Ad Widget .

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯಗೊಳಿಸಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ಸಮಗ್ರ ನ್ಯೂಸ್: ಶಾಲೆಗಳಲ್ಲಿ ಒಂದನೇ ತರಗತಿಯ ಪ್ರವೇಶಾತಿಯ ಕನಿಷ್ಠ ವಯಸ್ಸನ್ನು 6ಕ್ಕೆ ಏರಿಕೆ ಮಾಡಿ ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

Ad Widget . Ad Widget .

ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನ್ವಯ ಎಲ್ಲ ರಾಜ್ಯಗಳಲ್ಲೂ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು ೬ ಇರಬೇಕು ಎಂಬುದಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ನಿರ್ದೇಶನ ನೀಡಿದೆ.

Ad Widget . Ad Widget .

“ದೇಶದ 14 ರಾಜ್ಯಗಳಲ್ಲಿ 6 ವರ್ಷ ತುಂಬುವ ಮೊದಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆದರೆ, ನೂತನ ಶಿಕ್ಷಣ ನೀತಿ ಅನ್ವಯ ಒಂದನೇ ತರಗತಿಯ ಪ್ರವೇಶಾತಿಗೆ ಯಾವುದೇ ಮಗುವಿಗೆ 6 ವರ್ಷವಾಗಿರಬೇಕು. ಹಾಗಾಗಿ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ವಯಸ್ಸನ್ನು 6ಕ್ಕೆ ಏರಿಸಬೇಕು” ಎಂದು ಸೂಚಿಸಿದೆ.

ಅಸ್ಸಾಂ, ಗುಜರಾತ್‌, ಪುದುಚೇರಿ, ತೆಲಂಗಾಣ ಹಾಗೂ ಲಡಾಕ್‌ನಲ್ಲಿ ೫ ವರ್ಷ ತುಂಬಿದ ಕೂಡಲೇ ಒಂದನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ. ಆಂಧ್ರಪ್ರದೇಶ, ದೆಹಲಿ, ರಾಜಸ್ಥಾನ, ಉತ್ತರಾಖಂಡ, ಹರಿಯಾಣ, ಗೋವಾ, ಜಾರ್ಖಂಡ್‌, ಕೇರಳ ಹಾಗೂ ಕರ್ನಾಟಕದಲ್ಲಿ ಐದು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಬಾಲಕರನ್ನು ಮೊದಲನೇ ತರಗತಿಗೆ ಪ್ರವೇಶಾತಿ ನೀಡಲಾಗುತ್ತದೆ.

Leave a Comment

Your email address will not be published. Required fields are marked *