ್ರೋತ್ಸಾಹಗಳು ದೊರೆಯುತ್ತವೆ. ಕೆಲವರಿಗೆ ಸಮಾಜದಲ್ಲಿ ಸ್ಥಾನ ಸಿಗುವ ಯೋಗವಿದೆ. ಇನ್ನೊಬ್ಬರನ್ನು ಅವಹೇಳನ ಮಾಡಲು ಹೋಗಬೇಡಿರಿ. ಹಣ್ಣು ವ್ಯಾಪಾರಿಗಳಿಗೆ ಹೆಚ್ಚಿನ ವ್ಯವಹಾರ ನಡೆದು ಲಾಭ ಬರುತ್ತದೆ. ಗೃಹ ಸಾಮಗ್ರಿ ವಸ್ತುಗಳ ಖರೀದಿಯಿಂದ ಹೆಚ್ಚು ಖರ್ಚು ಬರಲಿದೆ. ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಧನ ಆದಾಯ ಮಂದಗತಿಯಲ್ಲಿ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಹೆಚ್ಚಿನ ಆತುರ ಬೇಡ. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಕೃಷಿಕರಿಗೆ ಅಭಿವೃದ್ಧಿ ಇದೆ.

ಸಿಂಹ ರಾಶಿ
ಮಕ್ಕಳ ಸಂತಸ ಮತ್ತು ಸಡಗರಕ್ಕಾಗಿ ಹೆಚ್ಚು ಖರ್ಚು ಮಾಡುವಿರಿ. ವೃತ್ತಿಯಲ್ಲಿ ಸ್ವಲ್ಪ ಮಟ್ಟಿನ ನಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಮಧ್ಯಮ ಫಲಿತಾಂಶವಿರುತ್ತದೆ. ಉಳಿತಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಧನ ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಹೆಚ್ಚು ಸಾಲ ಮಾಡುವುದು ಸರಿಯಲ್ಲ. ನಿಮ್ಮ ಸ್ನೇಹಿತನ ಮೇಲಿನ ಅಪನಂಬಿಕೆಗಳ ಬಗ್ಗೆ ನಿಮಗೆ ಸುಳಿವು ದೊರೆಯುತ್ತದೆ. ಕಿರಿಯ ಪ್ರಾಮಾಣಿಕ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳಿಂದ ತೊಂದರೆ ಬರಬಹುದು. ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳನ್ನು ಎದುರಿಸಿ ಗೆಲ್ಲುವಿರಿ. ಔಷಧಿ ಮಾರಾಟಗಾರರಿಗೆ ವ್ಯವಹಾರ ಹೆಚ್ಚಾಗುವುದು. ರಾಸಾಯನಿಕ ವಸ್ತುಗಳನ್ನು ರಫ್ತು ಮಾಡುವವರಿಗೆ ಹೆಚ್ಚಿನ ವ್ಯವಹಾರವಾಗುತ್ತದೆ. ಕೃಷಿಕರಿಗೆ ಹೆಚ್ಚಿನ ಆದಾಯ ಬರುವ ಸಂದರ್ಭವಿದೆ.

ಕನ್ಯಾ ರಾಶಿ:
ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಕೈಗೊಂಡ ನಿಮ್ಮ ಕೆಲಸಗಳು ಆರ್ಥಿಕ ಹಿನ್ನಡೆಯಿಂದ ಅಲ್ಲಿಯೇ ನಿಲ್ಲುತ್ತವೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಮನೆಯಲ್ಲಿ ಮಂಗಳಕಾರ್ಯ ನಡೆಯುವ ಸೂಚನೆ ಇದೆ. ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ರೈತರ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಕೃಷಿ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚಿನ ಬೆಳವಣಿಗೆಯನ್ನು ಕಾಣಬಹುದು. ಕುಟುಂಬದಲ್ಲಿ ಸ್ವಲ್ಪ ಮುಸುಕಿನ ಗುದ್ದಾಟಗಳಾಗಬಹುದು. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಒಡಹುಟ್ಟಿದವರಿಂದ ಸಹಾಯಗಳನ್ನು ನಿರೀಕ್ಷಿಸಬಹುದು. ವಿದೇಶಗಳಿಗೆ ಆಹಾರ ವಸ್ತುಗಳನ್ನು ಸರಬರಾಜು ಮಾಡುವವರಿಗೆ ಅನಿರೀಕ್ಷಿತ ಸರಬರಾಜು ಆದೇಶಗಳು ದೊರೆಯಬಹುದು.

ತುಲಾ ರಾಶಿ:
ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಗ್ರಾಹಕರಿಗೆ ಮೋಸ ಮಾಡಬೇಕಾಗಬಹುದು. ಹೈನುಗಾರಿಕೆಯನ್ನು ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ. ಹೋಟೆಲ್ ಉದ್ಯಮಿಗಳಿಗೆ ಅವರ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ. ಜವಳಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಆಗುವ ಸಂದರ್ಭವಿದೆ. ಪದೇ ಪದೇ ಕೆಲಸಕಾರ್ಯಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು. ಅನಿರೀಕ್ಷಿತವಾಗಿ ನಿಮ್ಮ ಶತ್ರುಗಳು ಯಾರೆಂದು ನಿಮಗೆ ತಿಳಿದು ಬರುತ್ತದೆ. ಯಾವುದೋ ಒಂದು ತಪ್ಪು ಮಾಡಿ ಸಿಕ್ಕಿ ಬೀಳುವ ಚಿಂತೆ ನಿಮ್ಮನ್ನು ಕಾಡುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಮಧ್ಯವರ್ತಿಗಳಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಉದರ ಸಂಬಂಧಿ ಕಾಯಿಲೆಗಳು ಸ್ವಲ್ಪ ಬಾಧಿಸಬಹುದು.

ವೃಶ್ಚಿಕ ರಾಶಿ:
ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಶ್ರಮಪಡಬೇಕು. ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಉತ್ತಮ. ವ್ಯವಹಾರದಲ್ಲಿ ಜಾಣ್ಮೆಯಿಂದ ವ್ಯವಹರಿಸಿ ಲಾಭಗಳಿಸುವಿರಿ. ಮಾತಿನ ಮೋಡಿಗೆ ಪಾಲುದಾರರು ಒಪ್ಪಿ ನಿಮಗೆ ಪ್ರಮುಖ ಸ್ಥಾನ ನೀಡುವರು. ವೈವಾಹಿಕ ಮಾತುಕತೆಗಳು ಫಲಪ್ರದವಾಗುತ್ತವೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಬಯಸುವವರಿಗೆ ಅವಕಾಶಗಳು ದೊರೆಯುತ್ತವೆ. ಸಾಕು ಪ್ರಾಣಿಗಳನ್ನು ಸಲಹುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಕೃಷಿಯಿಂದ ಹೆಚ್ಚು ಲಾಭವಿರುತ್ತದೆ ಹಾಗೂ ಕೃಷಿಕರಿಗೆ ಬೇಕಾದ ಸೌಲಭ್ಯ, ಸೌಕರ್ಯಗಳು ದೊರೆಯುತ್ತವೆ. ವೃತ್ತಿಯಲ್ಲಿ ಸ್ವಲ್ಪ ಮುಜುಗರದ ವಾತಾವರಣವಿರುತ್ತದೆ.

ಧನಸ್ಸು ರಾಶಿ: ಆಸ್ತಿ ಖರೀದಿಯ ಬಗ್ಗೆ ಗಮನಹರಿಸಬಹುದು ಹಾಗೂ ಇದಕ್ಕೆ ಬೇಕಾದ ಆರ್ಥಿಕ ನೆರವುಗಳು ದೊರೆಯುತ್ತವೆ. ಹವ್ಯಾಸಿ ಛಾಯಾಗ್ರಾಹಕರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸಾಂಸ್ಕೃತಿಕ ರಂಗದಲ್ಲಿರುವವರಿಗೆ ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ರಾಜಕೀಯದವರು ಎಚ್ಚರಿಕೆಯಿಂದ ನಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಇದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸ್ವಂತ ವ್ಯಾಪಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ಕೃಷಿಕರಿಗೆ ನಿಧಾನಗತಿಯ ಅಭಿವೃದ್ಧಿ ಇರುತ್ತದೆ. ಸಂಗಾತಿ ಆದಾಯದಲ್ಲಿ ಹೆಚ್ಚಳವನ್ನು ಕಾಣಬಹುದು. ನಿಮ್ಮ ವ್ಯವಹಾರಗಳಿಗೆ ಅನಿರೀಕ್ಷಿತವಾಗಿ ವಿದೇಶಿ ಸಂಪರ್ಕ ದೊರೆಯುತ್ತದೆ. ತಂದೆಯಿಂದ ಸಾಕಷ್ಟು ಸಹಾಯ ಮಾರ್ಗದರ್ಶನ ದೊರೆಯುತ್ತದೆ. ವೃತ್ತಿಯಲ್ಲಿ ಇದ್ದ ಗೋಜಲುಗಳು ನಿವಾರಣೆಯಾಗುತ್ತದೆ.

ಮಕರ ರಾಶಿ:
ವ್ಯವಹಾರದಲ್ಲಿ ಎಲ್ಲರನ್ನೂ ಅತಿಯಾಗಿ ನಂಬುವುದು ಬೇಡ. ನಿಮ್ಮ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನಕೊಡಿರಿ. ತರಕಾರಿ ಕಮಿಷನ್ ಏಜೆಂಟರುಗಳಿಗೆ ಹೆಚ್ಚಿನ ಆದಾಯವಿರುತ್ತದೆ. ಉನ್ನತ ವ್ಯಾಸಂಗದಲ್ಲಿರುವವರಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಪ್ರಸಿದ್ಧ ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳುವ ಪ್ರಯತ್ನ ಸಫಲವಾಗುತ್ತದೆ. ಆಸ್ತಿ ಮಾರಾಟಗಳ ದಾಖಲೆ ಮಾಡುವವರಿಗೆ ಸಾಕಷ್ಟು ಸಂಪಾದನೆ ಇರುತ್ತದೆ. ಉದ್ದಿಮೆದಾರರು ಕೆಲಸಗಾರರನ್ನು ಸರಿಯಾಗಿ ನಡೆಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಸಾಹಿತ್ಯದಲ್ಲಿ ಅಭಿರುಚಿ ಹೊಂದಿರುವವರಿಗೆ ಮುಂದುವರೆಸುವ ಅವಕಾಶ ದೊರೆಯುತ್ತದೆ. ಅಗತ್ಯಕ್ಕೆ ತಕ್ಕಷ್ಟು ಧನ ಆದಾಯವು ಇರುತ್ತದೆ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ನಿಧಾನಗತಿಯನ್ನು ಕಾಣಬಹುದು.

ಕುಂಭ ರಾಶಿ: ಆತ್ಮಗೌರವ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಒಡಹುಟ್ಟಿದವರು ನಿಮಗೆ ಮೋಸ ಮಾಡಲೆತ್ನಿಸುವರು. ಆಸ್ತಿ ವಿಚಾರದಲ್ಲಿ ಸ್ವಲ್ಪ ಮುನ್ನಡೆ ಕಾಣುವಿರಿ. ಕೆಲವರಿಗೆ ಶೀತಬಾಧೆ ಹೆಚ್ಚಾಗಿ ಬಾಧಿಸಬಹುದು. ಸಂಗಾತಿಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ಅದಿರು ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ಬೇಕಾದ ಸೌಕರ್ಯಗಳು ಒದಗಿಬರುತ್ತವೆ. ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸಾಕಷ್ಟು ವ್ಯವಹಾರ ವಿಸ್ತರಣೆಯಾಗುತ್ತದೆ. ಬಂಧುಗಳು ನಿಮ್ಮಿಂದ ಧನಸಹಾಯ ಕೇಳಲು ಬರಬಹುದು, ಎಚ್ಚರವಾಗಿರಿ.

ಮೀನ ರಾಶಿ: ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚುತ್ತದೆ. ಕಾನೂನು ಪಂಡಿತರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಬಹುದು. ಮಕ್ಕಳ ಭವಿಷ್ಯದ ಬಗ್ಗೆ ಸಾಕಷ್ಟು ಚಿಂತೆ ಇರುತ್ತದೆ. ಅವರ ಭವಿಷ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ನಿಮ್ಮ ಶತ್ರುಗಳ ವಿರುದ್ಧ ಜಾಗರೂಕರಾಗಿರಿ. ಹಿರಿಯರಿಂದ ನಿರೀಕ್ಷಿತ ಉಡುಗೊರೆ ದೊರೆಯಬಹುದು. ನೋವು ನಿವಾರಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ. ಧಾರ್ಮಿಕ ಸಲಹೆ ಮತ್ತು ಸೂಚನೆಗಳನ್ನು ನೀಡುವವರಿಗೆ ಹೆಚ್ಚಿನ ಗೌರವ ದೊರೆಯುತ್ತದೆ. ಅತಿಯಾದ ಮಾತು ನಿಮಗೆ ತೊಂದರೆಯನ್ನು ತರಬಹುದು. ವಿದೇಶದಲ್ಲಿರುವವರ ಆದಾಯ ಹೆಚ್ಚಾಗುತ್ತದೆ. ಧನ ಆದಾಯವು ಮಂದಗತಿಯಲ್ಲಿರುತ್ತದೆ. ಕಬ್ಬಿಣದ ವ್ಯವಹಾರಗಳನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ.

Leave a Comment

Your email address will not be published. Required fields are marked *