Ad Widget .

ಟೆನಿಸ್ ಗೆ ವಿದಾಯ ಘೋಷಿಸಿದ ಸಾನಿಯಾ ಮಿರ್ಜಾ| ಸೋಲಿನೊಂದಿಗೆ ವೃತ್ತಿಜೀವನಕ್ಕೆ ಗುಡ್ ಬೈ ಹೇಳಿದ ಮೂಗುತಿ ಸುಂದರಿ

ಸಮಗ್ರ ನ್ಯೂಸ್: WTA ದುಬೈ ಡ್ಯೂಟಿ ಫ್ರೀ ಚಾಂಪಿಯನ್ ಶಿಪ್’ನಲ್ಲಿ ಸಾನಿಯಾ ಮಿರ್ಜಾ ಮೊದಲ ಸುತ್ತಿನ ಸೋಲಿನೊಂದಿಗೆ ತಮ್ಮ ಟೆನಿಸ್ ವೃತ್ತಿಜೀವನವನ್ನು ಕೊನೆಗೊಳಿಸಿದರು.

Ad Widget . Ad Widget .

ಮಂಗಳವಾರ ದುಬೈನಲ್ಲಿ ಅಮೆರಿಕದ ಪಾಲುದಾರ ಮ್ಯಾಡಿಸನ್ ಕೀಸ್ ಅವರೊಂದಿಗೆ ಕಣಕ್ಕಿಳಿದ ಸಾನಿಯಾ ಮಿರ್ಜಾ, ರಷ್ಯಾದ ಜೋಡಿ ವೆರ್ನೊಕಿಯಾ ಕುಡೆರ್​ಮೆಟೋವಾ ಮತ್ತು ಲ್ಯೂಡ್​ಮಿಲಾ ಸ್ಯಾಮ್ಸೊನೊವಾವ ವಿರುದ್ಧ 46,0-6 ನೇರ ಸೆಟ್​ಗಳಿಂದ ಸೋಲು ಕಂಡರು. ಈ ಮೂಲಕ ತಮ್ಮ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದರು.

Ad Widget . Ad Widget .

2003ರಲ್ಲಿ ಪ್ರೊ ಆಗಿ ಆಯ್ಕೆಯಾಗಿದ್ದ 36ರ ಹರೆಯದ ಸಾನಿಯಾ ಮಿರ್ಜಾ, ಸ್ವಿಸ್ ಲೆಜೆಂಡ್ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಮೂರು ಮಹಿಳಾ ಡಬಲ್ಸ್ ಸೇರಿದಂತೆ ಆರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಸ್ಪರ್ಧಾತ್ಮಕ ಟೆನಿಸ್ ನಿಂದ ಹೊರನಡೆದಿದ್ದಾರೆ.

ಮಹೇಶ್ ಭೂಪತಿ (2009 ಆಸ್ಟ್ರೇಲಿಯನ್ ಓಪನ್ ಮತ್ತು 2012 ಫ್ರೆಂಚ್ ಓಪನ್) ಅವರೊಂದಿಗೆ ಮೂರು ಮಿಶ್ರ ಡಬಲ್ಸ್’ಗಳಲ್ಲಿ ಎರಡನ್ನು ಗೆದ್ದರು. ಅವರು ಬ್ರೂನೋ ಸೊರೆಸ್ ಅವರೊಂದಿಗೆ ಯುಎಸ್ ಓಪನ್ ಟ್ರೋಫಿಯನ್ನು ಗೆದ್ದಿದ್ದರು.

Leave a Comment

Your email address will not be published. Required fields are marked *