Ad Widget .

ಅವರಿವರು ಬೇಡ, ನಮಗೆ ಮೋದಿಯೇ ಪ್ರಧಾನಿಯಾಗಲಿ| ಪಾಕಿಸ್ತಾನಿ ಪ್ರಜೆಗಳ ಹೇಳಿಕೆ ವೈರಲ್

ಸಮಗ್ರ ನ್ಯೂಸ್: ಪಾಕಿಸ್ತಾನದ ಪ್ರಜೆಗಳು ಅದೆಷ್ಟು ಬೇಸತ್ತಿದ್ದಾರೆ ಅಂದರೆ ನಮಗೆ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ ಬೇಡ. ಬೆನ್‌ಜೀರ್ ಭುಟ್ಟೋ ಬೇಡ. ಇಮ್ರಾನ್ ಖಾನ್ ಬೇಡ. ಸರ್ವಾಧಿಕಾರಿ ಪರ್ವೇಜ್ ಮುಷರಫ್ ನಮಗೆ ಬೇಡ. ಭಾರತದ ಪ್ರಧಾನಿ ನರೇಂದ್ರ ಮೋದಿಯೇ ನಮ್ಮ ದೇಶದ ಆಳ್ವಿಕೆ ಮಾಡಲಿ ಎನ್ನುತ್ತಿದ್ದಾರೆ.

Ad Widget . Ad Widget .

ಹಾಲು, ಕಾಫಿ, ಟೀ, ಗೋಧಿ ಹಿಟ್ಟು, ಚಿಕನ್, ಮಟನ್, ಪೆಟ್ರೋಲ್, ಡೀಸೆಲ್‌ ಹೀಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಪಾಕಿಸ್ತಾನದಲ್ಲಿ ಗಗನಕ್ಕೇರಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ರೋಸಿ ಹೋದ ಪಾಕ್ ಪ್ರಜೆಗಳು ಒಂದು ಹೊತ್ತಿನ ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದಾರೆ. ಪ್ರತಿದಿನ ರಾತ್ರಿ ಪಾಕಿಸ್ತಾನದ ಎಷ್ಟೋ ಮಕ್ಕಳು ಹಸಿವಿನಿಂದ ಮಲಗುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟದ ಮಧ್ಯೆ ಪಾಕಿಸ್ತಾನದ ಪ್ರಜೆಯೊಬ್ಬ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad Widget . Ad Widget .

ಪಾಕ್‌ ಪತ್ರಕರ್ತರ ಜೊತೆ ಮಾತನಾಡಿದ ಆ ವ್ಯಕ್ತಿ, ನರೇಂದ್ರ ಮೋದಿ ಪಾಕಿಸ್ತಾನದ ಪ್ರಧಾನಿಯಾದ್ರೆ ಸಾಕು. ನಮಗೆ ಶೆಹಬಾಜ್ ಷರೀಫ್, ಬೆನ್‌ಜೀರ್, ಇಮ್ರಾನ್ ಖಾನ್, ಮುಷರಫ್ ಅಂತಾ ಸರ್ವಾಧಿಕಾರಿಗಳು ಬೇಡವೇ ಬೇಡ. ಮೋದಿ ಭಾರತದ ಪ್ರಧಾನಿಯಾದರೆ ನಾವು ಅಗತ್ಯ ವಸ್ತು, ಸರಕುಗಳನ್ನ ಕಡಿಮೆ ಬೆಲೆ ಕೊಂಡುಕೊಳ್ಳಬಹುದು ಎಂದಿದ್ದಾರೆ.

ನರೇಂದ್ರ ಮೋದಿ ತರಹ ಯಾರೂ ಇಲ್ಲ. ನಮ್ಮ ದೇಶಕ್ಕಿಂತ ಮೋದಿನೇ ಉತ್ತಮ. ಮೋದಿ ಅವರು ಎಲ್ಲರನ್ನು ಗೌರವಿಸುತ್ತಾರೆ. ನಮಗೆ ನರೇಂದ್ರ ಮೋದಿಯೇ ಬೇಕು. ನಾನು ನರೇಂದ್ರ ಮೋದಿ ಅವರ ದೇಶದಲ್ಲಿರಲು ಸಿದ್ಧನಿದ್ದೇನೆ. ಮೋದಿ ಉತ್ತಮ ವ್ಯಕ್ತಿ. ಮೋದಿ ನಮ್ಮ ದೇಶವನ್ನ ಆಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಪಾಕಿಸ್ತಾನದ ಪ್ರಜೆ ಮನವಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನದ ಪ್ರಜೆಯ ಈ ಮಾತುಗಳು ವೈರಲ್ ಆಗಿದೆ.

Leave a Comment

Your email address will not be published. Required fields are marked *