Ad Widget .

ಬ್ರಿಟೀಷರು‌ ನೆಟ್ಟಿದ್ದ ಸಾಗುವಾನಿ ಮರದ ಹರಾಜು ಮೌಲ್ಯ ಗೊತ್ತಾ? ಕೇರಳದಲ್ಲಿ ಬೃಹತ್ ಮೊತ್ತಕ್ಕೆ ಮಾರಾಟವಾಯ್ತು ನಿಲಂಬೂರ್ ತೇಗ

ಸಮಗ್ರ ನ್ಯೂಸ್: ಬ್ರಿಟೀಷರು ನೆಟ್ಟಿದ್ದ 114 ವರ್ಷದ ನಿಲಂಬೂರ್ ತೇಗ (ಸಾಗುವಾನಿ) ಮರವೊಂದು ಕೇರಳದಲ್ಲಿ 39.29 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಇದು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಮಾರಾಟವಾದ ಸಾರ್ವಕಾಲಿಕ ದಾಖಲೆ ಎಂದು ಪರಿಗಣಿಸಲಾಗಿದೆ. ತಿರುವನಂತಪುರಂ ಮೂಲದ ಅಜೀಶ್ ಎಂಬುವವರು ಇಷ್ಟೊಂದು ಬೆಲೆಗೆ ಮರದ ಮೂರು ತಂಡುಗಳನ್ನು ಖರೀದಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿಲಂಬೂರಿನ ಅರಣ್ಯ ಇಲಾಖೆಯ ಅರುವಕೊಡೆ ನೆಡುಂಕಯಂ ಡಿಪೋಗಳಲ್ಲಿ ನಡೆಯುವ ಇ-ಹರಾಜಿನಲ್ಲಿ ಇವರು ಭಾಗವಹಿಸುತ್ತಿದ್ದಾರೆ.

Ad Widget . Ad Widget . Ad Widget .

ರಾಜ್ಯದ ಸಂರಕ್ಷಿತ ಪ್ರದೇಶದಲ್ಲಿ 1909ರಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ಸಾಗುವಾನಿ ಗಿಡ ನೆಟ್ಟಿದ್ದರು. ಹೆಮ್ಮರವಾಗಿ ಬೆಳೆದು ಒಣಗಿ ಬಿದ್ದ ನಂತರ ಫೆಬ್ರವರಿ 10ರಂದು ನೆಡುಂಕಯಂ ಡಿಪೋದಲ್ಲಿ ಇದರ ಮೂರು ತುಂಡುಗಳನ್ನು ಹರಾಜಿಗೆ ಕರೆಯಲಾಗಿತ್ತು. ಈ ತುಂಡುಗಳು ಸುಮಾರು ಎಂಟು ಘನ ಮೀಟರ್​ ಇದ್ದವು.

ಹರಾಜಿನಲ್ಲಿ ಮರದ ತುಂಡುಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ತುಂಡು 23 ಲಕ್ಷ ರೂಪಾಯಿಗೆ ಹರಾಜಾದರೆ, ಇತರ ತಂಡುಗಳು ಕ್ರಮವಾಗಿ 11 ಲಕ್ಷ ರೂ. ಮತ್ತು 5.25 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಒಣಗಿದ ಮರದಿಂದ ಸರ್ಕಾರದ ಬೊಕ್ಕಸಕ್ಕೆ 39.25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.

ನಿಲಂಬೂರ್ ತೇಗದ ಮರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಮಾರುಕಟ್ಟೆ ಇದೆ. ಇದು ಸಂರಕ್ಷಿತ ಮರವಾಗಿದ್ದರಿಂದ ಇಲ್ಲಿ ಒಣಗಿದಾಗ ಅಥವಾ ಬಿದ್ದಾಗ ಮಾತ್ರ ಹರಾಜು ಮಾಡಲಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೆಡುಂಕಯಂ ಟಿಂಬರ್ ಸೇಲ್ ಡಿಪೋದ ಅಧಿಕಾರಿಗಳು, ಈ ಮರಕ್ಕೆ ಹೆಚ್ಚಿನ ಬೆಲೆ ನಿರೀಕ್ಷಿಸಿದ್ದೆವು. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತದೆ ಅಂತಾ ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *