Ad Widget .

ದಟ್ಟನೆಯ ಹುಬ್ಬು ನಿಮ್ಮದಾಗಬೇಕೇ? ಈ ಮನೆಮದ್ದು ಮಾಡಿನೋಡಿ

ಸಮಗ್ರ ನ್ಯೂಸ್: ಹುಬ್ಬು ಮುಖದ ಸೌಂದರ್ಯಕ್ಕೆ ಇಂಬು ನೀಡುತ್ತದೆ. ಆದರೆ ನಿಮ್ಮ ತೆಳುವಾದ ಹುಬ್ಬು ನಿಮ್ಮ ಮುಖದ ಸೌಂದರ್ಯವನ್ನು ಹಾಳು ಮಾಡ್ತಿದೆ ಎಂದಾದರೆ ನೀವು ಈ ರೆಸಿಪಿ ಟ್ರೈ ಮಾಡಿ.

Ad Widget . Ad Widget .

ಅಡುಗೆ ಮನೆಯಲ್ಲಿ ಬಳಸುವ ಈರುಳ್ಳಿ ಬಳಸಿ ದಟ್ಟವಾದ, ಕಪ್ಪನೆಯ ಹುಬ್ಬನ್ನು ನಿಮ್ಮದಾಗಿಸಿಕೊಳ್ಳಬಹುದು.
ಈರುಳ್ಳಿ ಅಡುಗೆ ರುಚಿ ಹೆಚ್ಚಿಸುವ ಜೊತೆಗೆ ಸೌಂದರ್ಯವರ್ಧಕವೂ ಹೌದು.

Ad Widget . Ad Widget .

ಮನೆ ಮದ್ದು ಮಾಡುವ ವಿಧಾನ :
ಈರುಳ್ಳಿ ಕತ್ತರಿಸಿ ರಸ ತೆಗೆಯಿರಿ. ಅದಕ್ಕೆ ವಿಟಮಿನ್ ಇ ಕ್ಯಾಪ್ಸೂಲ್ ನಲ್ಲಿರುವ ವಿಟಮಿನ್ ಇ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಮಿಶ್ರಣವನ್ನು ಹುಬ್ಬಿಗೆ ಹಚ್ಚುವ ಮೊದಲು ಹುಬ್ಬನ್ನು ಸ್ವಚ್ಛ ಮಾಡಿಕೊಳ್ಳಿ. ನಂತರ ಹತ್ತಿ ಸಹಾಯದಿಂದ ಈ ಮಿಶ್ರಣವನ್ನು ಹುಬ್ಬಿಗೆ ಹಚ್ಚಿ 10 ನಿಮಿಷ ಬಿಡಿ. ಎರಡು ದಿನಕ್ಕೊಮ್ಮೆ ಈ ಮಿಶ್ರಣವನ್ನು ಹಚ್ಚುತ್ತಾ ಬರಬೇಕು. ಕೆಲದಿನಗಳಲ್ಲಿ ಈ ಮನೆಮದ್ದು ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ನಿಮ್ಮ ಸೌಂದರ್ಯ ಇಮ್ಮಡಿಯಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಗಳು ತಜ್ಞರ ಸಲಹೆಯಂತೆ ನಿರೂಪಿಸಲಾಗಿದೆ. ಅದಾಗ್ಯೂ ಬಳಸುವ ಮೊದಲು ತಜ್ಞರ ಸಲಹೆ ಪಡೆದುಕೊಳ್ಳಿ)

Leave a Comment

Your email address will not be published. Required fields are marked *