ಸಮಗ್ರ ನ್ಯೂಸ್: ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಬೆಳಗ್ಗೆ ಮೈಕ್ ಮುಂದೆ ಮುಸ್ಲಿಮರನ್ನು ಟೀಕಿಸಿ, ಸಂಜೆ ಮನೆಗೆ ಗುಟ್ಟಾಗಿ ಬಂದು ಮಾತುಕತೆ ನಡೆಸುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್ ವಿಷಯ ಪ್ರಸ್ತಾಪಿಸಿ, ‘ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ನಮಗೆ ಬೇಡ ಎಂದು ಬಹಿರಂಗವಾಗಿ ಬಿಜೆಪಿಗರು ಹೇಳುತ್ತಾರೆ. ಇವರು ಮಾನವೀಯತೆ ಮರೆತಿರುವ ಹಾಗೆಯೇ ವರ್ತನೆ ಮಾಡುತ್ತಾರೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಖಾದರ್ ಅವರು, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಬಿಜೆಪಿ ನಾಯಕರು ಬೆಳಗ್ಗೆ ಮೈಕ್ ಮುಂದೆ ಉದ್ದೇಶ ಪೂರಕವಾಗಿ ಮುಸ್ಲಿಮರನ್ನು ಟೀಕಿಸುತ್ತಾರೆ. ಆನಂತರ ಸಂಜೆ ಮುಸ್ಲಿಮರ ಮನೆಗಳಿಗೆ ಗುಟ್ಟಾಗಿ ಬಂದು ಮತಗಳನ್ನು ಕೇಳುತ್ತಾರೆ ಎಂದು ದೂರಿದರು.