Ad Widget .

ಸರ್ಕಾರಕ್ಕೆ ಬಿಸಿ ತುಪ್ಪವಾದ 7ನೇ ವೇತನ ಆಯೋಗ| ಮಾ.1 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರ್ಧಾರ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವರದಿ ಜಾರಿಗಾಗಿ ನೌಕರರ ಪಟ್ಟು ಹಿಡಿದಿದ್ದು, ಫೆ.22 ರಿಂದ ಫೆ.28 ರವರೆಗೆ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಒಂದೇ ವೇಳೆ ಯೋಜನೆ ಜಾರಿಗೆ ತರದಿದ್ದರೆ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಇಂದು ನಡೆದ ನೌಕರರ ಸಂಘದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Ad Widget . Ad Widget . Ad Widget .

ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು 40% ಫಿಟ್ಮೆಂಟ್ನ್ನು ದಿನಾಂಕ 1.07.2022 ರಿಂದ ಜಾರಿಗೆ ತರುವುದು, ರಾಜಸ್ತಾನ, ಛತ್ತೀಸಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಮಾಡಬೇಕು ಎಂದು ಬೇಡಿಕೆಯಿಟ್ಟಿದೆ.

ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಗಾಗಿನ ಪಟ್ಟು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರಿ ನೌಕರರು ತಮ್ಮ ಪಟ್ಟು ಬಿಗಿಪಡಿಸಲು ಮುಂದಾಗಿದ್ದು, ಬೊಮ್ಮಾಯಿ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

Leave a Comment

Your email address will not be published. Required fields are marked *