Ad Widget .

ಕಾಣಿಯೂರು: ಕೌಟುಂಬಿಕ ಗಲಭೆ; ಇಬ್ಬರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಕಾಣಿಯೂರು ಸಮೀಪದ ಬೆಳಂದೂರಿನ ಅಮೈ ಎಂಬಲ್ಲಿ ಕುಟುಂಬದೊಳಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳಿಂದ ದೂರು ದಾಖಲಾಗಿದೆ.

Ad Widget . Ad Widget .

ಅಮೈ ನಿವಾಸಿ ಧರ್ಮಪಾಲ ಎಂಬವರಿಗೆ ಅವರ ಅಣ್ಣನ ಪತ್ನಿ ಹಾಗೂ ಮಗಳು ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿ ದೂಡಿ ಹಾಕಿ ನೆಲದಲ್ಲಿದ್ದ ಕಲ್ಲು ಮುಖಕ್ಕೆ ತಾಗಿ ಗುದ್ದಿರುವುದಾಗಿ ಆರೋಸಲಾಗಿದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

Ad Widget . Ad Widget .

ಯಶೋದಾ ಅವರು ದೂರು ನೀಡಿ ಬೆಳಂದೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡಿಕೊಂಡಿರುವ ತಾನು ಫೆ. 20ರಂದು ಸಂಜೆ 5ರ ವೇಳೆಗೆ ಹೆತ್ತವರ ಯೋಗ ಕ್ಷೇಮ ವಿಚಾರಿಸಲು ಬೆಳಂದೂರಿನ ಅಮೈಯಲ್ಲಿರುವ ತವರು ಮನೆಗೆ ಬಂದಿದ್ದೆ. ಆಗ ಅಲ್ಲಿಗೆ ಬಂದಿದ್ದ ತನ್ನ ಅವಾಚ್ಯ ಶಬ್ದಗಳಿಂದ ಬೈದು, ಮರದ ಸಲಾಕೆಯಿಂದ ಕೈಗೆ, ಬೆನ್ನಿನ ಹಿಂಬದಿಗೆ ಹೊಡೆದು ಗಾಯಗೊಳಿಸಿರುವುದಾಗಿ ಆರೋಪಿಸಿದ್ದಾರೆ.

ಗಾಯಗೊಂಡ ಯಶೋದಾ ಅವರು ಸುಳ್ಯ ಸರಕಾರಿ ಆಸ್ಪತ್ರೆ ಮತ್ತು ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *