Ad Widget .

ಸುಳ್ಯ: ಸಾಲದ‌ ಕಂತು ಕಟ್ಟಲಾಗದೆ ಬ್ಯಾಂಕ್ ಗೆ ಬೆಂಕಿಹಚ್ಚಿ ಆತ್ಮಹತ್ಯೆಗೆ ಯತ್ನ| ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಸಾಲದ ಕಂತು ಕಟ್ಟಲಾಗದೆ ಸಹಕಾರ‌ ಸಂಘದ ಕಚೇರಿಯೊಳಗೆ ನುಗ್ಗಿದ ಗ್ರಾಹಕರೋರ್ವರು ಪೆಟ್ರೊಲ್ ಚೆಲ್ಲಿ ಬ್ಯಾಂಕ್ ಗೆ ಬೆಂಕಿಹಚ್ಚಲು ಯತ್ನಿಸಿದಲ್ಲದೆ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ.

Ad Widget . Ad Widget .

ಸುಳ್ಯದ ರಥಬೀದಿಯಲ್ಲಿರುವ ಸರಸ್ವತಿ ಸೌಹಾರ್ದ ಸಂಘದ ಶಾಖೆಗೆ ನುಗ್ಗಿದ ಶಿವಣ್ಣಗೌಡ ಎಂಬವರು ಈ ರೀತಿ ಮಾಡಲು ಯತ್ನಿಸಿರುವ ವ್ಯಕ್ತಿ. ಅವರು ಫೆ.20 ರಂದು ರಥಭೀದಿಯ ಸರಸ್ವತಿ ಸೌಹಾರ್ದ ಸಂಘದ ಶಾಖೆಗೆ 10 ಗಂಟೆ ಸುಮಾರಿಗೆ ನುಗ್ಗಿದ್ದು ತಾನು ಪಡೆದಿರುವ ಸಾಲದ ಕಂತಿನ ವಿವರದಲ್ಲಿ ಮಾತುಕಥೆ ನಡೆಸುತ್ತಾ ತಾನು ತಂದಿರುವ ಪೆಟ್ರೋಲ್ ಕ್ಯಾನ್ ನಿಂದ ಪೆಟ್ರೋಲ್ ಚೆಲ್ಲಿ ಈಗಲೇ ‌ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Ad Widget . Ad Widget .

ನೋಡನೋಡುತ್ತಿದ್ದಂತೆ ಪೆಟ್ರೋಲ್ ಚೆಲ್ಲಿ ಸಿಗಾರ್ ಲೈಟರ್ ನಿಂದ ಬೆಂಕಿ ಹಚ್ಚಲು ಯತ್ನಿಸಿದ್ದು, ಕೂಡಲೇ ಬ್ಯಾಂಕಿನ ಸಿಬ್ಬಂದಿಗಳು ಆತನನ್ನು ತಡೆದು ಪೋಲಿಸರಿಗೆ ದೂರವಾಣಿಯಲ್ಲಿ ಸಂಪರ್ಕಿಸಿದ್ದಾರೆ. ಪೋಲಿಸರು ಸ್ಥಳಕ್ಕೆ ಧಾವಿಸಿ ಶಿವಣ್ಣ ಗೌಡ ಮತ್ತು ಆತನ ಸ್ಕೂಟರ್ ಸಮೇತ ಠಾಣೆಗೆ ಕರೆದೊಯ್ದಿದ್ದಾರೆ.

ಶಿವಣ್ಣ ಗೌಡ ಆಸ್ತಿ ಖರೀದಿಗೆ
ಸರಸ್ವತಿ ಸೌಹಾರ್ದ‌ ಸಹಕಾರ ಸಂಘದಿಂದ ಸಾಲವನ್ನು ಪಡೆದಿದ್ದರು. ಹಲವು ಕಂತು ಬಾಕಿಯಾಗಿದ್ದು, ಆಸ್ತಿ ಮುಟ್ಟುಗೋಲು ಹಾಕಲು ತಯಾರಿಯಾಗಿತ್ತು. ಇದರಿಂದ ಬೇಸತ್ತ ಅವರು ಈ ಕೃತ್ಯಕ್ಕೆ ಯತ್ನಿಸಿದ್ದಾರೆಂದು ಹೇಳಲಾಗಿದೆ. ಒಟ್ಟಾರೆ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿದಂತಾಗಿದೆ.

Leave a Comment

Your email address will not be published. Required fields are marked *