ಸಮಗ್ರ ನ್ಯೂಸ್: ಜಾಲತಾಣಗಳಲ್ಲಿ ನಡೆಯುತ್ತಿರುವ ಹಿರಿಯ ಐಪಿಎಸ್ ಹಾಗೂ ಐಎಎಸ್ ಅಧಿಕಾರಿಗಳ ಟಾಕ್ ವಾರ್, ಇಂದು ಕೂಡ ಮುಂದುವರೆದಿದ್ದು, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪರ ಅವರ ಅಭಿಮಾನಿಗಳು ಎನ್ನಲಾದವರು ಬ್ಯಾಟ್ ಬೀಸಿದ್ದಾರೆ. ಅಲ್ಲದೇ ಐಪಿಎಸ್ ಅಧಿಕಾರಿ ರೂಪಾ.ಡಿ ಅವರಿಗೆ 9 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಈ ಕುರಿತಂತೆ ಇಂದು ರೋಹಿಣಿ ಸಿಂಧೂರಿ ಆರ್ಗನೈಜೇಷನ್ ಎನ್ನುವಂತ ಫೇಸ್ ಬುಕ್ ಪುಟದಿಂದ ರೂಪಾ.ಡಿಗೆ 9 ಪ್ರಶ್ನೆಗಳನ್ನು ಕೇಳಲಾಗಿದೆ. ಅಭಿಮಾನಿಗಳೆಂದು ಹೇಳಿಕೊಂಡು ಕೇಳಿರುವಂತ ಪ್ರಶ್ನೆಗಳಿಗೆ ರೂಪಾ.ಡಿ ಉತ್ತರಿಸುತ್ತಾರಾ? ಕಾದು ನೋಡಬೇಕಿದೆ.
ರೂಪಾ.ಡಿಗೆ ಕೇಳಿದಂತ ಪ್ರಶ್ನೆಗಳು ಹೀಗಿದೆ.
೧)ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ರೋಹಿಣಿ ಸಿಂಧೂರಿ ಅವರದ್ದು ಏನೂ ತಪ್ಪಿಲ್ಲ ಎಂದು ಈಗಾಗಲೇ ಎಲ್ಲರಿಗೂ ತಿಳಿದಿದ್ದು, ಮತ್ತೆ ಮತ್ತೆ ನೀವು ಅವರ ಮೇಲೆ ಆರೋಪ ಹೊರಿಸುತ್ತಿರುವುದು ಏಕೆ ರೂಪಾ.ಡಿ ಅವರೇ.?
೨) ಹಿರಿಯ ಐಪಿಎಸ್ ಅಧಿಕಾರಿಯಾದ ತಮ್ಮ ಗಮನಕ್ಕೆ ಈ ಆದೇಶ ಬಂದಿಲ್ಲವೇ.?
೩)ತಮ್ಮ ಟ್ವೀಟ್’ನಲ್ಲಿ ಶಿಲ್ಪಾನಾಗ್ ಅವರನ್ನು ‘ಕನ್ನಡತಿ’ ಎಂದು ಹೈಲೈಟ್ ಮಾಡಿರುವ ತಾವು, ಸಿಂಧೂರಿಯವರು ಎಂದಾದರೂ ಕನ್ನಡಿಗರನ್ನು ದ್ವೇಷಿಸಿದ್ದನ್ನು ನೋಡಿದ್ದೀರಾ? ಅವರು ಯಾವುದೇ ವೇದಿಕೆ ಮೇಲೆ ತೆಲುಗುನಲ್ಲಿ ಭಾಷಣ ಮಾಡಿದ್ದನ್ನು ನೋಡಿದ್ದೀರಾ?
೪) ತಾವು ನಿನ್ನೆ ನ್ಯೂಸ್ ಚಾನಲ್ ಗಳೊಂದಿಗೆ ಮಾತನಾಡುವಾಗ ‘ರೋಹಿಣಿಗೂ ನನಗೂ ಹೋಲಿಸಬೇಡಿ’ ಎಂದಿದ್ರಿ, ಇಷ್ಟೆಲ್ಲಾ ನಡೆದರೂ ‘ಎಂದಿನಂತೆ ಶ್ರದ್ಧೆಯಿಂದ ಕೆಲಸ ಮಾಡ್ತೀನಿ’ ಎನ್ನುವ ಅವರೆಲ್ಲಿ.? ಮಾಧ್ಯಮಗಳ ಗಮನ ತಮ್ಮೆಡೆಗೆ ಪ್ರಯತ್ನಿಸುತ್ತಿರುವ ನೀವೆಲ್ಲಿ?
೫) ಮೈಸೂರಿನ ಡಿಸಿ ನಿವಾಸದ ಈಜುಕೊಳ ನಿರ್ಮಾಣದ ಯೋಜನೆ ಮತ್ತು ಯೋಚನೆ ಎರಡು ನನ್ನದಲ್ಲ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದು ತಮ್ಮ ಗಮನಕ್ಕೆ ಬಂದಿಲ್ಲವೇ ಮೇಡಂ?
೬) ‘ಗಾಯಕ ಲಕ್ಕಿ ಅಲಿ ಜಮೀನಿಗೂ ಮತ್ತು ನನಗೂ ಯಾವುದು ಸಂಬಂಧ ಇಲ್ಲ’ ಎಂದು ಸಿಂಧೂರಿಯವರು ಸ್ಪಷ್ಟಪಡಿಸಿದ್ದಾರೆ, ಅವರ ಕುಟುಂಬದ ಯಾರ ಮೇಲೆ ಆರೋಪ ಬಂದರೂ, ಸಿಂಧೂರಿಯವರ ಮೇಲೆ ನೇರ ಆರೋಪ ಹೊರಿಸುವುದು ಏಕೆ?
೭)ಎಲ್ಲಾ ಕನ್ನಡಿಗರಿಗೆ ತಮ್ಮ ಮೇಲೆ ಅಪಾರ ಗೌರವವಿದೆ, ಕನ್ನಡದ ಎಲ್ಲಾ ಹೆಣ್ಣು ಮಕ್ಕಳಿಗೆ ತಾವೇ ದೊಡ್ಡ ಸ್ಪೂರ್ತಿ, ಇದರ ನಡುವೆ ಕರ್ನಾಟಕ ಸರ್ಕಾರದ ಹಿರಿಯ, ಮಹಿಳಾ ಅಧಿಕಾರಿಯನ್ನು ಬೇರೆ ರಾಜ್ಯದವರು ಎಂದು ಹೇಳಿ ನೋವುಂಟು ಮಾಡುವುದು ಸರಿಯೇ?
೮)ಸಿಂಧೂರಿಯವರು ಕರ್ನಾಟಕಕ್ಕೆ ಬಂದ ಆರೇ ತಿಂಗಳಲ್ಲಿ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದನ್ನು ಕಲಿತಿದ್ದಾರೆ, ಅವರು ತಮ್ಮ ಕಚೇರಿ ವೇಳೆಯಲ್ಲಿ ಎಂದಾದರೂ ಕನ್ನಡಿಗರನ್ನು ಕಡೆಗಣಿಸಿರುವುದು ತಮ್ಮ ಗಮನಕ್ಕೆ ಬಂದಿದೆಯೇ?
೯) ರೋಹಿಣಿ ಅವರ ಮೇಲೆ ಯಾವುದೇ ಆರೋಪ ಇದ್ದರೂ, ಅದನ್ನು ನೇರವಾಗಿ ಸಿಎಸ್, ಡಿಜಿಪಿ ಅವರ ಗಮನಕ್ಕೆ ತರದೆ, WhatsApp Screenshot ಗಳಲ್ಲಿ ತೆಗೆದ ಅವರ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದು ಸರಿಯೇ?
ಇನ್ನೂ ಈ ಮೇಲ್ಕಂಡಂತೆ ನಾವು ಕೇಳಿರುವ ಪ್ರಶ್ನೆಗಳಿಗೂ ಮತ್ತು ರೋಹಿಣಿ ಸಿಂಧೂರಿಯವರಿಗೂ ಯಾವುದೇ ಸಂಬಂಧವಿಲ್ಲ. ರೋಹಿಣಿ ಸಿಂಧೂರಿ ಅವರ ಅಭಿಮಾನಿಗಳಾದ ನಾವುಗಳು ಈ ಪ್ರಶ್ನೆಗಳನ್ನು ಕೇಳಿರುತ್ತೇವೆ ಎಂದು ಹೇಳಿದೆ.
ಈ ಫೇಸ್ ಬುಕ್ ಖಾತೆಗೂ ಮತ್ತು ರೋಹಿಣಿ ಸಿಂಧೂರಿ ಅವರಿಗೂ ಯಾವುದೇ ಸಂಬಂಧವಿಲ್ಲ, ಇದೊಂದು ಅವರ ಅಭಿಮಾನಿಗಳ ಪೇಜ್ ಆಗಿರುತ್ತದೆ, ಎಲ್ಲಾ ಪೋಸ್ಟ್ ಗಳು ಅವರ ಅಭಿಮಾನಿಗಳದ್ದೆ ಆಗಿರುತ್ತದೆ ಎಂಬುದಾಗಿ ತಿಳಿಸಲಾಗಿದೆ.