ಮಡಿಕೇರಿ: ತಂದೆಯಿಂದಲೇ ಗುಂಡಿಕ್ಕಿ ಮಗನ ಹತ್ಯೆ

ಸಮಗ್ರ ನ್ಯೂಸ್: ಹಣಕ್ಕಾಗಿ ಪೀಡಿಸುತ್ತಿದ್ದ ಮಗನನ್ನು ತಂದೆಯೇ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಫೆ.19 ರಂದು ನಡೆದಿದೆ.

Ad Widget ... ..

ನಂದೇಟಿರ ನಿರನ್ (28) ಸಾವನ್ನಪ್ಪಿದ ಯುವಕ. ನಂದೇಟಿರ ಚಿಟ್ಟಿಯಪ್ಪ (58) ಹತ್ಯೆ ಮಾಡಿದ ಆರೋಪಿ. ದಿನ ನಿತ್ಯ ಕುಡಿತದ ದಾಸನಾಗಿದ್ದ ನಂದೇಟಿರ ನಿರನ್ ತಂದೆಯ ಬಳಿ ಹಣಕ್ಕಾಗಿ ಪಿಡಿಸುತ್ತಿದ್ದ.

Ad Widget

ಭಾನುವಾರ ಮಧ್ಯಾಹ್ನ ತಂದೆಯ ಬಳಿ 2 ಸಾವಿರ ರೂ. ಹಣಕ್ಕಾಗಿ ಪಟ್ಟು ಹಿಡಿದಿದ್ದಾನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಮತ್ತು ಮಗನ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ.

ಈ ವೇಳೆ ಸಿಟ್ಟಾದ ತಂದೆ ಚಿಟ್ಟಿಯಪ್ಪ ಮನೆಯಲ್ಲಿ ಇದ್ದ ಕೋವಿಯನ್ನು ತಂದು ಹೆದರಿಸಿದ್ದಾರೆ. ಹೆದರಿಕೆಗೆ ಬಗ್ಗದ ನಿರನ್‌ ಹಣ ಬೇಕೆಂದು ಹಠ ಹಿಡಿದಿದ್ದಾನೆ. ಇದರಿಂದ ಮತ್ತಷ್ಟು ಕೋಪಗೊಂಡ ಚಿಟ್ಟಿಯಪ್ಪ ಸಂಜೆ 4 ಗಂಟೆ ವೇಳೆಗೆ ಮಗನ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್‌ ರಾಜನ್ ಭೇಟಿ ಪರಿಶೀಲನೆ ನಡೆಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *