Ad Widget .

ಜಿಮ್ ಮಾಡುತ್ತಿರುವಾಗ ಹೃದಯಾಘಾತ| ಪೊಲೀಸ್ ಕಾನ್ ಸ್ಟೇಬಲ್ ಸಾವು

ಸಮಗ್ರ ನ್ಯೂಸ್: ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಮೃತಪಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ವಿಶಾಲ್(24) ಎಂಬಾತ ಸಾವನ್ನಪ್ಪಿರುವ ಕಾನ್​ಸ್ಟೇಬಲ್.

Ad Widget . Ad Widget .

ಜಿಮ್​ನಲ್ಲಿ ಪುಶ್​-ಅಪ್ ತೆಗೆಯುತ್ತಿರಬೇಕಾದರೆ ಹಠಾತ್ ಸಾವು ಸಂಭವಿಸಿದ್ದು, ಕುಸಿದು ಬಿದ್ದಿರುವ ವೀಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Ad Widget . Ad Widget .

ಕಾನ್​ಸ್ಟೇಬಲ್ ವಿಶಾಲ್ ಹೈದರಾಬಾದ್​ನ ಆಸಿಫ್ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈರಲ್ ಆಗಿರುವ ವೀಡಿಯೋದಲ್ಲಿ ವಿಶಾಲ್ ಪುಶ್‌-ಅಪ್‌ ತೆಗೆಯುತ್ತಿದ್ದಾಗ ಕುಸಿದು ಬೀಳುವುದನ್ನು ಗಮನಿಸಬಹುದು. ಈ ವೇಳೆ ಜಿಮ್​ನಲ್ಲಿದ್ದ ಕೆಲ ಯುವಕರು ವಿಶಾಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಪರೀಕ್ಷಿಸಿದ ವೈದರು ಮೃತಪಟ್ಟಿರುವುದುನ್ನು ಖಚಿತ ಪಡಿಸಿದ್ದಾರೆ. ವಿಶಾಲ್ ಸಾವಿಗೆ ಹೃದಯಾಘಾತ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *