Ad Widget .

ನನ್ನ ಹೆಣವೂ ಪ್ರಿಡ್ಜ್ ಒಳಗೆ ಸ್ಟೋರ್ ಆಗ್ತಿತ್ತು, ದೇವರು ಬಚಾವ್ ಮಾಡಿದ| ಗೋಳು ತೋಡಿಕೊಂಡ ರಾಖಿ ಸಾವಂತ್

ಸಮಗ್ರ ನ್ಯೂಸ್: ಮದುವೆಯಾಗಿ ಕೆಲವೇ ದಿನಗಳಲ್ಲಿಯೇ ಗಂಡ ಆದಿಲ್‌ ಖಾನ್‌ ಜೊತೆಗಿನ ಮನಸ್ತಾಪದಿಂದಾಗಿ ನಟಿ, ಡಾನ್ಸರ್‌ ಹಾಗೂ ಬಿಗ್‌ ಬಾಸ್‌ ಮೂಲಕ ಪ್ರಸಿದ್ಧಿ ಪಡೆದ ರಾಖಿ ಸಾವಂತ್‌ ಸುದ್ದಿಯಲ್ಲಿದ್ದಾರೆ. ಒಂದು ಕಡೆ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದಲ್ಲಿ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ಜೈಲಿನಲ್ಲಿದ್ದರೆ, ರಾಖಿ ಸಾವಂತ್‌ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

Ad Widget . Ad Widget .

ಇತ್ತೀಚೆಗೆ ಮತ್ತೆ ಮಾಧ್ಯಮಗಳ ಎದುರು ಬಂದಿದ್ದ ರಾಖಿ ಸಾವಂತ್‌, ಕೆನ್ನೆಗೆ ಹೊಡೆದುಕೊಳ್ಳುತ್ತಾ ಅಯ್ಯಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂದು ಕಣ್ಣೀರು ಹಾಕಿದರು. ಜೀವನದಲ್ಲಿ ಕಷ್ಠದ ಸಮಯದಲ್ಲಿರುವ ರಾಖಿ ಸಾವಂತ್‌ ಪತ್ರಕರ್ತರು ಎದುರುಗಡೆ ಸಿಕ್ಕು ಏನಾಯ್ತಮ್ಮ ಎಂದು ಕೇಳಿದಾಗ, ತನ್ನ ಕೆನ್ನೆಗೆ ಹೊಡೆದುಕೊಳ್ಳಲು ಆರಂಭಿಸಿದ್ದರು. ಭಾವುಕರಾಗಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ರಾಖಿ ಸಾವಂತ್‌, ‘ನಾನ್ಯಾಕ ಆದಿಲ್‌ನ ಪ್ರೀತಿಸಿದೆ?’ ಎಂದು ಪಶ್ಚಾತ್ತಾಪ ಮಾಡಿಕೊಂಡರು. ಶ್ರದ್ಧಾ ವಾಕರ್‌ ರೀತಿಯಲ್ಲಿಯೇ ನನ್ನನ್ನೂ ಕೂಡ ಫ್ರಿಡ್ಜ್‌ನಲ್ಲಿ ಹಾಕುವ ಪ್ಲ್ಯಾನ್‌ ಮಾಡಿದ್ದರು ಎಂದು ಮತ್ತೊಮ್ಮೆ ಹೇಳಿದ್ದಾರೆ. ‘ದೇಶದ ಕೆಲವೊಂದು ಹೆಣ್ಣುಮಕ್ಕಳ ದೇಹಗಳು ಫ್ರಿಡ್ಜ್‌ನಲ್ಲಿ ಸಿಕ್ಕಿದ್ದವು. ಬಹುಶಃ ನನ್ನ ಕಥೆ ಕೂಡ ಅದೇ ರೀತಿ ಆಗುತ್ತಿತ್ತು. ನಾನೂ ಕೂಡ್‌ ಫ್ರಿಡ್ಜ್‌ನ ಒಳಗೆ ಹೋಗುತ್ತಿದ್ದೆ… ಆದರೆ ದೇವರು ದೊಡ್ಡವನು ಬಚಾವ್‌ ಆಗಿದ್ದೇನೆ’ ಎಂದು ಹೇಳಿದ್ದಾರೆ.

Ad Widget . Ad Widget .

‘ನನಗೆ ನಾನೇ ಕೆನ್ನೆಗೆ ಹೊಡೆದುಕೊಳ್ಳಬೇಕು ಎಂದು ಅನಿಸುತ್ತಿದೆ. ನಿಜವಾಗಲೂ ನನಗೆ ಹೊಡೆದುಕೊಳ್ಳಬೇಕು ಎಂದೇ ಅನಿಸುತ್ತಿದೆ. ಆದಿಲ್‌ನನ್ನು ನಾನೇಕೆ ನಂಬಿದೆ. ನಾನ್ಯಾಕೆ ಅವನನ್ನು ಇಷ್ಟಪಟ್ಟೆ. ಅವನನ್ನು ನಾನು ಅಷ್ಟು ನಂಬಿದ್ದಾದರೂ ಏಕೆ. ಈಗ ನಾನೆಲ್ಲಿ ಹೋಗಲಿ’ ಎಂದು ಕೆನ್ನೆಗೆ ಹೊಡೆದುಕೊಂಡು ರಾಖಿ ಸಾವಂತ್‌ ಮಾಧ್ಯಮಗಳಿಗೆ ಮಾತನಾಡುತ್ತಿದ್ದರೆ, ಪತ್ರಕರ್ತರು ರಾಖಿ ನೀವು ಹಾಗೆಲ್ಲ ಮಾಡಿಕೊಳ್ಳಬೇಡಿ.. ಸಮಾಧಾನ ಮಾಡಿಕೊಳ್ಳಿ ಎಂದು ಸಂತೈಸುತ್ತಿದ್ದರು.

Leave a Comment

Your email address will not be published. Required fields are marked *