Ad Widget .

ಮರ್ಯಾದಾ ಹತ್ಯೆ ಪ್ರಕರಣ| ಹೆತ್ತ ಮಗಳ ರುಂಡ ಮುಂಡ ಕತ್ತರಿಸಿದ ತಂದೆ

ಸಮಗ್ರ ನ್ಯೂಸ್: ತಂದೆಯೊಬ್ಬ, ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ರುಂಡ- ಮುಂಡವನ್ನು ಕತ್ತರಿಸಿ ಕೊಲೆ ಮಾಡಿ ಕಾಡಿನಲ್ಲಿ ಎಸೆದಿದ್ದಾನೆ. ಈ ಮರ್ಯಾದಾ ಹತ್ಯೆ ಪ್ರಕರಣ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Ad Widget . Ad Widget .

ಪ್ರಸನ್ನ (21) ಮೃತ ದುರ್ದೈವಿ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಮಗಳನ್ನು ಕೊಂದ ಆರೋಪಿ. ರೆಡ್ಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ಮದುವೆಯ ಬಳಿಕ ಪ್ರಸನ್ನ ಹೈದರಾಬಾದ್‌ನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಮದುವೆಯಾಗಿ ಎರಡು ವರ್ಷದ ಬಳಿಕ ಹೈದರಾಬಾದಿನಿಂದ ಹಳ್ಳಿಗೆ ಬಂದು ತನ್ನ ಮನೆಯಲ್ಲಿ ವಾಸವಾಗಿದ್ದಳು.

Ad Widget . Ad Widget .

ಈ ವೇಳೆ ಮದುವೆಗೂ ಮುನ್ನ ಪ್ರೇಮ ಸಂಬಂಧ ಹೊಂದಿದ್ದವನ ಜೊತೆ ಸ್ನೇಹ ಸಂಬಂಧ ಬೆಳೆಸಿದ್ದಲ್ಲದೆ, ಹೈದರಾಬಾದ್‌ಗೆ ಹೋಗೋಕು ಮನಸ್ಸು ಮಾಡಿರಲಿಲ್ಲ. ಇದು ತಂದೆಗೆ ಇಷ್ಟವಾಗಿರಲಿಲ್ಲ. ಇದರಿಂದ ತನ್ನ ಪ್ರತಿಷ್ಠೆ ಹಾಳಾಗುತ್ತದೆ ಎಂದು ಕೋಪಗೊಂಡಿದ್ದರು. ಅದೇ ಕಾರಣಕ್ಕೆ ಫೆ. 10ರಂದು ದೇವೇಂದ್ರ ರೆಡ್ಡಿ ಮನೆಯಲ್ಲಿಯೇ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ದೇವೇಂದ್ರ ರೆಡ್ಡಿ ಕೆಲವರ ಜತೆ ಸೇರಿ ಕಾರಿನಲ್ಲಿ ಮಗಳ ಶವವನ್ನು ನಂದ್ಯಾಲ-ಗಿದ್ದಲೂರು ಮಾರ್ಗದ ಅರಣ್ಯ ಪ್ರದೇಶಕ್ಕೆ ತಂದು ದೇಹದ ರುಂಡ ಹಾಗೂ ಮುಂಡವನ್ನು ಬೇರೆ ಮಾಡಿದ್ದಾರೆ. ರುಂಡವನ್ನು ಕಾಡಿನ ಒಂದು ಕಡೆ ಎಸೆದಿದ್ದರೆ, ಇನ್ನೊಂದು ಕಡೆ ಉಳಿದ ಭಾಗವನ್ನು ಎಸೆದು ಮನೆಗೆ ಬಂದಿದ್ದರು.

ಅದಾದ ಬಳಿಕ ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದ. ಈ ವೇಳೆ ದೇವೇಂದ್ರ ರೆಡ್ಡಿ ಅವರ ತಂದೆ ಶಿವಾರೆಡ್ಡಿ ಮೊಮ್ಮಗಳು ಪ್ರಸನ್ನ ಎಲ್ಲಿದ್ದಾರೆ ಎಂದು ಪ್ರಶ್ನಿಸಲು ಪ್ರಾರಂಭಿಸಿದರು. ಕೊನೆಗೆ ದೇವೇಂದ್ರ ರೆಡ್ಡಿ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಗುರುವಾರ ದೂರು ದಾಖಲಿಸಿಕೊಂಡ ಪೊಲೀಸರು ದೇವೇಂದ್ರ ರೆಡ್ಡಿಯನ್ನು ಬಂಧಿಸಿದ್ದಾರೆ.

ಮಗಳ ದೇಹದ ಭಾಗವನ್ನು ನಲ್ಲಮಾಲಾ ಅರಣ್ಯದ ಬೊಗೊಡಾ ಸುರಂಗದ ಬಳಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ನಂದ್ಯಾಲಾ ಸರ್ಕಾರಿ ಆಸ್ಪತ್ರೆಗೆ ಕಳಿಸಲಾಗಿದೆ.

Leave a Comment

Your email address will not be published. Required fields are marked *