Ad Widget .

ಕಡಬ: ಮತ್ತೆ ದಾಳಿ ಮಾಡಿದ ಕಾಡಾನೆಗಳು| ಈ ಬಾರಿ‌ ಅರಣ್ಯ ಇಲಾಖೆಯ ನರ್ಸರಿ‌ ಧ್ವಂಸ

ಸಮಗ್ರ‌ ನ್ಯೂಸ್: ಇಬ್ಬರನ್ನು ಕೊಂದ ಕಾಡಾನೆಯನ್ನುಸೆರೆ ಹಿಡಿದು ನಾಗರಹೊಳೆ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಕೊಂಡೊಯ್ಯಲಾಗಿದೆ. ಸ್ಥಳದಲ್ಲಿರುವ ಮೂರು ಸಾಕಾನೆಗಳು ವಿಶ್ರಾಂತಿ ನೀಡಲಾಗಿದ್ದರೂ ಸಿಬಂದಿಗಳು ಕಾಡಾನೆ ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

Ad Widget . Ad Widget .

ಈ ನಡುವೆ ಗುರುವಾರ ರಾತ್ರಿ ಗುಂಡ್ಯದ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ಲಗ್ಗೆ ಇಟ್ಟಿವೆ ಎಂದು ತಿಳಿದುಬಂದಿದೆ. ನರ್ಸರಿಗೆ ದಾಳಿ ಗುರುವಾರ ರಾತ್ರಿ ಕಾಡಾನೆ ಲಗ್ಗೆ ಇಟ್ಟ ಪ್ರದೇಶದ ಮಾಹಿತಿ ಪಡೆದ ಆ ಭಾಗದಲ್ಲಿ ಪತ್ತೆ ಕಾರ್ಯಾಚರಣೆ ತಂಡ ತನ್ನ ಕೆಲಸ ಮುಂದುವರಿಸಿ ಕಾಡಾನೆಯ ಇರುವಿಕೆ ಕಂಡುಕೊಳ್ಳುವತ್ತ ಕಾರ್ಯ ಮಾಡಿದೆ ಎಂದು ತಿಳಿದುಬಂದಿದೆ. ಆದರೆ ಆನೆ ಅಲ್ಲಿಂದ ತೆರಳಿದೆ ಎಂಬ ಮಾಹಿತಿ ಲಭ್ಯವಾಗಿದೆ.

Ad Widget . Ad Widget .

ಮೂರು ಸಾಕಾನೆಗಳನ್ನು ಪೇರಡ್ಕ ಬಳಿಯ ಶಿಬಿರದಿಂದ ನೆಟ್ಟಣದ ಕೇಂದ್ರೀಯ ಮರ ಸಂಗ್ರಹಣಾ ಘಟಕಕ್ಕೆ ಕರೆದೊಯ್ದು ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದೆ.

Leave a Comment

Your email address will not be published. Required fields are marked *