Ad Widget .

ಮಂಗಳೂರು: ‌ಹಿರಿಯ ಪೊಲೀಸ್ ಅಧಿಕಾರಿಯೇ ನನ್ನನ್ನು ಸೆಕ್ಸ್ ಗೆ ಆಹ್ವಾನಿಸಿದ್ದರು!| ಜಡ್ಜ್ ಮುಂದೆ ಅಳಲು ತೋಡಿಕೊಂಡ ಮಂಗಳಮುಖಿ

ಸಮಗ್ರ ನ್ಯೂಸ್: ಮಂಗಳೂರು ನಗರದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಾತ್ರಿ ನನ್ನನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ ಎಂದು ಮಂಗಳಮುಖಿಯೊಬ್ಬರು ನ್ಯಾಯಾಧೀಶರಿಗೆ ದೂರು ನೀಡಿದರು.

Ad Widget . Ad Widget .

ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ ಮತ್ತು ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಮಂಗಳಮುಖಿ, “ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದ್ದಾರೆ. ಅವರೇ ಹೀಗೆ ಮಾಡಿದರೆ, ನಾವು ಯಾರಿಗೆ ದೂರು ನೀಡುವುದು?” ಎಂದರು.

Ad Widget . Ad Widget .

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ದ‌.ಕ.ಜಿಲ್ಲೆಯ ಸದಸ್ಯ ಕಾರ್ಯದರ್ಶಿ ಶೋಭಾ ಬಿ.ಜೆ. ಪ್ರತಿಕ್ರಿಯಿಸಿ, “ಶೋಷಣೆಗೊಳಗಾಗುವ ಲಿಂಗತ್ವ ಅಲ್ಪಸಂಖ್ಯಾತರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರು ಕೊಡಬೇಕು. ಟ್ರಾನ್ಸ್‌ಜೆಂಡರ್ಸ್‌ ಉಚಿತವಾಗಿ ನ್ಯಾಯ ಪಡೆಯಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೂ ದೂರು ಕೊಡಬಹುದು” ಎಂದು ಸೂಚಿಸಿದರು.

“ಪ್ರಾಧಿಕಾರದ ಸೇವೆ ಉಚಿತ. ದೂರುಗಳು ಬಂದಾಗ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನಗಳನ್ನು ಕೂಡ ಪಡೆಯಲು ಅವಕಾಶವಿರುತ್ತದೆ ಎಂದು ಅವರು ಧೈರ್ಯ ತುಂಬಿದರು. ಯಾವುದೇ ಕಚೇರಿ ಸೇರಿದಂತೆ ಎಲ್ಲಿಯಾದರೂ ನಮಗೆ ಕೆಲಸ ಕೊಡಿ. ಕಸ ಗುಡಿಸುವ ಕೆಲಸವಾದರೂ ಆದೀತು. ನಮಗೂ ಈ ಹಾಳು ದಂಧೆ ನಡೆಸೋಕೆ ಮನಸ್ಸಿಲ್ಲ. ನೆಮ್ಮದಿಯಿಂದ ನಮ್ಮ ಪಾಡಿಗೆ ಇರುತ್ತೇವೆ” ಎಂದು ಮಂಗಳಮುಖಿಯೊಬ್ಬರು ಮನವಿ ಮಾಡಿದರು.

Leave a Comment

Your email address will not be published. Required fields are marked *