Ad Widget .

ಹುಲಿಗಳು ಹಾದುಹೋಗಲೆಂದೇ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಾಣ| ಭಾರತೀಯ ಹೆದ್ದಾರಿ ಪ್ರಾಧಿಕಾರದ ಸೂಪರ್ ಐಡಿಯಾ

ಸಮಗ್ರ ನ್ಯೂಸ್: ಭೂಮಿ ಮೇಲೆ ಬದುಕಲು ಮನುಷ್ಯರಿಗೆಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಪ್ರಾಣಿಗಳಿಗಿದೆ. ಆದರೆ ಮನುಷ್ಯರು ಕಾಡಿನೊಳಕ್ಕೆ ನುಗ್ಗಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದಾರೆ. ಮತ್ತೊಂದೆಡೆ ಅದರ ಆಹಾರವನ್ನು ಕಸಿದುಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಪ್ರಾಣಿಗಳು ನಾಡಿನತ್ತ ಬರುತ್ತಿವೆ.

Ad Widget . Ad Widget .

ಮತ್ತೊಂದೆಡೆ ಅದರ ವಾಸಸ್ಥಾನವಾದ ಕಾಡಿನತ್ತ ರಸ್ತೆಗಳು ಹಾದು ಹೋಗುತ್ತಿವೆ. ಇದರಿಂದ ವಾಹನಕ್ಕೆ ಸಿಲುಕಿ ವರ್ಷಕ್ಕೆ ಅದೆಷ್ಟೋ ಪ್ರಾಣಿಗಳು ಅಪಘಾತದಲ್ಲಿ ಸಾವನ್ನಪ್ಪುತ್ತಿವೆ. ಆದರೆ ಇಂತಹ ಸನ್ನಿವೇಷ ಎದುರಾಗಬಾರದು ಎಂಬ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆಲಂಗಾಣ ಮತ್ತು ಮಹಾರಾಷ್ಟ್ರಕ್ಕೆ ಹಾದು ಹೋಗುವ ರಸ್ತೆಯ ಮಮೇಲ್ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಿ ಕಾಡು ಪ್ರಾಣಿಗಳಿಗೆ ಓಡಾಡಲು ವ್ಯವಸ್ಥೆ ಮಾಡುತ್ತಿದೆ.

Ad Widget . Ad Widget .

ಕಾಗಜನರ ಅರಣ್ಯ ಪ್ರದೇಶ ಮಂಚಿರ್ಯಾಲ ಮತ್ತು ಚಂದ್ರಾಪುರ ಮಾರ್ಗವಾಗಿ ಪ್ರಾಣಿಗಳಿಗೆಂದೇ ನಿರ್ಮಿಸಿರುವ ಮೇಲ್ಸೇತುವೆಯನ್ನು ಕಾಣಬಹುದು. ಈ ಪ್ರದೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಕಕ್ಕೆ ಹುಲಿಗಳು ವಲಸೆ ಹೋಗಲಿ ಎಂದು ಈ ಮೇಲ್ಸೇತುವೆ ನಿರ್ಮಿಸಲಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 1 ಕಿ.ಮೀ ಉದ್ದದ ಮೇಲ್ಸೇತುವೆಯನ್ನು ನಿರ್ಮಿಸಿದೆ. ಇದು 30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಸದ್ಯದಲ್ಲೇ ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಕಾಡಿನ ಮಧ್ಯೆಯೇ ರಸ್ತೆಯನ್ನು ನಿರ್ಮಿಸುವುದಲ್ಲದೆ, ರಸ್ತೆ ಮಧ್ಯೆ ಕಾಡು ಹಾದುಹೋಗಲು ಸಾಧ್ಯವಿಲ್ಲ. ಆದರೆ ಭಾರತದಲ್ಲಿ ಪ್ರತಿ ವರ್ಷ ಅದೆಷ್ಟೋ ಕಾಡು ಪ್ರಾಣಿಗಳು ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತವೆ. ಇವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಮೇಲ್ಸೇತುವೆ ನಿರ್ಮಾಣ ಒಳ್ಳೆಯ ಕಾರ್ಯವಾಗಿದೆ.

Leave a Comment

Your email address will not be published. Required fields are marked *