ಚೀನಾ-ತಜಕಿಸ್ತಾನ್ ಗಡಿಯಲ್ಲಿ ಭಾರೀ ಭೂಕಂಪ| ರಿಕ್ಟರ್ ನಲ್ಲಿ 7.3 ತೀವ್ರತೆ ದಾಖಲು

ಸಮಗ್ರ ನ್ಯೂಸ್: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶ ಮತ್ತು ತಜಕಿಸ್ತಾನದ ಗಡಿಯಲ್ಲಿ ಸುಮಾರು 8:37 ಕ್ಕೆ ಸುಮಾರು 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಚೀನಾದ ರಾಜ್ಯ ದೂರದರ್ಶನ ಸಿಸಿಟಿವಿ ಇಂದು (ಫೆ.23) ವರದಿ ಮಾಡಿದೆ.

Ad Widget ... ..

ಚೀನಾದ ರಾಜ್ಯ ಮಾಧ್ಯಮವೂ ವರದಿಗಳನ್ನು ದೃಢಪಡಿಸಿದೆ. ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದ ಬಳಿ ಗುರುವಾರ 7.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

Ad Widget

ಇದುವರೆಗೆ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗುತ್ತಿದೆ.

Leave a Comment

Your email address will not be published. Required fields are marked *