ಸಮಗ್ರ ನ್ಯೂಸ್: ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿದ್ದಾಗ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬೆಳ್ಳಾರೆಯ ಮುಸ್ಲಿಂ ಮುಖಂಡನೋರ್ವನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ.
ಆರೋಪಿಯು ರಾತ್ರಿ ಸಮಯ ತಾಯಿ ಮೊಬೈಲಿನಿಂದ ಕರೆ ಮಾಡಿ ಮಾತನಾಡುವಂತೆ ಒತ್ತಾಯ ಮಾಡಿದ್ದು, ಇದರಿಂದ ಭಯಗೊಂಡ ಬಾಲಕಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿರುದಾಗಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಅಶ್ರಫ್ ಯಾನೆ ಅಚ್ಚಚ್ಚಪ್ಪನು ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವ ಸಮಯ ಆರೋಪಿಯು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿದ್ದು, ನೀನು ರಾತ್ರಿ ಸಮಯ ನಿನ್ನ ತಾಯಿ ಮೊಬೈಲಿನಿಂದ ಕರೆ ಮಾಡಿ ನನ್ನ ಜೊತೆ ಮಾತನಾಡಬೇಕು ಎಂಬುದಾಗಿ ತಿಳಿಸಿದ್ದಾನೆ. ಈ ಬಗ್ಗೆ ಬಾಲಕಿಯು ಮನೆಗೆ ಬಂದು ವಿಚಾರ ತಿಳಿಸಿದ್ದು, ನಂತರದ ದಿನಗಳಲ್ಲಿ ಬಾಲಕಿ ಹೆದರಿ ನಾನು ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿದ್ದು, ಆತನು ಪದೇ ಪದೇ ಕರೆ ಮಾಡಲು ಒತ್ತಾಯಿಸುತ್ತಿದ್ದು ದರಿಂದ ಪೋಷಕರು ಮಗಳು ಮನೆಯಲ್ಲಿರುವ ಸಮಯ ಮೊಬೈಲ್ ನಿಂದ ಅಶ್ರಫ್ ಗೆ ಕರೆ ಮಾಡಿಸಿದಾಗ ಆತನು ಅಶ್ಲೀಲವಾಗಿ ಮಾತನಾಡಿದ್ದು, ಇದರಿಂದ ಆಕೆ ಹೆದರಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲಂ 354(D), 509 ಐಪಿಸಿ ಮತ್ತು ಕಲಂ 12 ಫೋಕ್ಸೋ ಆಕ್ಟ್ 2012 ಪ್ರಕರಣ ದಾಖಲಾಗಿದೆ.