ನೇಣಿಗೆ ಶರಣಾದ ಮಹಿಳಾ ಪೊಲೀಸ್ ಪೇದೆ

ಸಮಗ್ರ ನ್ಯೂಸ್: ಮಹಿಳಾ ಪೊಲೀಸ್​ ಕಾನ್ಸ್​​ಟೇಬಲ್​ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್​ಆರ್​​ಪಿ ವಸತಿಗೃಹದ ಮನೆಯಲ್ಲಿ ನಡೆದಿದೆ.

Ad Widget ... ..

ಗೀತಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೀತಾ, ನಜರಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದರು. ನಿನ್ನೆ (ಫೆ.19) ಗೀತಾ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು.

Ad Widget

ಮನೆಯಲ್ಲಿದ್ದ ಪತಿಯನ್ನು, ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಈ ವೇಳೆ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು ಬಂದು ನೋಡಿದಾಗ ಗೀತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *