Ad Widget .

ಚಿಕ್ಕಮಗಳೂರು:ಬೈಕಿನಲ್ಲಿ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ

ಸಮಗ್ರ ನ್ಯೂಸ್ : ಬೈಕಿನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಬಿದರೆ-ಚಂದುವಳ್ಳಿ ಗ್ರಾಮದ ಬಳಿ ನಡೆದಿದೆ.

Ad Widget . Ad Widget .

ಮೃತರನ್ನ ಪ್ರಕಾಶ್ (30)ಹಾಗೂ ಪ್ರವೀಣ್ (33) ಎಂದು ಗುರುತಿಸಲಾಗಿದೆ. ಗುಂಡಿನ ದಾಳಿ ನಡೆಸಿದ ರಮೇಶ್ ಎಂಬಾಂತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಗುಂಡಿನದಾಳಿ ನಡೆಸಿದ ರಮೇಶ್ ಹಾಗೂ ಸಾವನ್ನಪ್ಪಿದ ಪ್ರಕಾಶ್, ಪ್ರವೀಣ್ ಎಲ್ಲರೂ ಸಂಬಂಧಿಕರು ಎಂದು ಹೇಳಲಾಗುತ್ತಿದೆ. ಆದರೆ, ಗುಂಡಿನ ದಾಳಿ ನಡೆಸಿದ ರಮೇಶ್ ಗೆ ಬಂದೂಕು ಎಲ್ಲಿಂದ ಸಿಕ್ತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Ad Widget . Ad Widget .

ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಪ್ರಾಣ ರಕ್ಷಣೆಗೆ ಬೆಳೆಗಾರರು ಗನ್ ಇಟ್ಟುಕೊಂಡಿರುತ್ತಾರೆ. ಅದೇ ಬಂದೂಕು ಅಥವ ಯಾವ ಬಂದೂಕು ಪರವಾನಗಿ ಇದೆಯಾ ಎಂಬೆಲ್ಲಾ ದೃಷ್ಠಿಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ, ಹಾಡಹಗಲೇ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ ಸುತ್ತಮುತ್ತಲಿನ ಜನ ಕೂಡ ಕಂಗಾಲಾಗಿದ್ದಾರೆ.

ಗುಂಡಿನದಾಳಿ ನಡೆಸಿದ ರಮೇಶ್ ನನ್ನ ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *