Ad Widget .

‘ಅಲ್ಲಾ’ ಪದವು ಸಂಸ್ಕೃತದ ಉತ್ಪತ್ತಿ; ದುರ್ಗೆಯ ಆರಾಧನೆಯಲ್ಲಿ ಬಳಸಲಾಗುತ್ತೆ – ನಿಶ್ಚಲಾನಂದ ಸರಸ್ವತಿ

ಸಮಗ್ರ ನ್ಯೂಸ್: ‘ಅಲ್ಲಾ’ ಪದವು ಪ್ರಾಚೀನ ಸಂಸ್ಕೃತ ಭಾಷೆಯಿಂದ ಬಂದಿದೆ ಎಂದು ವಾರಾಣಸಿಯ ದೇವಮಾನವ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

Ad Widget . Ad Widget .

ವಾರಾಣಸಿಯ ಗೋವರ್ಧನಪುರಿ ಮಠದ ಮುಖ್ಯಸ್ಥರಾಗಿರುವ ಸ್ವಾಮೀಜಿ, ಅಲ್ಲಾ ಪದವು ಹೆಣ್ತನದ ಶಕ್ತಿಯನ್ನು ಸೂಚಿಸುತ್ತದೆ ಮತ್ತು ಇದನ್ನು ದುರ್ಗಾ ದೇವಿಗೆ ಪ್ರಾರ್ಥಿಸಲು ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

Ad Widget . Ad Widget .

ಜಗತ್ತಿನಲ್ಲೇ ಇರುವುದು ಒಂದೇ ಧರ್ಮ ಅದು ಹಿಂದೂ ಸನಾತನ ಧರ್ಮ. ಉಳಿದೆಲ್ಲ ಧರ್ಮಗಳು ಪಂಥಗಳಷ್ಟೇ. ಯಾರು ಧರ್ಮದ ಬಗ್ಗೆ ಅನುಮಾಗಳನ್ನು ಹೊಂದಿದ್ದಾರೋ, ಪ್ರಶ್ನೆಗಳನ್ನು ಕೇಳುತ್ತೀರೋ ಅವರು ಮೊದಲಿಗೆ ಸಂಸ್ಕೃತ ಭಾಷೆಯನ್ನು ಕಲಿಯಬೇಕು. ನಾವೆಲ್ಲರೂ ಸನಾತನಿ ವೈದಿಕ ಆರ್ಯರು ಎಂದು ಅವರು ಹೇಳಿದ್ದಾರೆ.

ಅಲ್ಲಾ ಮತ್ತು ಓಂ ಎರಡೂ ಒಂದೇ ಎಂದು ಹೇಳಿದ್ದ ಮೌಲಾನಾ ಸೈಯದ್ ಅರ್ಷಾದ್ ಮದನಿ ಅವರು ಹೇಳಿಕೆಯನ್ನು ಖಂಡಿಸಿದ ಶ್ರೀಗಳು, ರಾಮಚರಿತಮಾನಸ ಬಗ್ಗೆ ಪ್ರಶ್ನೆ ಮಾಡುವವರು ಮೊದಲಿಗೆ ಚಾಣಕ್ಯ ನೀತಿಯನ್ನು ಓದಬೇಕು ಎಂದು ಹೇಳಿದರು. ಇದೇ ವೇಳೆ, ಪಂಡಿತ ಧೀರೇಂದ್ರ ಶಾಸ್ತ್ರಿ ಅವರಿಗೆ ಬೆಂಬಲಿಸಿದ ಅವರು, ಅವರು ಹಿಂದೂ ಧರ್ಮವನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

Leave a Comment

Your email address will not be published. Required fields are marked *