Ad Widget .

ಹುಬ್ಬಳ್ಳಿ: ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನ ಯುವಕನ ಕಗ್ಗೊಲೆ| ಹಳೆ ವೈಷಮ್ಯಕ್ಕೆ ಬಲಿಯಾದ ದುರ್ದೈವಿ

ಸಮಗ್ರ ನ್ಯೂಸ್: ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ರಥೋತ್ಸವ ದಿನವೇ ಹಾಡುಹಗಲೆ ಯುವಕನೊಬ್ಬನನ್ನು ಮನಬಂದಂತೆ ಕೊಚ್ಚಿ ಕೊಲೆಗೈದ ದುರಂತ ಘಟನೆ ಬೆಳಕಿಗೆ ಬಂದಿದೆ.

Ad Widget . Ad Widget .

ಹುಬ್ಬಳ್ಳಿಯ ನೇಕಾರ ನಗರ ನಿವಾಸಿಯಾದ ತಾಯಿ ಲಕ್ಷ್ಮೀ ಅವರ ಪುತ್ರ ನಾಗರಾಜ್ ಚಲವಾದಿ (26) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಈತ ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದನು. ‌

Ad Widget . Ad Widget .

ಕೊಲೆಗೆ ಹಳೇ ವೈಷಮ್ಯವೇ ಕಾರಣವೆಂದು ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಐತಿಹಾಸಿಕ ಸಿದ್ದಾರೂಢ ರಥೋತ್ಸವ ನಿಮಿತ್ತ ಆತನ ಸ್ನೇಹಿತರು ಭಕ್ತರಿಗೆ ಪಲಾವ್ ಮಾಡಿಸಿದ್ದರು ಆದನ್ನು ಕೊಡುವ ನೆಪದಲ್ಲಿ ಆತನನ್ನು ಕರೆದಿದ್ದರು. ಹಳೇ ವೈಷಮ್ಯದಿಂದ ಆತನ ಜೊತೆಗಿದ್ದವರೇ ನಾಗರಾಜ್ ಕಣ್ಣಿಗೆ ಖಾರದ ಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆನಡೆಸಿದ್ದಾರೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *