Ad Widget .

ಅಪರೂಪದ ಖಗೋಳ ವಿಸ್ಮಯ| ಒಂದೇ ರೇಖೆಯಲ್ಲಿ ಗುರು, ಶುಕ್ರ ಮತ್ತು ಚಂದ್ರ

ಸಮಗ್ರ ನ್ಯೂಸ್: ಅಪರೂಪದ ಖಗೋಳ ವಿಸ್ಮಯಕ್ಕೆ ಅಂತರಿಕ್ಷ ಸಾಕ್ಷಿಯಾಗುತ್ತಿದೆ. ಚಂದ್ರ, (Moon) ಶುಕ್ರ (Venus) ಮತ್ತು ಗುರು (Jupiter) ಗ್ರಹಗಳು ಏಕಕಾಲದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಖಗೊಳಾಸಕ್ತರನ್ನು ಪುಳಕಗೊಳಿಸಿದೆ. ಗುರುವಾರ(ಫೆ.23) ಮೂರೂ ಆಕಾಶಕಾಯಗಳು ಪರಸ್ಪರ ಒಟ್ಟಿಗೆ ಬರುತ್ತಿದ್ದಂತೆ ಆಕಾಶದಲ್ಲಿ ತ್ರಿಕೋನದಂತಹ ಆಕಾರ ಸೃಷ್ಟಿಯಾಯಿತು.

Ad Widget . Ad Widget .

ಸೌರಮಂಡಲದಲ್ಲಿ ಪ್ರಕಾಶಮಾನವಾದ ಗ್ರಹಗಳು ಎಂದೇ ಕರೆಸಿಕೊಳ್ಳುವ ಶುಕ್ರ ಹಾಗೂ ಗುರುಗ್ರಹಗಳು, ಭೂಮಿಯ ಏಕೈಕ ಉಪಗ್ರಹವಾದ ಚಂದ್ರನ ಸಮೀಪದಲ್ಲಿ ಒಂದೇ ರೇಖೆಯಲ್ಲಿ ಕಾಣಿಸಿಕೊಂಡಿವೆ. ಸುಮಾರು 29 ಡಿಗ್ರಿಗಳ ಅಂತರವನ್ನು ಹೊಂದಿರುವ ಗ್ರಹಗಳು ಇತ್ತೀಚಿಗೆ ನಿಧಾನವಾಗಿ ಹತ್ತಿರಕ್ಕೆ ಸರಿಯುತ್ತಿದ್ದು, ಗುರುವಾರ ಕೇವಲ 9 ಡಿಗ್ರಿಯಷ್ಟುಅಂತರಕ್ಕೆ ತಲುಪಿವೆ.

Ad Widget . Ad Widget .

ಇನ್ನು ಫೆ.27ರಂದು ಇವುಗಳ ನಡುವಿನ ಅಂತರ 2.3 ಡಿಗ್ರಿಗೆ ತಲುಪಬಹುದು ಎಂದು ಖಗೋಳಶಾಸ್ತ್ರಜ್ಞರು ಅಂದಾಜಿಸಿದ್ದು, ಎರಡು ಗ್ರಹಗಳು ಸಮೀಪಕ್ಕೆ ಬಂದಿರುವ ಸಮಯದಲ್ಲೇ ಚಂದ್ರನೂ ಸಹ ಅವುಗಳ ಜೊತೆಗೆ ಕಾಣಿಸಿಕೊಂಡಿರುವುದು ಮತ್ತಷ್ಟು ಆಸಕ್ತಿಕರ ಎನಿಸಿದೆ. ಈ ವಿಶೇಷವನ್ನು ಮಿಸ್ ಮಾಡಿಕೊಂಡವರಿಗೆ ಮಾ.1ರಂದು ಮತ್ತೊಂದು ಅವಕಾಶ ಲಭಿಸಲಿದ್ದು, ಆ ದಿನ ಈ ಗ್ರಹಗಳು ಒಂದರ ಹಿಂದೊಂದು ಕಾಣಿಸಿಕೊಳ್ಳುವ ಮೂಲಕ ಮತ್ತೊಂದು ವಿಶೇಷ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಖಗೋಳ ತಜ್ಞರು ತಿಳಿಸಿದ್ದಾರೆ.

ವಿಶೇಷ ಅಂದರೆ ಈ ಗ್ರಹಗಳು ಒಂದರಿಂದ ಒಂದು ಲಕ್ಷಾಂತರ ಕಿಲೋ ಮೀಟರ್ ದೂರದಲ್ಲಿ ಇದ್ದರೂ ಕೂಡ ಭೂಮಿಯಿಂದ ನೋಡುವಾಗ ಜತೆ ಜತೆಗೆ ಇರುವಂತೆ ಕಾಣಿಸುತ್ತದೆ.

ಇಂತಹುದೇ ವಿಸ್ಮಯವೊಂದು 2018ರ ಸೆಪ್ಟೆಂಬರ್‌ ತಿಂಗಳಲ್ಲಿ ನಡೆದಿತ್ತು. ಆ ದಿನ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು. ತಜ್ಞರ ಪ್ರಕಾರ ವೈಜ್ಞಾನಿಕವಾಗಿ ಆ ವಿದ್ಯಮಾನವನ್ನು ಸೋಲಾರ್ ಹ್ಯಾಲೋ ಎಂದು ಕರೆಯುತ್ತಾರೆ. ಸೂರ್ಯನ ಕಿರಣಗಳು ಭೂಮಿಗೆ ಮೋಡಗಳನ್ನು ಹಾದು ಬರುವ ಮುನ್ನ ಈ ರೀತಿಯ ಏಳು ಬಣ್ಣದ ವೃತ್ತಾಕಾರದ ಉಂಗುರ ನಿರ್ಮಾಣವಾಗುತ್ತದೆ. ಭೂಮಿಯಿಂದ 20 ಸಾವಿರ ಅಡಿ ಎತ್ತರದ ವಾತಾವರಣದಲ್ಲಿ ಮೋಡದಲ್ಲಿನ ನೀರಿನ ಹನಿಗಳು ಸಾಂದ್ರಗೊಂಡು ಶೈತ್ತೀಕರಣವಾಗಿ ಮಂಜಿನ ಹರಳುಗಳಾಗಿರುತ್ತವೆ. ಈ ಗೋಳಾಕಾರದ ಮಂಜಿನ ಹರಳಿನ ಮೂಲಕ ಸೂರ್ಯನ ಬಿಳಿ ಬೆಳಕು ಹಲವು ಸಾರಿ ಪ್ರತಿಫಲಿಸಿ ವಕ್ರೀಭವನ ಮತ್ತು ಚದುರುವಿಕೆ ಉಂಟಾಗುತ್ತದೆ.

Leave a Comment

Your email address will not be published. Required fields are marked *