ಎರಡು ಬಸ್ ಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದ‌ ಟ್ರಕ್| 8 ಸಾವು ; 50 ಮಂದಿ ಜಖಂ

ಸಮಗ್ರ ನ್ಯೂಸ್: ಟ್ರಕ್‌ವೊಂದು ಎರಡು ಬಸ್‌ಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಿಧಿ ಸಮೀಪದ ಮೊಹಾನಿಯಾ ಸುರಂಗದ ಬಳಿ ನಡೆದಿದೆ.

Ad Widget ... ..

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಿಂದ ಹಿಂದಿರುಗುತ್ತಿದ್ದ ಜನರನ್ನು ಈ ಬಸ್ಸುಗಳು ಸಾಗಿಸುತ್ತಿದ್ದವು. ಅಧಿಕಾರಿಗಳ ಪ್ರಕಾರ, ಟ್ರಕ್‌ನಲ್ಲಿ ಟೈರ್ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ.

Ad Widget

ಜನರನ್ನು ತುಂಬಿದ್ದ ಎರಡು ಬಸ್ಸುಗಳು ರಸ್ತೆ ಬದಿ‌ ನಿಂತಿದ್ದವು, ಹಿಂದಿನಿಂದ ಟ್ರಕ್ ಬಂದು ಅದರ ಟೈರ್ ಒಡೆದ ನಂತರ ನಿಯಂತ್ರಣ ತಪ್ಪಿ ಡಿಕ್ಕಿ ಸಂಭವಿಸಿದೆ ಜನರು ಗಾಯಗೊಂಡಿದ್ದಾರೆ, ಅದರಲ್ಲಿ 15-20 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಪ್ರಾಣ ಹಾನಿಗೆ ಸಂತಾಪ ಸೂಚಿಸಿದ್ದಾರೆ.

Leave a Comment

Your email address will not be published. Required fields are marked *