ಸಮಗ್ರ ನ್ಯೂಸ್: ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿದೆ.
ಈ ಹಿಂದೆ ಸಿಬಿಐ ಈ ಪ್ರಕರಣದಲ್ಲಿ ಅಧಿಕಾರಿಯೊಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು. ಈ ಪ್ರಕರಣದಲ್ಲಿ ಅವರು (ಮನೀಶ್ ಸಿಸೋಡಿಯಾ) ಅಬಕಾರಿ ನೀತಿಯನ್ನು ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಕೆಲವು ಸೂಚನೆಗಳನ್ನು ನೀಡಿದ್ದರು ಎಂದು ಅವರು ಹೇಳಿದರು ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.
ಆಪ್ ಬೆಂಬಲಿಗರ ಭಾರಿ ಬೆಂಬಲದೊಂದಿಗೆ ಸಿಸೋಡಿಯಾ ಅವರು ಭಾನುವಾರ ದಿಲ್ಲಿಯ ಸಿಬಿಐ ಪ್ರಧಾನ ಕಚೇರಿಗೆ ಬೆಳಗ್ಗೆ ತೆರಳಿದರು. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಈ ಹಿಂದೆ ಸಿಬಿಐ ನೋಟಿಸ್ ನೀಡಿತ್ತು. ಇದೇ ವೇಳೆ, ಮುಂದಿನ ಏಳೆಂಟು ತಿಂಗಳು ದೂರ ಹೋಗುವೆ ಎಂದು ಸಿಸೋಡಿಯಾ ಬಂಧನದ ಸುಳಿವು ನೀಡಿದ್ದರು. ವಿಚಾರಣೆ ಬಳಿಕ ಸಿಬಿಐ ಅಧಿಕಾರಿಗಳು ಸಿಸೋಡಿಯಾ ಅವರನ್ನು ಬಂಧಿಸಿದ್ದಾರೆ.