Ad Widget .

ರೋಹಿಣಿ ನನ್ನ ಮಗನ ಸಾವಿಗೆ ಕಾರಣವಲ್ಲ| ಅಧಿಕಾರ ಬಳಸಿ ಕೆಲಸ ಮಾಡಿ; ಅವನ ಹೆಸರಿಗೆ ಮಸಿ ಹಚ್ಚಬೇಡಿ| ರೂಪಾ, ರೋಹಿಣಿಗೆ ದಿ. ಡಿ.ಕೆ ರವಿ ತಾಯಿ‌ ಗೌರಮ್ಮ ಮನವಿ

ಸಮಗ್ರ ನ್ಯೂಸ್: ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ‌ಇಬ್ಬರು ಮಹಿಳಾ ಅಧಿಕಾರಿಗಳ ಕಿತ್ತಾಟದಲ್ಲಿ ನನ್ನ ಮಗನ ಹೆಸರು ತರಬೇಡಿ. ನನ್ನ ಮಗ ಮೃತಪಟ್ಟು 8 ವರ್ಷಗಳು ಕಳೆದಿವೆ. ನಿಮ್ಮ ಜಗಳದಿಂದ ನನ್ನ ಮಗನ ಹೆಸರಿಗೆ ಮಸಿ ಹಚ್ಚಬೇಡಿ ಎಂದು ಐಎಎಸ್‌ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಕಿಡಿಕಾರಿದರು.

Ad Widget . Ad Widget .

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಕದರಮಂಗಲ ಗ್ರಾಮದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ.ರವಿ ತಾಯಿ ಗೌರಮ್ಮ ಮಾಧ್ಯಮಗಳೊಂದಿಗೆ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಐಪಿಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ , ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕೆಲ ಪೋಟೋಗಳನ್ನು ಪೋಸ್ಟ್ ಮಾಡಿದ್ದಲ್ಲದೇ ಡಿ.ಕೆ.ರವಿ ಹೆಸರು ಪ್ರಸ್ತಾಪ ಮಾಡಿರುವುದಕ್ಕೆ ಕಿಡಿಕಾರಿದರು.

Ad Widget . Ad Widget .

“ನನ್ನ ಮಗ ಡಿ.ಕೆ. ರವಿ ಸಾವಿಗೆ ರೋಹಿಣಿ ಸಿಂಧೂರಿ ಹೊಣೆಯಲ್ಲ. ಅವರಿಬ್ಬರು ಸ್ನೇಹಿತರು,‌ ಅವರು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲೂ ಸ್ನೇಹಿತರಾಗಿದ್ದರು. ಹಾಗಾಗ ನನಗೂ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರು ಇಷ್ಟಪಟ್ಟಿದ್ದರೆ “ಆ” ಸಮಯದಲ್ಲೇ ಇಬ್ಬರು ಮದುವೆ ಅಗಬಹುದಿತ್ತು.‌ ಅದಕ್ಕೆ ಯಾರ ವಿರೋಧವೂ ಇರಲಿಲ್ಲ. ಹಾಗಾಗಿ ಅವರ ಮೇಲೆ ಎನೂ ಹೇಳುವುದಿಲ್ಲ‌,” ಎಂದು ಡಿ.ಕೆ.ರವಿ ತಾಯಿ ಗೌರಮ್ಮ‌ ತಿಳಿಸಿದರು.

“ನಮ್ಮ ಮನೆಗೆ ರೋಹಿಣಿ ಸಿಂಧೂರಿ ಮೂರು ಬಾರಿ ಬಂದಿದ್ದಾರೆ. ಡಿ.ಕೆ. ರವಿಯ ಸಾಮಾಜಿಕ ಕಳಕಳಿ ಕಂಡು ನನಗೂ ಮಾರ್ಗದರ್ಶನ ಮಾಡು ಎಂದು ರೋಹಿಣಿ ನನ್ನ ಮುಂದೆಯೇ ಕೇಳಿದ್ದಾಳೆ. ರೋಹಿಣಿ ಸಿಂಧೂರಿ ಮೇಲೆ ಅಪರಾಧ ಹೊರಿಸಲು ರೂಪ‌ ಅವರು ನನ್ನ ಮಗನ ಹೆಸರನ್ನು ತಂದಿದ್ದಾರೆ. ನಿಮ್ಮಿಬ್ಬರ ಜಗಳದಲ್ಲಿ ನನ್ನ ಮಗನ ಹೆಸರು ತರಬೇಡಿ, ನೀವೆ ಆಗಲಿ, ರಾಜಕಾರಣಿಗಳೇ ಆಗಲಿ ಯಾವುದೆ ವಿಚಾರಕ್ಕೆ ನನ್ನ ಮಗನ ಹೆಸರು ತರಬೇಡಿ,” ಎಂದು ಗೌರಮ್ಮ ಎಚ್ಚರಿಕೆ ನೀಡಿದರು.

ನನ್ನ ಮಗನಿಗೆ ಇದ್ದಷ್ಟು ಅಧಿಕಾರ ನಿಮಗೂ ಇದೆ. ನಿಮ್ಮ‌ಅಧಿಕಾರ ಬಳಸಿಕೊಂಡು ಜನರಿಗೆ ಉಪಕಾರ ಮಾಡಿ. ದುಡಿಯುವ ಕೈಗಳಿಗೆ ಕೆಲಸ ಕೊಡುವ ಮೂಲ‌ಕ ಜೀವನ ರೂಪಿಸಿ. ನನ್ನ ಮಗ ನಡೆದ ದಾರಿಯಲ್ಲಿ ನಡೆಯಿರಿ‌. ಅದರೆ ನಿಮ್ಮ ಜಗಳದಲ್ಲಿ, ಸಿಂಧೂರಿ ಅವರ ಮೇಲೆ ಅಪವಾದ ಹೊರಿಸಿದ್ದೀರಿ. ಹಾಗೆಯೇ ನನ್ನ ಮಗನ ಹೆಸರು ತಂದು ಅವನ ಹೆಸರಿಗೆ ಮಸಿ ಹಚ್ವುವ ಕೆಲಸ ಮಾಡಬೇಡಿ ರೂಪಾ ಅವರೇ ಎಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು.

Leave a Comment

Your email address will not be published. Required fields are marked *